ಮುಂಬೈ

ಶೀನಾ ಬೋರಾ ಪ್ರಕರಣ: ಇಂದ್ರಾಣಿಗೆ ರಾಹುಲ್ ಮುಖರ್ಜಿ ಇಷ್ಟವಿರಲಿಲ್ಲ

Pinterest LinkedIn Tumblr

18Indrani-Boraಮುಂಬೈ: ಇಂದ್ರಾಣಿ ಮುಖರ್ಜಿಗೆ ರಾಹುಲ್ ಮುಖರ್ಜಿಯೆಂದರೆ ಸ್ವಲ್ಪವೂ ಇಷ್ಟವಿರಲಿಲ್ಲ ಎಂದು ಸಿಬಿಐ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ದಾಖಲಿಸಿದ್ದಾರೆ.

ಈ ಕುರಿತಂತೆ ಸ್ವತಃ ಇಂದ್ರಾಣಿ ಮುಖರ್ಜಿಯವರೇ ಶೀನಾ ಹತ್ಯೆಯಾದ 2 ವರ್ಷದ ಬಳಿಕ ಪತಿ ಪೀಟರ್ ಮುಖರ್ಜಿಯವರಿಗೆ ಮೇಲ್ ಒಂದನ್ನು ಮಾಡಿದ್ದು, ಮೇಲ್ ಸಂದೇಶದಲ್ಲಿ ಅಣ್ಣ ರಾಬಿನ್ ಗೆ ಕರೆ ಮಾಡಬೇಡ, ಮೇಲ್ ಮಾಡಬೇಡ ಹಾಗೂ ಸಂದೇಶ ಕಳುಹಿಸಬೇಡ ಎಂದು ನಾನು ಹೇಳಿದ್ದೇನೆಂಬ ಮಾತು ನನಗೆ ನೆನಪಾಗುತ್ತಿಲ್ಲ. ಈ ಬಗ್ಗೆ ನಾನು ಆಲೋಚನೆಯನ್ನೂ ಮಾಡಿಲ್ಲ. ನಿನಗೆ ಈ ರೀತಿಯ ಆಲೋಚನೆ ಏಕೆ ಬಂದಿತು ಎಂಬುದು ನನಗೆ ನಿಜಕ್ಕೂ ಆಶ್ಚರ್ಯವಾಗುತ್ತಿದೆ. ರಾಬಿನ್ ಎಂದಿಗೂ ರಾಹಲ್ ಹಾಗೆ ಕೆಳ ಹಂತಕ್ಕೆ ಇಳಿದಿಲ್ಲ. ಇದೀಗ ಸಂಪರ್ಕದಲ್ಲಿಲ್ಲ ಎಂಬುದರ ಕುರಿತಂತೆ ಯಾರು ಮಾತನಾಡುತ್ತಿದ್ದಾರೆ ಮತ್ತು ಯಾಕೆ ಮಾತನಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾಳೆಂದು ಸಿಬಿಐ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ದಾಖಲಿಸಿದ್ದಾರೆ.

ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ ಸಿಬಿಐ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಶೀನಾ ಮತ್ತು ರಾಹುಲ್ ಸಂಬಂಧವನ್ನು ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಇವರಿಬ್ಬರ ಸಂಬಂಧ ಪೀಟರ್ ಹಾಗೂ ಇಂದ್ರಾಣಿ ಮುಖರ್ಜಿಯವರಿಗೆ ಇಷ್ಟವಿರಲಿಲ್ಲ. 2012ರ ಏಪ್ರಿಲ್ ತಿಂಗಳಿನಲ್ಲಿ ಶೀನಾ ಕಣ್ಮರೆಯಾಗಿರುವುದು ರಾಹುಲ್ ಗೆ ಹಲವು ಅನುಮಾನಗಳನ್ನುಂಟು ಮಾಡಿತ್ತು. ಈ ಬಗ್ಗೆ ತಲೆಕೆಡಿಸಿಕೊಂಡಿದ್ದ ರಾಹುಲ್ 2012ರ ಮೇ ತಿಂಗಳಲ್ಲಿನ ಪೀಟರ್ ಎಚ್ಚರಿಕೆ ಸಂದೇಶವೊಂದನ್ನು ಮೇಲ್ ಮಾಡಿ ಶೀನಾ ಕಣ್ಮರೆ ಕುರಿತಂತೆ ಅನುಮಾನ ವ್ಯಕ್ತಪಡಿಸಿದ್ದಾನೆ.

ಕಾರಿನಲ್ಲಿ ಹೋಗುತ್ತಿದ್ದ ವೇಳೆ ಶೀನಾ (24)ಳನ್ನು ಚೂರಿನಲ್ಲಿ ಇರಿದು ನಂತರ ಆಕೆಯ ದೇಹವನ್ನು ರಾಜ್ ಘಡ್ ನಲ್ಲಿರುವ ಅರಣ್ಯವೊಂದರಲ್ಲಿ ಸುಟ್ಟು ಹಾಕಲಾಗಿತ್ತು. ಪ್ರಕರಣ ಸಂಬಂಧ ಇಂದ್ರಾಣಿ ಮುಖರ್ಜಿಯವರ ಮಾಜಿ ಪತಿ ಸಂಜೀವ್ ಖನ್ನಾ ಹಾಗೂ ಮಾಜಿ ಕಾರು ಚಾಲಕ ಶ್ಯಾಮ್ವಾರ್ ರೈ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಸಿಬಿಐ ಆಧಿಕಾರಿಗಳು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ನ್ನು ಸಲ್ಲಿಸಿದ್ದಾರೆ. ಶೀನಾ ಹತ್ಯೆ ಪ್ರಕರಣ ಸಂಬಂಧ ಪೀಟರ್ ಮುಖರ್ಜಿಯವರನ್ನು ಇತ್ತೀಚೆಗಷ್ಟೇ ಸಿಬಿಐ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು.

Write A Comment