ಮುಂಬೈ

ಬಾರ್ ಡ್ಯಾನ್ಸ್ ಮೇಲೆ ಹೇರಲಾಗಿದ್ದ ನಿಷೇಧಕ್ಕೆ ಸುಪ್ರೀಂ ತಡೆ

Pinterest LinkedIn Tumblr

dance-bars

ನವದೆಹಲಿ(ಪಿಟಿಐ): ಬಾರ್ ಡ್ಯಾನ್ಸ್‌ಗೆ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯಡಿ ಹೇರಲಾಗಿದ್ದ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.

ಸುಪ್ರೀಂ ಕೋರ್ಟ್, ನಿಷೇಧಕ್ಕೆ ತಡೆ ನೀಡಿರುವುದರಿಂದ ಮಹಾರಾಷ್ಟ್ರ ರಾಜ್ಯದಾದ್ಯಂತ ಬಾರ್ ಮತ್ತು ಇತರ ಸ್ಥಳಗಳಲ್ಲಿ ಡ್ಯಾನ್ಸ್ ಚಟುವಟಿಕೆಗಳು ಪುನರಾರಂಭವಾಗಲಿವೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಹಾಗೂ ಪ್ರಫುಲ್ಲ ಸಿ. ಪಂತ್‌ ಅವರನ್ನೊಳಗೊಂಡ ನ್ಯಾಯಪೀಠ, ‘ಮಹಾರಾಷ್ಟ್ರ ಪೊಲೀಸ್ ಕಾಯ್ದೆ (ಎರಡನೇ ತಿದ್ದುಪಡಿ) ಸೆಕ್ಷನ್ 33(ಎ)(1)ರ ಅಡಿ ಬಾರ್ ಡ್ಯಾನ್ಸ್ ಮೇಲೆ ಹೇರಲಾಗಿದ್ದ ನಿಷೇಧಕ್ಕೆ ತಡೆ ನೀಡಲಾಗಿದೆ’ ಎಂದು ಹೇಳಿದೆ.

‘ಬಾರ್ ಮತ್ತು ಇತರ ಸ್ಥಳಗಳಲ್ಲಿ ಅಸಭ್ಯ ನೃತ್ಯ ಪ್ರದರ್ಶಿಸುವಂತಿಲ್ಲ. ನೃತ್ಯ ಪ್ರದರ್ಶನಕ್ಕೆ ರಾಜ್ಯದ ಅಧಿಕಾರಿಗಳಿಂದ ಪರವಾನಗಿ ಅವಶ್ಯ. ಮಹಿಳೆಯರ ಘನತೆಗೆ ಹಾನಿಯುಂಟು ಮಾಡಬಾರದು’ ಎಂದು ಪೀಠ ತನ್ನ ಮಧ್ಯಂತರ ಆದೇಶದಲ್ಲಿ ಹೇಳಿದೆ.

ನಿಷೇಧಕ್ಕೆ ಒತ್ತಾಯ
ಸುಪ್ರೀಂ ಕೋರ್ಟ್ ನೀಡಿರುವ ತಡೆಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು, ರಾಜ್ಯದಲ್ಲಿ ಬಾರ್ ಡ್ಯಾನ್ಸ್ ಮೇಲೆ ಹೇರಿರುವ ನಿಷೇಧವನ್ನು ಮುಂದುವರಿಸಬೇಕು ಎಂದು ಸುಪ್ರೀಂ ಕೋರ್ಟ್ ಗೆ ಒತ್ತಾಯಿಸಿದ್ದಾರೆ.

Write A Comment