ಮುಂಬೈ

2005ಕ್ಕಿಂತ ಹಿಂದಿನ ನೋಟುಗಳ ವಿನಿಮಯಕ್ಕೆ ಜೂನ್ 30 ಕೊನೆ ದಿನ

Pinterest LinkedIn Tumblr

noteಮುಂಬೈ, ಡಿ.24-ಐದುನೂರು, ಸಾವಿರ ರೂ. ಮುಖಬೆಲೆಯ ನೋಟುಗಳೂ ಸೇರಿದಂತೆ 2005ರ ಹಿಂದಿನ ಮುದ್ರಣದ ಎಲ್ಲಾ ವಿಧದ ಕರೆನ್ಸಿ ನೋಟುಗಳ ವಿನಿಮಯದ ಗಡುವನ್ನು ಮತ್ತೊಮ್ಮೆ ವಿಸ್ತರಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2016ರ ಜೂನ್ 30ರವರೆಗೆ ಕಾಲಾವಕಾಶ ನೀಡಿದೆ.

ದೇಶದಲ್ಲಿ ಖೋಟಾ ನೋಟು ಚಲಾವಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2005ಕ್ಕೂ ಮುಂಚೆ ಮುದ್ರಣಗೊಂಡಿದ್ದ 500 ರೂ. ಹಾಗೂ 1000 ರೂ. ನೋಟುಗಳೂ ಸೇರಿದಂತೆ ಎಲ್ಲಾ ಮೊತ್ತದ ನೋಟುಗಳನ್ನೂ ಬ್ಯಾಂಕಿಗೆ ಹಿಂದಿರುಗಿಸಿ, ಬೇರೆ ನೋಟುಗಳನ್ನು ಗ್ರಾಹಕರು ವಿನಿಮಯ ಮಾಡಿಕೊಳ್ಳಬಹುದು.

ಈ ಮೊದಲು ನೋಟು ವಿನಿಮಯಕ್ಕೆ ಆರ್‌ಬಿಐ 2015ರ ಡಿ.31ರ ಗಡುವು ನೀಡಿತ್ತು.

Write A Comment