ಮುಂಬೈ

ಛೋಟಾ ರಾಜನ್ ಕೇಸ್‌ಗಳು ಸಿಬಿಐಗೆ ವರ್ಗಾವಣೆ: ಫಡ್ನವಿಸ್

Pinterest LinkedIn Tumblr

rajanಮುಂಬೈ: ಮುಂಬೈ ಪೊಲೀಸರ ಸಲಹೆ ಮೇರಗೆ ಭೂಗತ ಪಾತಕಿ ಛೋಟಾ ರಾಜನ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಹೇಳಿದ್ದಾರೆ.

ಕೆಲವು ಮುಂಬೈ ಪೊಲೀಸ್ ಅಧಿಕಾರಿಗಳು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಕೈಜೋಡಿಸಿದ್ದಾರೆ ಎಂಬ ಛೋಟಾ ರಾಜನ್ ಆರೋಪದ ಹಿನ್ನೆಲೆಯಲ್ಲಿ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗುತ್ತಿದೆ ಎಂಬುದನ್ನು ತಳ್ಳಿಹಾಕಿದ ಮಹಾ ಸಿಎಂ, ಆತನ ಹೇಳಿಕೆಗೆ ನಾವು ಮಹತ್ವ ಕೊಡುವುದಿಲ್ಲ. ನಮ್ಮ ನಿರ್ಧಾರಕ್ಕೂ ಛೋಟಾ ರಾಜನ್ ಹೇಳಿಕೆಗೂ ಸಂಬಂಧವಿಲ್ಲ ಎಂದಿದ್ದಾರೆ.

ಈ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ ನಾವು ಮುಂಬೈ ಪೊಲೀಸ್ ಆಯುಕ್ತ ಜಾವೇದ್ ಅಹ್ಮದ್ ಸೇರಿದಂತೆ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದೆ. ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಪ್ರಕರಣವನ್ನು ಸಿಬಿಐ ವರ್ಗಾಯಿಸುವಂತೆ ಸಲಹೆ ನೀಡಿದರು ಎಂದು ಫಡ್ನವಿಸ್ ತಿಳಿಸಿದರು.

ಕಳೆದ ಎರಡು ದಶಕಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಭೂಗತ ಪಾತಕಿ ಛೋಟಾ ರಾಜನ್‌ನನ್ನು ಅಕ್ಟೋಬರ್ 25ರಂದು ಇಂಡೋನೇಷ್ಯಾ ಪೊಲೀಸರು ಬಂಧಿಸಿದ್ದು, ಸದ್ಯ ಸಿಬಿಐ ವಶದಲ್ಲಿದ್ದಾನೆ.

Write A Comment