ಮುಂಬೈ

ಡ್ರಗ್ ಸಾಗಾಟ ಪ್ರಕರಣ: ಮುಂಬೈ ಕ್ರೖಂ ಬ್ರಾಂಚ್ ಐವರು ಪೊಲೀಸರ ಬಂಧನ

Pinterest LinkedIn Tumblr

drug

ಮುಂಬೈ: ಬೇಲಿಯೇ ಎದ್ದು ಹೊಲ ಮೇದ ಪ್ರಕರಣ ಇದು. ಹೌದು, ಡ್ರಗ್ ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನುವ ಆರೋಪದ ಮೇಲೆ ಮುಂಬೈ ಕ್ರೖಂ ಬ್ರಾಂಚ್ ಪೊಲೀಸರು ಹಿರಿಯ ಇನ್ಸ್​ಪೆಕ್ಟರ್ ಸೇರಿ ಐವರು ಪೊಲೀಸರನ್ನು ಬಂಧಿಸಿದ್ದಾರೆ.

ಮಾಜಿ ಕಾನಸ್ಟೆಬಲ್​ಗಳಾದ ಧರ್ಮರಾಜ್ ಕಲೋಖೆ ಮತ್ತು ಶಶಿಕಲಾ ಅಲಿಯಾಸ್ ಬೇಬಿ ಪಠಾಣ್​ಕರ್ ಅವರ ಡ್ರಗ್ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಈ ಐವರನ್ನು ಬಂಧಿಸಲಾಗಿದೆ. ಇನ್ಸ್​ಪೆಕ್ಟರ್ ಸುಹಾಸ್ ಗೋಖಲೆ, ಇನ್ಸ್​ಪೆಕ್ಟರ್ ಗೌತಮ್​ಗಾಯಕ್ವಾಡ್, ಸಬ್ ಇನ್ಸ್​ಪೆಕ್ಟರ್ ಸುಧಾಕರ್ ಸಾರಂಗ್, ಸಹಾಯಕ ಸಬ್ ಇನ್ಸ್​ಪೆಕ್ಟರ್ ಜ್ಯೋತಿರಾಮ್​ವಾನೆ ಮತ್ತು ಹೆಡ್ ಕಾನ್ಸ್​ಸ್ಟೇಬಲ್ ಯಶವಂತ್ ಪರಾಟೆ ಬಂಧನಕ್ಕೊಳಾಗದ ಪೊಲೀಸ್ ಅಧಿಕಾರಿಗಳಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

15ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿ ತಮಿನಾಡು ಮೂಲದ ಪೌಲ್​ರಾಜ್ ದೊರೈಸ್ವಾಮಿ ಅಲಿಯಾಸ್ ಪೌಲ್ ಎನ್ನುವವನನ್ನು ಬಂಧಿಸಲಾಗಿತ್ತು. ಇದೀಗ ಇನ್ನಷ್ಟು ಮಂದಿ ಪೊಲೀಸರನ್ನೇ ಬಂಧಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

114 ಕಿಲೋ ಗ್ರಾಮ್​ವೆುಫೆಡ್ರೋನ್ (ಮಾದಕ ದ್ರವ್ಯ) ಸಾಗಿಸುತ್ತಿರುವ ಮಾಹಿತಿ ಮೇರೆಗೆ ಕಳೆದ ಮಾರ್ಚ್ 9ರಂದು ಕಲೋಖೆಯನ್ನು ಬಂಧಿಸಲಾಗಿತ್ತು. ಸತಾರಾದಲ್ಲಿರುವ ಅವರ ಮನೆಯಲ್ಲೇ ಪತ್ತೆ ಮಾಡಲಾಗಿತ್ತು. ಇನ್ನು 12 ಕೆಜಿಯಷ್ಟು ಇಲ್ಲಿನ ಮೆರೀನ್ ಡ್ರೖೆವ್ ಪೊಲೀಸ್ ಠಾಣೆಯಲ್ಲೇ ಸಿಕ್ಕಿತ್ತು. ಇದೀಗ ಮಾಧಕ ವಸ್ತುಗಳ ಸಾಗಾಟದಲ್ಲಿ ಪೊಲೀಸರೇ ಸಾಕಷ್ಟು ಮಂದಿ ಭಾಗಿಯಾಗಿದ್ದಾರೆ ಎನ್ನುವುದು ಬಹಿರಂಗಗೊಂಡಿದೆ.

Write A Comment