ಮನೋರಂಜನೆ

ಮುಂಬೈ ಪ್ರಾದೇಶಿಕ ರೈಲಿನಲ್ಲಿ ಹಾಡಿದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ! ಏಕೆ ಇರಬಹುದು…? ಇಲ್ಲಿದೆ ಓದಿ…

Pinterest LinkedIn Tumblr

AMITABH-MUMBAILOCAL

ಮುಂಬೈ: ಕ್ಯಾನ್ಸರ್ ರೋಗಿಗಳ ಧನಸಹಾಯಕ್ಕೆ ದೇಣಿಗೆ ಎತ್ತಲು ಮುಂಬೈ ಪ್ರಾದೇಶಿಕ ರೈಲಿನಲ್ಲಿ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹಾಡುತ್ತಿದ್ದುದು ಕಂಡುಬಂದಿದೆ.

AMITABH-MUMBAILOCAL1

ಚ್ಯಾರಿಟಿಗಾಗಿ ಹಾಡುವ ಗಾಯಕ ಸೌರಭ್ ನಿಂಬ್ಕರ್ ಜೊತೆಗೆ 73 ವರ್ಷದ ನಟ ಅಮಿತಾಬ್ ಕಾಣಿಸಿಕೊಂಡದ್ದು ವಿಶೇಷವಾಗಿತ್ತು.”ಕ್ಯಾನ್ಸರ್ ಚ್ಯಾರಿಟಿಗೆ ಹಾಡುವ ಸೌರಭ್.. ವಿಕ್ಟೋರಿಯಾ ಟರ್ಮಿನಸ್ ನಿಂದ ಭಂಡುಫ್ ವರೆಗೆ, ಅವರ ಜೊತೆಗೆ ಹಾಡಿದೆ” ಎಂದು ‘ಪಾ’ ನಟ ಭಾನುವಾರ ಟ್ವೀಟ್ ಮಾಡಿದ್ದಾರೆ.

ನಿಂಬ್ಕರ್ ಅವರು ಸಂಗ್ರಹಿಸುವ ಹಣವನ್ನು ಬಡ ಕ್ಯಾನ್ಸರ್ ರೋಗಿಗಳಿಗೆ ಹಂಚುತ್ತಾರೆ ಎಂದು ಬ್ಲಾಗ್ ಮಾಡಿರುವ ಬಿಗ್ ಬಿ, ಆಜ್ ಕಿ ರಾತ್ ಜಿಂದಗಿ ಎಂಬ ಟಿವಿ ಕಾರ್ಯಕ್ರಮದ ಬಗ್ಗೆ ತಿಳಿಸಿದ್ದಾರೆ. ಬೆಂಬಲಿಸಲು ರೈಲಿಗೆ ಬಂದ ಬಿಗ್ ಬಿ ಯನ್ನು ನೋಡಿ ನಿಂಬ್ಕರ್ ಅವರಿಗೆ ಆಶ್ಚರ್ಯಸಹಿತ ಖುಷಿಯಾಯಿತಂತೆ.

Write A Comment