ಮುಂಬೈ

ಮುಂದಿನ ವರ್ಷ ವಿವಾಹವಾಗುವೆ, ಮಿಕಾ ಸಿಂಗ್ ಹೊಸ ಬಾಂಬ್

Pinterest LinkedIn Tumblr

mika-singh-webಮುಂಬೈ: ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುತ್ತಿದ್ದ ಬಾಲಿವುಡ್ ಗಾಯಕ ಮಿಕಾ ಸಿಂಗ್ ಇದೀಗ ತಮ್ಮ ವಿವಾಹದ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಅದೇನೆಂದರೇ ಮುಂದಿನ ವರ್ಷ ಮದುವೆಯಾಗುವೆ ಎಂಬ ಘೊಷಣೆ.

38ರ ಹರೆಯದ ಪಾಪ್ ಗಾಯಕ ಹಿಂದಿವಾಹಿನಿಯ ಸಂಗೀತ ಕಾರ್ಯಕ್ರಮದಲ್ಲಿ ಮೆಂಟರ್ ಆಗಿ ಸದ್ಯ ಕಾರ್ಯನಿರ್ವಹಿಸುತ್ತಿ್ತ್ದಾರೆ. ವಿಶೇಷ ವೆಡ್ಡಿಂಗ್ ಸಂಚಿಕೆಯಲ್ಲಿ ಮಾತನಾಡಿದ ಮಿಕಾ, ಈ ಸಂದರ್ಭ ನನ್ನ ವಿವಾಹದ ಕುರಿತು ಸ್ಪಷ್ಟಪಡಿಸಲು ಸೂಕ್ತ ಕಾಲ. ಮುಂದಿನ ವರ್ಷ ವಿವಾಹವಾಗುವುದಾಗಿ ಈಗಾಗಲೇ ನಿರ್ಧರಿಸಿರುವೆ. ನನ್ನ ಅಭಿರುಚಿಗೆ ತಕ್ಕ ಹುಡುಗಿ ಸಿಗುತ್ತಾಳೆ ಎಂಬ ಭರವಸೆಯಲ್ಲಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಹ ಮೆಂಟರ್ಗಳಾದ ಸಾಜಿದ್-ವಾಜಿದ್, ಪ್ರೀತಂ ಚಕ್ರವರ್ತಿ ಉಪಸ್ಥಿತರಿದ್ದರು. 2006ರಲ್ಲಿ ಮಿಕಾ ತಮ್ಮ 29ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಾಲಿವುಡ್ ನಟಿ ರಾಕಿ ಸಾವಂತ್ಗೆ ಮುತ್ತಿಕ್ಕಿ ಸುದ್ದಿಯಾಗಿದ್ದರು. ಇನ್ನು 2014ರಲ್ಲಿ ಗುದ್ದೋಡು ಪ್ರಕರಣದಲ್ಲಿ ಈ ಗಾಯಕನ ಹೆಸರು ಕೇಳಿ ಬಂದಿತ್ತು.

Comments are closed.