ಮುಂಬೈ

ತುಂಡುಡುಗೆ ತೊಟ್ಟಿದ್ದಕ್ಕೆ ಯುವತಿ ಮೇಲೆ ಪುಂಡರ ಗುಂಪಿನಿಂದ ಹಲ್ಲೆ

Pinterest LinkedIn Tumblr

pune--short-dress

ಪುಣೆ: “ಇಷ್ಟು ಚಿಕ್ಕ ಡ್ರೆಸ್ ಧರಿಸಿ, ಇಬ್ಬರು ಗಂಡಸರೊಂದಿಗೆ ಅದ್ಹೇಗೆ ಸುತ್ತುತ್ತಿ? ಪುಣೆಯಲ್ಲಿ ಇದಕ್ಕೆಲ್ಲಾ ಅನುಮತಿ ನೀಡುವುದಿಲ್ಲ ಹೀಗೆಂದು ಬೆದರಿಸಿ 22ರ ಹರೆಯದ ಯುವತಿಯನ್ನು ಕಾರಿನಿಂದ ಎಳೆದು ಹಲ್ಲೆ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ.

ಮೇ 1ನೇ ತಾರೀಖಿನಂದು ಯುವತಿ ತಮ್ಮ ಗೆಳತಿಯ ಮದುವೆಯ ಸಂಗೀತ್ ರಿಹರ್ಸಲ್ ಮುಗಿಸಿ ಮುಂಜಾನೆ 5.30ರ ಹೊತ್ತಿಗೆ ಲುಲ್ಲಾನಗರ್ ಮೈನ್ ಸಿಗ್ನಲ್ ದಾರಿಯಾಗಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಾರಿನ ಕಿಟಕಿ ಗಾಜು ಟಿಂಟೆಡ್ ಆಗಿದ್ದರೂ, ಒಳಗೆ ಇಣುಕಿದ ಪುಂಡರ ಗುಂಪೊಂದು ಅಸಭ್ಯ ಭಾಷೆಯಲ್ಲಿ ಈ ಯುವತಿ ಮತ್ತು ಆಕೆಯ ಗೆಳೆಯರನ್ನು ನಿಂದಿಸಿದ್ದಾರೆ.

ಯುವತಿ ಆಕೆಯ ಮನೆಯ ದಾರಿ ಹಿಡಿದರೂ ಆಕೆಯನ್ನೇ ಫಾಲೋ ಮಾಡಿಕೊಂಡು ಈ ಪುಂಡರ ಗುಂಪು ಬಂದಿದೆ. ಜತೆಗಿದ್ದ ಗೆಳೆಯ ಆ ಗುಂಪನಲ್ಲಿದ್ದ ಯುವಕರನ್ನು ವಾಪಸ್ ಬೈದಾಗ ಆ ಯುವಕರು ಕಾರಲ್ಲಿದ್ದ ಯುವತಿಯನ್ನು ಹೊರಗೆಳೆದು ಆಕೆಯ ಮೇಲೆ ಹಲ್ಲೆ ಗೈದಿದ್ದಾರೆ.

ತಕ್ಷಣವೇ ಯುವತಿ 100 ನಂಬರ್ ಡಯಲ್ ಮಾಡಿದರೂ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಸುಮಾರು ಒಂದು ಗಂಟೆಗಳ ನಂತರ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ದೂರು ದಾಖಲಿಸಿದ್ದಾರೆ.

ಯುವತಿಗೆ ಹಲ್ಲೆ ಮಾಡಿದ ಆರೋಪದಲ್ಲಿ ಅಮಿತ್ ಮುಖೇದ್ಕರ್ ಮತ್ತು ಶುಭಂ ಗುಪ್ತಾ ಎಂಬವರನ್ನು ಬಂಧಿಸಿದ್ದು, ಇನ್ನುಳಿದವರಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Write A Comment