ಮುಂಬಯಿ: ಕಣ್ಣಂಗಾರ್ ಮೊಗವೀರ ಸಭಾ ಮುಂಬಯಿ ಇದರ ಅಮೃತ ಮಹೋತ್ಸವ ಸಮಾರಂಭದ ಫೆ. 8 ರಂದು ಮಾಟುಂಗ ಪಶ್ಚಿಮದ ಕರ್ನಾಟಕ ಸಂಘದ ಡಾ| ಎಂ. ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಜರಗಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಸಮಾಜ ಸೇವಕ ಸುರೇಶ್ ಭಂಡಾರಿ ವಹಿಸಿದ್ದರು.
ಅಧ್ಯಕ್ಷೀಯ ಬಾಷಣ ಮಾಡಿದ ಸುರೇಶ್ ಭಂಡಾರಿ ಅವರು ನಾವು ಯಾವುದೇ ಸಮುದಾಯದಲ್ಲಿ ಹುಟ್ಟಿದರು ಕೀಳರಿಮೆ ಹೊಂದಬಾರದು. ಹುಟ್ಟಿದ ಸಮುದಾಯದ ಬಗ್ಗೆ ನಮಗೆ ಅಭಿಮಾನವಿರಲಿ ಎಂದರು.
ಸಮಾರಂಭವನ್ನು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಅಜಿತ್ ಜಿ. ಸುವರ್ಣ ದೀಪಪ್ರಜ್ವಲಿಸಿ ಉದ್ಘಾಟಿಸಿದರು.
ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮೊಗವೀರ ಬ್ಯಾಂಕ್ನ ಕಾರ್ಯಾಧ್ಯಕ್ಷ ಕೀರ್ತಿರಾಜ್ ಕೆ. ಸಾಲ್ಯಾನ್, ನಮ್ಮ ಸಮಾಜವು ಪರಿಶ್ರಮದ ಮೂಲಕ ಮುಂದೆ ಬಂದ ಸಮಾಜವಾಗಿದೆ. ನಿಮ್ಮೆಲ್ಲರ ಸಹಕಾರದಿಂದಾಗಿ ಮೊಗವೀರ ಬ್ಯಾಂಕ್ ಇಂದು ಪ್ರಗತಿಪಥದಲ್ಲಿ ಸಾಗುತ್ತಿದೆ ಎಂದರು.
ಮೊಗವೀರ ಬ್ಯಾಂಕ್ನ ನಿರ್ದೇಶಕ ಪ್ರದೀಪ್ ಚಂದನ್, ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ರಾಜ್ಕುಮಾರ್ ಕಾರ್ನಾಡ್, ರಂಗ ನಿರ್ದೇಶ, ಡಾ| ಭರತ್ ಕುಮಾರ್ ಪೊಲಿಪು ಮೊದಲಾದವರು ಮಾತನಾಡುತ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸಂಸ್ಥೆಯ ಅಭಿವೃದ್ದಿಗಾಗಿ ದುಡಿದ ಹಿರಿಯರುಗಳಾದ ರಾಮ ಎಸ್. ಪುತ್ರನ್, ಕುಮಾರ್ ಎಸ್. ಕುಂದರ್, ರಮೇಶ್ ಪುತ್ರನ್, ಬೇಬಿ ಎಲ್. ಸಾಲ್ಯಾನ್, ವಾಸು ಟಿ. ಬಂಗೇರ, ದಾಮೋದರ ಬಿ. ಪುತ್ರನ್, ಬಾಬು ಎ. ಸಾಲ್ಯಾನ್, ರಘುನಾಥ್ ವಿ. ಪುತ್ರನ್, ಗಿರೀಶ್ ಎನ್. ಕುಂದರ್, ಪಿ. ವಿ. ಕಣ್ಣಂಗಾರ್, ಜಯಂತಿ ಬಿ. ಕುಂದರ್, ದಯಾವತಿ ಕುಂದರ್ ಅವರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.
ಕಣ್ಣಂಗಾರ್ ಮೊಗವೀರ ಸಭಾದ ಅಧ್ಯಕ್ಷ ರಾಮ ಎಸ್. ಪುತ್ರನ್ ಸ್ವಾಗತಿಸಿದರು. ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಓಂದಾಸ್ ಕಣ್ಣಂಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಕುರಿತು ಮಾತನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಯಧುವೀರ್ ಬಿ. ಪುತ್ರನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವೇದಿಕೆಯಲ್ಲಿ ಉದ್ಯಮಿ ವಾಸು ಪೂಜಾರಿ, ಕೋಶಾಧಿಕಾರಿ ಗಿರೀಶ್ ಎನ್. ಕುಂದರ್, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಮನೋಹರ್ ಕಣ್ಣಂಗಾರ್, ಸ್ಮರಣ ಸಂಚಿಕೆ ಸಮಿತಿಯ ಕಾರ್ಯಾಧ್ಯಕ್ಷ ದೇವದಾಸ್ ಎನ್. ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.
ಮಕ್ಕಳಿಂದ ಮತ್ತು ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಕರುಣಾಕರ ಕಾಪು ಅವರ ನಿರ್ದೇಶನದಲ್ಲಿ ಅಭಿನಯ ಮಂಟಪ ಮುಂಬಯಿ ಅವರಿಂದ ಕಾರ್ನಿಕದ ಶನೀಶ್ವರ ನಾಟಕ ಪ್ರದರ್ಶನಗೊಂಡಿತು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್










