ರಾಷ್ಟ್ರೀಯ

ತಂಗ್ದಾರ್ ನಲ್ಲಿ ಉಗ್ರರ ದಾಳಿ; ಓರ್ವ ಯೋಧ, ಮೂವರು ಉಗ್ರರು ಸೇರಿ 4 ಸಾವು

Pinterest LinkedIn Tumblr

17jammu-kashmir-tangdharಶ್ರೀನಗರ: ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ ಬುಧವಾರ ಉಗ್ರರು ದಾಳಿ ನಡೆಸಿದ್ದು, ಓರ್ವ ಯೋಧ, ಮೂವರು ಉಗ್ರರು ಸೇರಿದಂತೆ 4 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಜಮ್ಮು ಮತ್ತು ಕಾಶ್ಮೀರದ ತಂಗ್ಧಾರ್ ಸೇನಾ ಶಿಬಿರದ ಮೇಲೆ ಎಕೆ 47 ಮತ್ತು ರಾಕೆಟ್ ಲಾಂಚರ್ ಗಳನ್ನು ಹೊಂದಿದ್ದ ಮೂರಕ್ಕೂ ಹೆಚ್ಚು ಮಂದಿ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ  ಭಾರತೀಯ ಯೋಧ ಮತ್ತು ಮತ್ತೋರ್ವ ನಾಗರಿಕ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡಿರುವ ಯೋಧರು ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಸೇನಾಧಿಕಾರಿಗಳು ದೌಡಾಯಿಸಿದ್ದು, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದಾರೆ.

ಮತ್ತೊಂದೆಡೆ ಶಿಬಿರಿದಲ್ಲಿ ಮತ್ತಷ್ಟು ಉಗ್ರರಿರುವ ಸಾಧ್ಯತೆ ಇರುವ ಶಂಕೆ ಇದ್ದು, ಶೋಧ ಕಾರ್ಯ ಆರಂಭಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಥಳೀಯ ನಾಗರಿಕ ಸಾವನ್ನಪ್ಪಿದ್ದಾನೆ ಎಂದು ಸೇನಾ ಮೂಲಗಳು ತಿಳಿಸಿವೆ. ಗುಂಡಿನ ದಾಳಿಗೆ ಸೇನೆಗೆ ಸೇರಿದೆ ಕೆಲ ವಾಹನಗಳು ಜಖಂಗೊಂಡಿದ್ದು, ಯೋಧರು ವಿಶ್ರಮಿಸುವ ಕೊಠಡಿಗಳು ಹಾನಿಗೊಳಗಾಗಿವೆ ಎಂದು ತಿಳಿದುಬಂದಿದೆ.

ಸೇನಾ ಮೂಲಗಳ ಪ್ರಕಾರ ಕಲ್ಸೂರಿ ರಿಡ್ಜ್ ನಲ್ಲಿರುವ ತಂಗ್ಧಾರ್ ಸೆಕ್ಟರ್ ನಲ್ಲಿ ಮುಂಜಾನೆ ಈ ದಾಳಿ ನಡೆಸಿದ್ದು, ಸೇನೆ ಮತ್ತು ಉಗ್ರರ ನಡುವೆ ಗುಂಡಿನ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.  ತಂಗ್ಧಾರ್ ಸೆಕ್ಟರ್ ಕುಪ್ವಾರ ಜಿಲ್ಲೆಗೆ ಅತ್ಯಂತ ಸಮೀಪದಲ್ಲಿದ್ದು, ಭಾರತದ ಗಡಿಯೊಳಗೆ ನುಸುಳಲು ಇದು ಉತ್ತಮ ದಾರಿಯಾಗಿದೆ ಎಂದು ಉಗ್ರರು ಭಾವಿಸಿದಂತಿದೆ. ಇದೇ ಕಾರಣಕ್ಕೆ ಉಗ್ರರು  ಇಲ್ಲಿ ದಾಳಿ ನಡೆಸಿರಬಹುದು ಸೇನಾಧಿಕಾರಿ ಎಸ್​ಎಸ್​ಪಿ ಅಜಾಜ್ ಅಹಮ್ಮದ್ ತಿಳಿಸಿದ್ದಾರೆ.

ತಗ್ದಾರ್ ಸೆಕ್ಟರ್ ನಲ್ಲಿ ಸುಮಾರು 80 ಯೋಧರು ಇದ್ದು, ಆಯಾ ಪಾಳಿಗೆ ತಕ್ಕಂತೆ ಯೋಧರು ಗಡಿಯಲ್ಲಿ ಪಹರೆ ಕಾಯುತ್ತಿದ್ದರು. ಕುಪ್ವಾರ ಜಿಲ್ಲೆ ಪ್ರವೇಶಕ್ಕೆ ಇದು ಸಮೀಪದ ಮಾರ್ಗವಾದ್ದರಿಂದ ಉಗ್ರರು ಇದನ್ನು ತಮ್ಮ ಗುರಿಯಾಗಿಸಿಕೊಂಡಿದ್ದರು.

Write A Comment