ಮುಂಬೈ

ಸಲಿಂಗಕಾಮ: ಸೆಕ್ಷನ್ 377 ರ ಬಗ್ಗೆ ಸಂಸತ್ ನಲ್ಲಿ ಚರ್ಚೆಗೆ ಆಗ್ರಹ

Pinterest LinkedIn Tumblr

LGBT

ನವದೆಹಲಿ: ಐಪಿಸಿ ಸೆಕ್ಷನ್ 377 ರ ಬಗ್ಗೆ ಸಂಸತ್ ನಲ್ಲಿ ಚರ್ಚೆ ನಡೆಸಬೇಕು ಎಂದು ಎಲ್ ಜಿ ಬಿ ಟಿ ಸಮುದಾಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಸಲಿಂಗಕಾಮಕ್ಕೆ ಸಂಬಂಧಿಸಿದ ಸೆಕ್ಷನ್ 377 ನ್ನು ರದ್ದುಗೊಳಿಸಬೇಕು, ಈ ಬಗ್ಗೆ ಸಂಸತ್ ನಲ್ಲಿ ಚರ್ಚೆ ನಡೆಯಬೇಕು ಎಂದು ಟ್ರಾನ್ಸ್ ಜೆಂಡರ್(ತೃತೀಯ ಲಿಂಗ) ಹಕ್ಕುಗಳ ಕಾರ್ಯಕರ್ತರಾದ ಲಕ್ಷ್ಮಿ ತ್ರಿಪಾಟಿ ಹೇಳಿದ್ದಾರೆ. ನೈತಿಕತೆ ಮೌಲ್ಯದ ಆಧಾರದಲ್ಲಿ ಸೆಕ್ಷನ್ 377 ರ ಬಗ್ಗೆ ಚರ್ಚೆ ನಡೆಯಬಾರದು ಅದನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಬೇಕು ಎಂದು ತ್ರಿಪಾಟಿ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸಚಿವ ಅರುಣ್ ಜೇಟ್ಲಿ ಸೆಕ್ಷನ್ 377 ರದ್ದತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಸೆಕ್ಷನ್ ನ್ನು ಕೇಂದ್ರ ಸರ್ಕಾರವೇ ಪುನರ್ ಪರಿಶೀಲಿಸಬೇಕೆಂದು ಹೇಳಿದೆ. ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಎಲ್ ಜಿ ಬಿ ಟಿ ಸಮುದಾಯದ ಸ್ವಾತಂತ್ರ್ಯದೊಂದಿಗೆ ಆಟವಾಡಬಾರದು. ಸಲಿಂಗ ಕಾಮಕ್ಕೆ ಸಂಬಂಧಿಸಿದಂತೆ ಸರ್ಕಾರ ಕಾನೂನು ಮಾಡಿದರೆ ನಮಗೆ ಸಮಸ್ಯೆ ಇಲ್ಲ. ಆದರೆ ಸರ್ಕಾರ ಈ ಬಗ್ಗೆ ಯಾವುದಾದರು ಒಂದು ನಿರ್ಧಾರ ಕೈಗೊಳ್ಳಬೇಕಿದೆಎಂದು ಮನವಿ ಎಲ್ ಜಿ ಬಿ ಟಿ ಸಮುದಾಯ ಮನವಿ ಮಾಡಿದೆ.

Write A Comment