ಮುಂಬೈ

ಇಬ್ಬರು ಬಾಲಕಿಯರ ಮೇಲೆ ರೇಪ್: 79 ವರ್ಷ ವಯಸ್ಸಿನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ

Pinterest LinkedIn Tumblr

4705jail

ಮುಂಬೈ: 79 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಇಬ್ಬರು ಹದಿಹರೆಯದ ಸಹೋದರಿಯರನ್ನು ಕೆಲಸದ ನೆಪದಲ್ಲಿ ಮನೆಗೆ ಕರೆಸಿಕೊಂಡು ನಿರಂತರವಾಗಿ ಅತ್ಯಾಚಾರವೆಸಗಿದ್ದಲ್ಲದೇ ಯಾರಿಗಾದರೂ ಮಾಹಿತಿ ನೀಡಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ್ದ ಆರೋಪಿಯನ್ನು ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಕಳೆದ 2011ರಿಂದ ಹದಿಹರೆಯದ ಸಹೋದರಿಯರನ್ನು ಮುಲಂದ್‌ದಲ್ಲಿರುವ ಕಚೇರಿಯಲ್ಲಿ ಕೆಲಸದ ನಿಮಿತ್ಯ ಕರೆಸಿಕೊಂಡು ಕಚೇರಿಯಲ್ಲಿ ಯಾರು ಇಲ್ಲದ ಸಮಯದಲ್ಲಿ ಹಲವಾರು ಬಾರಿ ಅತ್ಯಾಚಾರವೆಸಗಿದ್ದನು.

ವೃತ್ತಿಯಿಂದ ಫ್ರಿಲಾನ್ಸ್ ಫೋಟೋಗ್ರಾಪರ್ ವೃತ್ತಿಯಲ್ಲಿರುವ ಆರೋಪಿ ನಾರ್ಸಿ ಕಟಿರಾ ವಿರುದ್ಧದ ಅತ್ಯಾಚಾರದ ಆರೋಪಗಳು ಸಾಬೀತಾಗಿದ್ದರಿಂದ 10 ವರ್ಷಗಳ ಶಿಕ್ಷೆ ವಿಧಿಸಿದ್ದಲ್ಲದೇ 50 ಸಾವಿರ ರೂಪಾಯಿಗಳ ದಂಡವನ್ನು ನೀಡಬೇಕು. 25 ಸಾವಿರ ರೂಪಾಯಿಗಳನ್ನು ಅತ್ಯಾಚಾರಗೊಳಗಾದ ಸಹೋದರಿಯರಿಗೆ ನೀಡಬೇಕು ಎಂದು ನ್ಯಾಯಮೂರ್ತಿ ವೃಶಾಲಿ ಜೋಷಿ ತೀರ್ಪಿನಲ್ಲಿ ತಿಳಿಸಿದ್ದಾರೆ.

ಕಿರಿಯ ಸಹೋದರಿಯ ಪ್ರಕಾರ, ಬೀಚ್‌ನಲ್ಲಿ ಬೇಲ್ ತಿನ್ನಲು ಹೋದಾಗ ಆರೋಪಿ ಕಟಿರಾ ಪರಿಚಯವಾಗಿದ್ದನು. ಕಚೇರಿಯಲ್ಲಿ ಕೆಲಸ ಮಾಡಿದಲ್ಲಿ ಪ್ರತಿನಿತ್ಯ 100 ರಿಂದ 200 ರೂಪಾಯಿಗಳನ್ನು ನೀಡುವುದಾಗಿ ಬಾಲಕಿಗೆ ಆಮಿಷವೊಡ್ಡಿದ್ದಾನೆ.

ಕೆಲ ದಿನಗಳ ನಂತರ ಅತ್ಯಾಚಾರ ಮಾಡುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡ ಆರೋಪಿ ಇಬ್ಬರು ಸಹೋದರಿಯರನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಮಾಡಿ ಪ್ರತಿ ಬಾರಿ 40 ರೂಪಾಯಿಗಳನ್ನು ನೀಡಿದ್ದಾನೆ.

ಹಲವಾರು ಬಾರಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹೀನಾ ಶರ್ಮಾ ಎನ್ನುವ ಮಹಿಳೆ ಕೂಡಾ ಆರೋಪಿ ಕಟಿರಾ ರೇಪ್ ಮಾಡುವ ಸಂದರ್ಭದಲ್ಲಿ ಉಪಸ್ಥಿತಳಿದ್ದರೂ ರೇಪ್ ತಡೆಯುವ ಪ್ರಯತ್ನ ಮಾಡಲಿಲ್ಲ ಎಂದು ಸಹೋದರಿಯರು ದೂರಿನಲ್ಲಿ ದಾಖಲಿಸಿದ್ದರು.

ಮತ್ತೊಬ್ಬ ಆರೋಪಿ ಹೀನಾ ಶರ್ಮಾ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ಆಕೆಯ ಪತ್ತೆಗಾಗಿ ಜಾಲ ಬೀಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Write A Comment