ಮುಂಬೈ

11 ಅಣೆಕಟ್ಟುಗಳ ಪೈಕಿ 7ರಲ್ಲಿ ನೀರೇ ಇಲ್ಲ

Pinterest LinkedIn Tumblr

yghguygyಮುಂಬೈ(ಪಿಟಿಐ): ಭೀಕರ ಬರ ಎದುರಿಸುತ್ತಿರುವ ಮಹಾರಾಷ್ಟ್ರದ 11 ಪ್ರಮುಖ ಅಣೆಕಟ್ಟುಗಳ ಪೈಕಿ ಏಳರಲ್ಲಿ ನೀರಿಲ್ಲ.
ಏಪ್ರಿಲ್ 15ಕ್ಕೆ ಕೊನೆಗೊಂಡಂತೆ ಜಲಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಮರಾಠವಾಡ ಪ್ರದೇಶದಲ್ಲಿರುವ ಒಟ್ಟು 814 ಯೋಜನೆಗಳಲ್ಲಿ ಕೇವಲ ಶೇಕಡ 3ರಷ್ಟು ಮಾತ್ರವೇ ನೀರಿದೆ. ದೊಡ್ಡ, ಮಧ್ಯಮ ಹಾಗೂ ಚಿಕ್ಕ ನೀರಾವರಿ ಯೋಜನೆಗಳು ಇದರಲ್ಲಿ ಸೇರಿವೆ.

ಮರಾಠವಾಡ ಪ್ರದೇಶದಲ್ಲಿರುವ ಪ್ರಮುಖ ಏಳು –ಜಯಕವಾಡಿ, ಪುರ್ನಾ ಸಿದ್ದೇಶ್ವರ, ಮಜಲಗಾಂವ್, ಮಂಜ್ರಾ, ಕೆಳ ತೆರ್ನಾ, ಮನ್ನಾರ್ ಹಾಗೂ ಸಿನಾ ಕಾಳೆಗಾಂವ್ – ನೀರಾವರಿ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ‘ಶೂನ್ಯ’ವಾಗಿದೆ.

ಮರಾಠಾವಾಡ ಭಾಗದ 75 ಕಿರು ನೀರಾವರಿ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಶೇಕಡ 4ರಷ್ಟಿದೆ. ಇನ್ನುಳಿದ 728 ಕಿರು ಅಣೆಕಟ್ಟುಗಳಲ್ಲಿ ಶೇ 3ರಷ್ಟು ನೀರಿನ ಸಂಗ್ರಹವಿದೆ ಎಂದು ಅಂಕಿಅಂಶಗಳಿಂದ ತಿಳಿದು ಬಂದಿದೆ.

Write A Comment