ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಮತ್ತು ಅವಿಭಾಜಿತ ದ.ಕ.ಜಿಲ್ಲೆಯ ಪ್ರಸಿದ್ಧ ದೃಶ್ಯ ಮಾಧ್ಯಮ ನಮ್ಮ ಟಿ.ವಿ. ಆಶ್ರಯದಲ್ಲಿ ಅ.24 ರ ಶನಿವಾರ ಬಂಟರ ಭವನದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ ಬಲೆ ತೆಲಿಪುಲೆ-2015 ಸ್ಪರ್ಧೆಯನ್ನು ಅಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಜ್ಯೋತಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ನೆರೆದ ಬಂಧುಗಳನ್ನು ಉದ್ದೇಶಿಸಿ ಮಾತನಾಡಿ, ಸಂಘದ 9 ಪ್ರಾದೇಶಿಕ ಸಮಿತಿ ಎಲ್ಲಾ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದೆ. ವಿಶ್ವ ಪ್ರಸಿದ್ಧಿ ಪಡೆದ ಬಲೆ ತೆಲಿಪುಲೆ ಕಾರ್ಯಕ್ರಮದ ಮೂಲಕ ನಿರಂತರ ಬದುಕಿನಲ್ಲಿ ನಗುವನ್ನು ರೂಪಿಸಿಕೊಳ್ಳುವಂತಾಗಲು ಈ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದ್ದೇವೆ. ನಗು ಆರೋಗ್ಯದ ಔಷಧಿ ಎಂದು ನುಡಿದರು.
ವೇದಿಕೆಯಲ್ಲಿ ಭವಾನಿ ಶಿಪ್ಪಿಂಗ್ ನ ಮಾಲಕ ಕೆ.ಡಿ.ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಅಶೋಕ್ ಇಂಡಸ್ಟ್ರೀಸ್ ನ ಮಾಲಕ ಪೆರ್ಮುದೆ ಅಶೋಕ್ ಆರ್.ಶೆಟ್ಟಿ, ಪೆರ್ಣಂಕಿಲ ಹರಿದಾಸ್ ಭಟ್, ಚಂದ್ರಹಾಸ್ ಎಂ.ರೈ. ಬೊಳ್ನಾಡುಗುತ್ತು, ಅರುಣ್ ರೈ. ಮೀರಾರೋಡ್, ಸಿನೆಮಾ ನಟಿ ಆವಂತಿಕಾ ಶೆಟ್ಟಿ, ನಮ್ಮ ಟಿ.ವಿ.ಸಿಎಂಡಿ ಶಿವಚರಣ್ ಶೆಟ್ಟಿ ಉಪಸ್ಥಿತರಿದ್ದರು. ಚಂದನದಲ್ಲಿ ಪ್ರಸಾರವಾಗುವ ಕೋಟಿ- ಚೆನ್ನಯ ಚಿತ್ರದ ನಿರ್ಮಾಪಕ ಚೆಲ್ಲಡ್ಕ ಚಂದ್ರಹಾಸ್ ಆಳ್ವ ದಂಪತಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ, ಸಂಘದ ಉಪಾಧ್ಯಕ್ಷ ಪ್ರಭಾಕರ್ ಎಲ್.ಶೆಟ್ಟಿ, ಗೌ.ಪ್ರ.ಕಾರ್ಯದರ್ಶಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್ ಎಸ್. ಶೆಟ್ಟಿ, ಗುರುಕಿರಣ್, ಡಾ.ಶಿವಚರಣ್, ಜ್ನಾನ ಮಂದಿರ ಸಮಿತಿ ಕಾರ್ಯಾಧ್ಯಕ್ಷ ಬೊಳ್ನಾಡುಗುತ್ತು ಚಂದ್ರಹಾಸ್. ಎಂ.ರೈ., ಮಾತೃಭೂಮಿ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ವಸಾಯಿ- ಡಹಾಣು ಪ್ರಾದೇಶಿಕ ಸಮಿತಿ ಸಮನ್ವಯಕ ಕರ್ನಿರೆ ಶ್ರೀಧರ ಶೆಟ್ಟಿ, ಬಂಟರವಾಣಿಯ ಗೌ.ಪ್ರ. ಸಂಪಾದಕ ಅಶೋಕ್ ಪಕ್ಕಳ, ಕುರ್ಲಾ- ಭಾಂಡುಪ್ ಪ್ರಾದೇಶಿಕ ಕಾರ್ಯಾಧ್ಯಕ್ಷ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ಸಿಟಿ ಪ್ರಾದೇಶಿಕದ ಸಲಹೆಗಾರ ಕೃಷ್ಣ ವಿ.ಶೆಟ್ಟಿ, ನಲ್ಯಗುತ್ತು ಪ್ರಕಾಶ್ ಶೆಟ್ಟಿ, ಕರ್ನೂರು ಮೋಹನ್ ರೈ, ನಾರಾಯಣ ಶೆಟ್ಟಿ ನಂದಳಿಕೆ, ಸುರೇಶ್ ಶೆಟ್ಟಿ ಪನ್ವೇಲ್ ಮೊದಲಾದವರಿದ್ದರು. ಬಂಟರ ಸಂಘದ 9 ಪ್ರಾದೇಶಿಕ ಸಮಿತಿಗಳಿಗೆ ಸ್ಪರ್ಧೆ ನಡೆಯಿತು.
ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಸ್ವಾಗತಿಸಿದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್
































