ಜನಪ್ರಿಯ ಬಾಲಿವುಡ್ ನಟ ಸಲ್ಮಾನ್‌ಖಾನ್ 2002ರ ಹಿಟ್ ಆ್ಯಂಡ್‌ರನ್ ಪ್ರಕರಣದಲ್ಲಿ ದೋಷಿಯೆಂದು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದ್ದು, ಐದು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾರೆ.
13 ವರ್ಷಗಳ ಸುದೀರ್ಘ ಕಾಲ ನಡೆದ ಈ ವಿಚಾರಣೆಯು, ಪಕ್ಕಾ ಬಾಲಿವುಡ್ ಮಸಾಲಾ ಸಿನೆಮಾದ ಹಾಗೆಯೇ ಹಲವು ತಿರುವುಗಳನ್ನು ಪಡೆದುಕೊಂಡಿತ್ತು. ಈ ಪ್ರಕರಣದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಹಲವು ಪ್ರಮುಖ ಸಾಕ್ಷಿಗಳು ತಿರುಗಿ ಬಿದ್ದಿದ್ದರು ಹಾಗೂ ಓರ್ವ ಮುಖ್ಯ ಸಾಕ್ಷಿದಾರ ಕ್ಷಯರೋಗದಿಂದ ಮೃತಪಟ್ಟಿದ್ದ.
ದೇಶಾದ್ಯಂತ ಕುತೂಹಲವನ್ನು ಕೆರಳಿಸಿದ್ದ ಈ ಪ್ರಕರಣದ ಬಗ್ಗೆ ಇಂದು ನ್ಯಾಯಾಲಯವು ತಾರ್ಕಿಕ ನಿರ್ಣಯವೊಂದಕ್ಕೆ ಬಂದಿರುವ ಸಂದರ್ಭದಲ್ಲಿ, ಮುಖ್ಯ ಸಾಕ್ಷಿಯಾಗಿದ್ದ ಪೊಲೀಸ್‌ಕಾನ್‌ಸ್ಟೇಬಲ್ ರವೀಂದ್ರ ಪಾಟೀಲ್‌ನ ಕತೆಯನ್ನು ಮರುಜ್ಞಾಪಿಸಿಕೊಳ್ಳುವುದು ಸೂಕ್ತವಾಗಿದೆ. ಒಂದು ವೇಳೆ ಜೈಲು ಶಿಕ್ಷೆಗೆ ಗುರಿಯಾಗಿರುವ ಸಲ್ಮಾನ್ ಖಾನ್‌ಗಾಗಿ ನಿಮ್ಮ ಹೃದಯ ಮಿಡಿಯುತ್ತಿದ್ದರೆ, ಒಂದು ಬಾರಿ ಪಾಟೀಲ್‌ನ ಕತೆಯನ್ನೂ ಓದಿ.
ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ರವೀಂದ್ರ ಪಾಟೀಲ್, ಸಲ್ಮಾನ್‌ಖಾನ್ ಅವರ ಪೊಲೀಸ್ ಅಂಗರಕ್ಷಕನಾಗಿದ್ದರು ಮತ್ತು ಅಪಘಾತ ನಡೆದ ಸಮಯದಲ್ಲಿ ಈ ಬಾಲಿವುಡ್ ನಟನ ಜೊತೆಯಲ್ಲಿದ್ದರು.
ಅಪಘಾತ ನಡೆದಾಗ ಸಲ್ಮಾನ್ ಕಾರು ಚಲಾಯಿಸುತ್ತಿದ್ದರು ಮತ್ತು ಅವರು ಪಾನಮತ್ತರಾಗಿದ್ದರು ಎಂದು ಪಾಟೀಲ್ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು. ಘಟನೆ ನಡೆದ ರಾತ್ರಿಯಂದು ತಾನು ಸಲ್ಮಾನ್‌ಗೆ, ಆತ ಕಾರು ಡ್ರೈವ್ ಮಾಡಿಕೊಂಡು ಮನೆಗೆ ಹಿಂತಿರುಗಬೇಕಾಗಿರುವುದರಿಂದ ಮದ್ಯಸೇವಿಸಕೂಡದೆಂದು ತಿಳಿಸಿದ್ದೆ. ಆದರೆ ಆತ ತನ್ನ ಸಲಹೆಗೆ ಕಿವಿಗೊಡಲಿಲ್ಲವೆಂದು ಪಾಟೀಲ್ ಹೇಳಿಕೆ ನೀಡಿದ್ದರು.
ವಾಸ್ತವವಾಗಿ ಸ್ವತಃ ಪಾಟೀಲ್ ಅವರೇ ಈ ಪ್ರಕರಣದ ಬಗ್ಗೆ ಎಫ್‌ಐಆರ್ ಸಲ್ಲಿಸಿದ್ದರು. ಇದಾದ ನಂತರ ಕೆಲವೊಂದು ವಿಚಿತ್ರ ಘಟನಾವಳಿಗಳು ನಡೆದವು. 2006ರಲ್ಲಿ ಪ್ರಕರಣದ ಸಾಕ್ಷಿಗಳ ವಿಚಾರಣೆಯ ಸಂದರ್ಭದಲ್ಲಿ ಪಾ
ಟೀಲ್ ನಿಗೂಢವಾಗಿ ನಾಪತ್ತೆಯಾದರು. ಅವರ ಕುಟುಂಬಿಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಕೂಡ ನೀಡಿದ್ದರು. ಸತತ ಐದು ಬಾರಿ ನ್ಯಾಯಾಲಯಕ್ಕೆ ಹಾಜರಾಗಲು ಪಾಟೀ ್ ವಿಫಲರಾದ ಬಳಿಕ ಅವರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಲಾತು. ಆನಂತರ ಕ್ರೈಂ ಬ್ರಾಂಚ್ ಪೊಲೀಸರು ಪಾಟೀಲ್‌ರನ್ನು ಮಹಾಬಲೇಶ್ವರ್‌ನಲ್ಲಿ ಬಂಧಿಸಿದ್ದರು ಮತ್ತು 2006 ಮಾರ್ಚ್‌ನಲ್ಲಿ ರಜಾಕಾಲದ ನ್ಯಾಯಪೀಠದ ಮುಂದೆ ಹಾಜರುಪಡಿಸಲಾಗಿತ್ತು.
ಪತ್ರಕರ್ತ ಸೌಮ್ಯದೀಪ್ತಾ ಬ್ಯಾನರ್ಜಿಯವರ ‘ರವೀಂದ್ರ ಪಾಟೀಲ್: ಡೆತ್ ಆಫ್ ಎ ಮೆಸೆಂಜರ್ (ರವೀಂದ್ರ ಪಾಟೀಲ್: ಸಂದೇಶವಾಹಕನ ಸಾವು) ಎಂಬ ಬ್ಲಾಗ್ ಲೇಖನದಲ್ಲಿ ಈ ಎಲ್ಲಾ ವಿವರಗಳನ್ನು ಪ್ರಕಟಿಸಲಾಗಿತ್ತು. ಆದರೆ ಈ ಲೇಖನವನ್ನು ಆನಂತರ ಅನುಮಾನಾಸ್ಪದವಾಗಿ ಬ್ಲಾಗ್‌ನಿಂದ ಅಳಿಸಿಹಾಕಲಾಗಿತ್ತು.
ಪಾಟೀಲ್ ತನ್ನ ಮನೆಯಿಂದ ಯಾಕೆ ಪಲಾಯನಗೈದಿದ್ದನೆಂಬುದನ್ನು ತಿಳಿಯಲು ಯಾರೂ ಆಸಕ್ತಿ ವಹಿಸಲಿಲ್ಲ. ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಎಲ್ಲರಿಗಿಂತಲೂ ಮೊದಲು ದೂರು ದಾಖಲಿಸಿದ್ದ ಪಾಟೀಲ್, ಯಾಕೆ ನ್ಯಾಯಾಲಯದ ಕಟೆಕಟೆಯನ್ನೇರಿ ಸಾಕ್ಷಿ ನೀಡಲು ಬಯಸಲಿಲ್ಲವೆಂಬ ಬಗ್ಗೆ ಯಾರೂ ಯೋಚಿಸುವ ಗೋಜಿಗೇ ಹೋಗಲಿಲ್ಲ. ಸಾಮಾನ್ಯವಾಗಿ ಪ್ರಮುಖ ಸಾಕ್ಷಿಗಳಿಗೆ ನೀಡಲಾಗುವ ರಕ್ಷಣೆಯನ್ನು ಪಾಟೀಲ್‌ಗೆ ಯಾವತ್ತೂ ಒದಗಿಸಿರಲಿಲ್ಲ. ಆನಂತರ ಪಾಟೀಲ್‌ನನ್ನು ಕ್ರಿಮಿನಲ್ ಅಪರಾಧಿಗಳನ್ನು ಇರಿ ಲಾಗುವ ಅರ್ಥರ್ ರೋಡ್ ಜೈಲಿಗೆ ಕಳುಹಿಸಲಾಯಿತು.
ತನ್ನ ಹೇಳಿಕೆಯನ್ನು ಬದಲಾಯಿಸುವಂತೆ ಪಾಟೀಲ್ ಮೇಲೆ ಬಲವಾದ ಒತ್ತಡವನ್ನು ಹೇರಲಾಗಿತ್ತೆಂದು ಪತ್ರಕರ್ತ ಬ್ಯಾನರ್ಜಿ ತನ್ನ ಬ್ಲಾಗ್‌ಲೇಖನದಲ್ಲಿ ಬಹಿರಂಗಪಡಿಸಿದ್ದರು. ಅಪಘಾ ನಡೆದಾಗ ಸಲ್ಮಾನ್ ಕುಡಿದಿರಲಿಲ್ಲ, ಇದೊಂದು ಅಕಸ್ಮಿಕವಾಗಿ ನಡೆದ ಪ್ರಮಾದವಾಗಿತ್ತೆಂದು ಸಾಕ್ಷ ನುಡಿಯುವಂತೆ ಪಾಟೀಲ್‌ನನ್ನು ಬಲವಂತಪಡಿಸಲಾಗಿತ್ತು. ಆರೋಪಿ ಪರ ವಕೀಲರ ಸವಾಲುಗಳನ್ನು ಎದುರಿಸಲು ಹೆದರಿದ ಪಾಟೀಲ್ ಪಲಾಯನ ಮಾಡಿದ್ದನೆಂದು ಬ್ಲಾಗ್ ಲೇಖನವು ಹೇಳಿದೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಪಾಟೀಲ್ ತನ್ನ ಕುಟುಂಬದಿಂದೇ ಪರಿತ್ಯಜಿಸಲ್ಪಟ್ಟಿದ್ದರು ಮತ್ತು ಕೆಲಸವನ್ನು ಕೂಡ ಕಳೆದುಕೊಂಡಿದ್ದರು. ಈ ಹಂತದಲ್ಲಿ ಅವರು ಮತ್ತೊಮ್ಮೆ ಕಾಣೆಯಾದರು. 2007ರಲ್ಲಿ ಅವರ ು ಸಿವ್ಡಿಯ ಮುನ್ಸಿಪಲ್ ಆಸ್ಪತ್ರೆಯಲ್ಲಿ ಪತ್ತೆಯಾದರು. ಔಷಧಿಗೂ ಬಗ್ಗದಂತಹ ಮಾರಕವಾದ ಕ್ಷಯ ರೋಗಪೀಡಿತರಾಗಿದ್ದ ಅವರು ಜೀವನ್ಮರಣ ಹೋರಾಟ ನಡೆಸುತ್ತಿದ್ದರು. 2007ರ ಅಕ್ಟೋಬರ್ 4ರಂದು ಪಾಟೀಲ್ ಕೊನೆಯುಸಿರೆಳೆದಾಗ ಅವರ ಪಕ್ಕದಲ್ಲಿ ಗೆಳೆಯನೊಬ್ಬನ್ನಲ್ಲದೆ ಇನ್ಯಾರೂ ಇರಲಿಲ್ಲ!