ಮುಂಬೈ

ಭಯೋತ್ಪಾದಕ ದಾಳಿ ಬೆದರಿಕೆಮುಂಬೈ ವಿಮಾನ ನಿಲ್ದಾಣಗಳು-ತಾಜ್ ಹೋಟೆಲ್‌ಗೆ ಸರ್ಪಗಾವಲು

Pinterest LinkedIn Tumblr

Chhatrapati-Shivaji-Airport-in-Mumbaiಮುಂಬೈ. ಸೆ. 29: ನಿನ್ನೆ ರಾತ್ರಿ ಭಯೋತ್ಪಾದಕ ಬೆದರಿಕೆಯೊಂದು ಬಂದ ಬಳಿಕ ಮುಂಬೈಯ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರದ ಕಾವಲು ಕಾಯಲಾಗುತ್ತಿದೆ.

ಸೋಮವಾರ ತಡ ರಾತ್ರಿ ಕರ್ತವ್ಯದಲ್ಲಿದ್ದ ವಿಮಾನ ನಿಲ್ದಾಣ ಪ್ರಬಂಧಕರಿಗೆ ದೂರವಾಣಿ ಕರೆಯೊಂದು ಬಂದಿತ್ತು. ಅದು, ವಿಮಾನ ನಿಲ್ದಾಣಗಳಲ್ಲಿ ಹಾಗೂ ತಾಜ್ ಹೊಟೇಲ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಬಹುದೆಂದು ಎಚ್ಚರಿಕೆ ನೀಡಿತ್ತೆಂದು ಪೊಲೀಸರು ತಿಳಿಸಿದ್ದಾರೆ.

ವಾಹನಗಳಲ್ಲಿ ಇರಿಸಲಾದ ಸ್ಫೋಟಕಗಳ ಮೂಲಕ ಮೂರು ಸ್ಥಳಗಳಲ್ಲಿ ದಾಳಿ ನಡೆಸುವ ಯೋಜನೆಯ ಬಗ್ಗೆ ತಾನು ಕದ್ದು ಕೇಳಿದೆನೆಂದು ಕರೆ ಮಾಡಿದಾತ ಹೇಳಿದ್ದನೆನ್ನಲಾಗಿದೆ.ಇದೊಂದು ಸುಳ್ಳು ಕರೆಯೆಂದು ಪೊಲೀಸರು ಶಂಕಿಸಿದ್ದಾರೆ.

ಆದರೆ, ಅವರು ಅಪಾಯ ಆಹ್ವಾನಿಸಲು ಸಿದ್ಧರಿಲ್ಲ. ಅದನ್ನೊಂದು ‘ನಿರ್ದಿಷ್ಟ ಬೆದರಿಕೆ’ ಎಂದು ಬಣ್ಣಿಸಲಾಗಿತ್ತು. ಮೂರು ಸ್ಥಳಗಳಲ್ಲಿ ಭಾರಿ ಭದ್ರತೆ ಹಾಗೂ ತಲಾ ಒಂದು ಬಾಂಬ್ ದಳವನ್ನು ನಿಯೋಜಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.ಈ ಮೂರು ಸ್ಥಳಗಳು ಈಗಾಗಲೇ ಭಾರೀ ಭದ್ರತಾ ವಲಯಗಳಾಗಿದ್ದು, ವಿಶೇಷ ಪಡೆಗಳು ಅವುಗಳನ್ನು ಕಾಯುತ್ತಿವೆಯೆಂದು ಮುಂಬೈ ಪೊಲೀಸ್‌ನ ಮೂಲವೊಂದು ಹೇಳಿದೆ.2006ರ ಸರಣಿ ರೈಲು ಸ್ಫೋಟದ 12 ಮಂದಿ ಅಪಾರಾಧಿಗಳಿಗೆ ಬುಧವಾರ ಶಿಕ್ಷೆಯ ಪ್ರಮಾಣ ಘೋಷಣೆಯಾಗಲಿದ್ದು, ಅದಕ್ಕೆ ಒಂದು ದಿನ ಮೊದಲು ಈ ಬೆದರಿಕೆಯ ಕರೆ ಬಂದಿದೆ.

Write A Comment