ಮುಂಬೈ

ನೂಡಲ್ಸ್ ಹಿಂಪಡೆಯಲು ಆದೇಶ ನೀಡಿಲ್ಲ

Pinterest LinkedIn Tumblr

maggie

ಮುಂಬೈ: ಮ್ಯಾಗಿ ನೂಡಲ್ಸ್ ನಲ್ಲಿ ಸೀಸದ ಅಂಶ ಹೆಚ್ಚಾಗಿ ಎಂಬ ಕಾರಣಕ್ಕಾಗಿ ಮಾರುಕಟ್ಟೆಯಿಂದ ಅದನ್ನು ಹಿಂಪಡೆಯಲು ಆಹಾರ ಇಲಾಖೆ ಹೊರಡಿಸಿದ ಆದೇಶವನ್ನು ನೆಸ್ಲೆ ಪ್ರಶ್ನಿಸಿದೆ.

ಈ ಬಗ್ಗೆ ಮುಂಬೈನಲ್ಲಿ ಹೇಳಿಕೆ ನೀಡಿದ ಸಂಸ್ಥೆ “ಉತ್ತರ ಪ್ರದೇಶದ ಆಹಾರ ಭದ್ರತೆ ಮತ್ತು ಔಷಧ ಇಲಾಖೆ ಅಧಿಕಾರಿಗಳ ಆದೇಶವನ್ನು ನಾವು ಪ್ರಶ್ನಿಸುತ್ತೇವೆ” ಎಂದು ಹೇಳಿಕೆ ನೀಡಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಮಾರ್ಚ್ 2014 ಬ್ಯಾಚ್ ನ ಮ್ಯಾಗಿ ನೂಡಲ್ಸ್ ಗಳಲ್ಲಿ ಅಪಾಯಕಾರಿ ಪ್ರಮಾಣದ ಸೀಸ ಮತ್ತು ಮಾನೋಸೋಡಿಯಂ ಗ್ಲುಟಮೇಟ್ ಪತ್ತೆಯಾಗಿದ್ದು, ಆ ಬ್ಯಾಚ್‍ನ ಅಷ್ಟೂ ಪ್ಯಾಕೆಟ್‍ಗಳನ್ನು ಹಿಂಪಡೆಯಲು ಆದೇಶವನ್ನು ಆಹಾರ ನಿರೀಕ್ಷಕರು ನಿರಾಕರಿಸಿದ್ದಾರೆ.

“ಸದ್ಯಕ್ಕೆ ನಾವು ಹಿಂಪಡೆಯುವ ಆದೇಶ ನೀಡಿಲ್ಲ. ಉತ್ತರ ಪ್ರದೇಶ ಆಹಾರ ಭದ್ರತೆ ಮತ್ತು ಔಷಧ ನಿಯಂತ್ರಣ ಇಲಾಖೆಯಿಂದ ಈ ಬಗ್ಗೆ ವಿವರಣೆ ಕೇಳಿದ್ದು, ಅದನ್ನು ಪರಿಶೀಲಿಸಿದ ನಂತರ ದೇಶಾದ್ಯಂತ ಆದೇಶ ನೀಡುವ ಬಗ್ಗೆ ಯೋಚಿಸಲಾಗುವುದು” ಎಂದು ಹಿರಿಯ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ. ನೆಸ್ಲೆಯ ಬಾತ್ಮಿದಾರ ಕೂಡ ತಾವು ಪ್ಯಾಕೆಟ್‍ಗಳನ್ನು ಹಿಂಪಡೆಯುವ ಬಗ್ಗೆ ಯಾವುದೇ ಆದೇಶ ಪಡೆದಿಲ್ಲವೆಂದು ದೃಢಪಡಿಸಿದ್ದಾರೆ.

Write A Comment