ಮುಂಬೈ

ಮಜೀದ್ ವಿರುದ್ಧ 8000 ಪುಟಗಳ ಆರೋಪಪಟ್ಟಿ

Pinterest LinkedIn Tumblr

majeed

ಮುಂಬೈ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಬುಧವಾರದಂದು ಐಸಿಸ್ ನೇಮಿಸಿಕೊಂಡಿರುವ ಉಗ್ರ ಆರಿಫ್ ಮಜೀದ್ ವಿರುದ್ಧ ವಿಶೇಷ ಕೋರ್ಟ್ ನಲ್ಲಿ 8000ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದೆ.

ಏಳು ಪುಸ್ತಕಗಳಾಗಿರುವ ಈ ಆರೋಪ ಪಟ್ಟಿಯಲ್ಲಿ ಸಾಕ್ಷಿದಾರರ ಹೇಳಿಕೆಗಳು, ಮಜೀದ್‍ನ ಆನ್‍ಲೈನ್ ಮಾತುಕತೆಗಳು ಹಾಗೂ ಆತನ ಮೊಬೈಲ್ ಫೋನ್ ಕರೆಗಳ ವಿವರ ಎಲ್ಲವೂ ಸೇರಿವೆ ಎಂದು ಎನ್‍ಐಎ ಅಧಿಕಾರಿ ತಿಳಿಸಿದ್ದಾರೆ. ಆರೋಪಿ ಆರೀಫ್ ಸ್ಕೈಪ್ ಹಾಗೂ ಟ್ಯಾಂಗೋ ಮೂಲಕ ನಡೆಸಿದ ಆನ್ ಲೈನ್ ಸಂಭಾಷಣೆ ವಿವರ ಕಲೆಹಾಕಲು ಎನ್‍ಐಎಗೆ ಕಳೆದ ಜನವರಿಯಲ್ಲಿಮುಂಬೈ ಸ್ಥಳೀಯ ಕೋರ್ಟ್ ಆದೇಶಿಸಿತ್ತು.

ಠಾಣೆ ಬಳಿಯ ಕಲ್ಯಾಣ್ ಗ್ರಾಮದ ಯುವಕ ಮಜೀದ್(23) ಕಳೆದ ನವೆಂಬರ್‍ನಲ್ಲಿ ತೀರ್ಥ ಯಾತ್ರೆಗೆಂದು ಇರಾಕ್‍ಗೆ ಭೇಟಿ ಕೊಟ್ಟು ಮುಂಬೈ ಗೆ ವಾಪಸ್ಸಾಗಿದ್ದ. ಇತರೆ ಯಾತ್ರಿಗಳು ನೀಡಿದ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸಿದಾಗ ಮಜೀದ್ ಹಾಗೂ ಆತನ ಮೂವರು ಗೆಳೆಯರು ಐಸಿಸ್ ನೊಂದಿಗೆ ಸಂಪರ್ಕ ಹೊಂದಿರುವುದು ಖಚಿತವಾಗಿತ್ತು.

Write A Comment