ಮುಂಬೈ

ಹಾಡಹಗಲೇ 29 ವರ್ಷದ ಯುವತಿಯ ಮೇಲೆ ವೀರ್ಯ ಎಸೆದು ಪರಾರಿಯಾದ ಆರೋಪಿಗಳು

Pinterest LinkedIn Tumblr

viಮುಂಬೈ,: ಮುಂಬೈನ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 29 ವರ್ಷ ವಯಸ್ಸಿನ ಮೆಹಕ್ ಸಬಾತ್ ಎನ್ನುವ ಮಹಿಳೆಗೆ ಆಘಾತಕಾರಿ ಅನುಭವವಾಗಿದೆ. ಹಾಡಹಗಲೇ ಕೆಲ ಕಿಡಿಗೇಡಿಗಳು ಆಕೆಯ ಮೇಲೆ ವೀರ್ಯ ಎಸೆದು ಪರಾರಿಯಾಗಿದ್ದಾರೆ.

ಮೆಹಕ್ ಸಬಾತ್, ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿರುವಾಗ ತನ್ನ ಕಾಲ ಮೇಲೆ ನೀರು ಬಿದ್ದಂತಹ ಅನುಭವವಾಗಿದೆ. ನೀರು ಬಿದ್ದಿರಬಹುದು ಎಂದು ಭಾವಿಸುತ್ತಿರುವಾಗಲೇ ಸೂಕ್ಷ್ಮವಾಗಿ ನೋಡಿದಾಗ ಅದು ಪುರುಷರ ವೀರ್ಯ ಎನ್ನುವುದು ಖಚಿತವಾಗಿದೆ.

ತನ್ನ ಮೇಲೆ ವೀರ್ಯ ಎಸೆದವರು ಯಾರಿರಬಹುದು ಎಂದು ತಿರುಗಿ ನೋಡಿದಾಗ ಆದಾಗಲೇ ಆರೋಪಿಗಳು ಪರಾರಿಯಾಗಿದ್ದರು. ಇದರಿಂದ ಆಕ್ರೋಶಗೊಂಡ ಸಬತ್, ಟ್ವಿಟ್ಟರ್‌ನಲ್ಲಿ ಘಟನೆಯ ಬಗ್ಗೆ ಕಿಡಿಕಾರಿ ಸಂದೇಶ ಪೋಸ್ಟ್ ಮಾಡಿದ್ದಾಳೆ. ಆದರೆ, ಪೊಲೀಸರಿಗೆ ದೂರು ನೀಡಲು ನಿರಾಕರಿಸಿದ್ದಾಳೆ.

ಇಂತಹ ಘಟನೆ ಕೇವಲ ಮೆಹಕ್ ಸಬತ್‌ಗೆ ಮಾತ್ರ ನಡೆದಿಲ್ಲ. ಇಂತಹ ಅನೇಕ ಘಟನೆಗಳು ಪ್ರತಿನಿತ್ಯ ನಡೆಯುತ್ತಿವೆ. ಆದರೆ, ಇಂತಹ ಪ್ರಕರಣಗಳನ್ನು ಗಂಬೀರವಾಗಿ ಪರಿಗಣಿಸಲಾಗುತ್ತಿಲ್ಲ ಎನ್ನುವುದು ವಿಷಾದದ ಸಂಗತಿಯಾಗಿದೆ ಎಂದು ಮಹಿಳಾ ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ.

Write A Comment