ಮುಂಬೈ

ಪ್ರತ್ಯೂಷ ಆತ್ಮಹತ್ಯೆ ಪ್ರಕರಣ: ಕೇಸ್ ಕೈ ಬಿಟ್ಟ ರಾಹುಲ್ ಪರ ವಾದ ಮಂಡಿಸುತ್ತಿದ್ದ ವಕೀಲ

Pinterest LinkedIn Tumblr

Pratyusha Banerjee and Rahul Raj Singh

ಮುಂಬೈ: ಕಿರುತೆರೆ ನಟಿ ಪ್ರತ್ಯೂಷ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ರಾಹುಲ್ ಪರವಾಗಿ ವಾದ ಮಂಡಿಸುತ್ತಿದ್ದ ವಕೀಲ ನೀರಜ್ ಗುಪ್ತಾ ಅವರು ಇದ್ದಕ್ಕಿದ್ದಂತೆ ಪ್ರಕರಣವನ್ನು ಕೈ ಬಿಟ್ಟಿದ್ದಾರೆಂದು ತಿಳಿದುಬಂದಿದೆ.

ಪ್ರತ್ಯೂಷ ಅವರ ಮೃತದೇಹ ಏ.1 ರಂದು ನೇಣಿಗೆ ಶರಣಾಗಿರುವ ರೀತಿಯಲ್ಲಿ ಪತ್ತೆಯಾಗಿತ್ತು. ಪ್ರತ್ಯೂಷ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಕುರಿತಂತೆ ಸಾಕಷ್ಟು ಅನುಮಾನಗಳು ಮೂಡಿದ್ದವು. ಅಲ್ಲದೆ ಪ್ರತ್ಯೂಷಳನ್ನು ಹತ್ತಿರದಲ್ಲಿ ನೋಡಿದವರು ರಾಹುಲ್ ನತ್ತ ಬೆರಳು ಮಾಡಿದ್ದರು.

ಹೀಗಾಗಿ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಪೊಲೀಸರು ರಾಹುಲ್ ನನ್ನು ಬಂಧನಕ್ಕೊಳಪಡಿಸಿದ್ದರು. ರಾಹುಲ್ ಪರವಾಗಿ ವಕೀಲ ನೀರಜ್ ಗುಪ್ತಾ ಅವರು ವಾದ ಮಂಡಿಸುತ್ತಿದ್ದರು. ಆದರೆ, ಆದಾವ ಕಾರಣಕ್ಕೋ ಏನೋ ಇದೀಗ ಪ್ರಕರಣವನ್ನು ಕೈಬಿಟ್ಟಿದ್ದಾರೆಂದು ತಿಳಿದುಬಂದಿದೆ.

ಪ್ರಸ್ತುತ ನಟ ರಾಹುಲ್ ಅವರು ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಮುಂಬೈ ನ ದಿನ್ದೋಶಿ ನ್ಯಾಯಾಲಯದ ಬಳಿ ಅರ್ಜಿ ಸಲ್ಲಿಸಿದ್ದಾರೆಂದು ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ್ದ ಪ್ರತ್ಯೂಷ ತಾಯಿ, ಕಂದಿವಲ್ಲಿಯಲ್ಲಿ ಫ್ಲ್ಯಾಟ್ ನಲ್ಲಿ ಪ್ರತ್ಯೂಷಳೊಂದಿಗೆ ಜೀವನ ನಡೆಸುತ್ತಿದ್ದೆ. ರಾಹುಲ್ ಹಾಗೂ ಪ್ರತ್ಯೂಷ ಪ್ರತೀ ದಿನ ಜಗಳವಾಡುತ್ತಿದ್ದರು. ಇದಾದ ಬಳಿಕ ಇಬ್ಬರು ಜಗಳ ವಾಡದೆ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಗಮನ ಹರಿಸುವಂತೆ ಹೇಳಿ ಊರಿಗೆ ಹೊರಟು ಹೋಗಿದ್ದೆ. ನಂತರ ಪ್ರತ್ಯೂಷ ಹಾಗೂ ರಾಹುಲ್ ಫ್ಲ್ಯಾಟ್ ನಲ್ಲಿ ಜೀವನ ನಡೆಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

Write A Comment