ಮನೋರಂಜನೆ

ತುಳುನಾಡ ಸೇವಾ ಸಮಾಜ ವಿೂರಾಭಯಂದರ್‌ನಿಂದ15ನೇ ವಾರ್ಷಿಕೋತ್ಸವ ಆಚರಣೆ

Pinterest LinkedIn Tumblr

Tulunadu Mumbai_ Feb 7- 2015_004

ಮುಂಬಯಿ, ಫೆ.7: ತುಳುನಾಡ ಸೇವಾ ಸಮಾಜ ವಿೂರಾ ಭಯಂದರ್ (ರಿ.) ಮುಂಬಂಯಿ ಸಂಸ್ಥೆಯು ತನ್ನ ಹದಿನೈದನೇ ವಾರ್ಷಿಕೋತ್ಸವವನ್ನು ಇಂದಿಲ್ಲಿ ಆದಿತ್ಯವಾರ ಅಪರಾಹ್ನ ವಿೂರಾರೋಡ್ ಪೂರ್ವದ ವಿೂರಾ ಗ್ರೌಂಡ್‌ನ ಪೂನಂ ಸಾಗರದ ಭವ್ಯ ವೇದಿಕೆಯಲ್ಲಿ ವಿಜೃಂಭನೆಯಿಂದ ಸಂಭ್ರಮಿಸಿತು.

ಮಹಾನಗರದಲ್ಲಿನ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಮನಿಪೋಲ್ಡ್ ಕೋಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ ಸಂಸ್ಥೆಯ ಕಾರ್ಯಾಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಿೂರಾಭಯಂದರ್‌ನ ಶಾಸಕ ಪ್ರತಾಪ್ ಸರ್‌ನಾಕ್ ಉಪಸ್ಥಿತರಿದ್ದು ದೀಪ ಬೆಳಗಿಸಿ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿದರು.

Tulunadu Mumbai_ Feb 7- 2015_001

Tulunadu Mumbai_ Feb 7- 2015_002

Tulunadu Mumbai_ Feb 7- 2015_003

Tulunadu Mumbai_ Feb 7- 2015_005

Tulunadu Mumbai_ Feb 7- 2015_006

Tulunadu Mumbai_ Feb 7- 2015_007

Tulunadu Mumbai_ Feb 7- 2015_008

Tulunadu Mumbai_ Feb 7- 2015_009

Tulunadu Mumbai_ Feb 7- 2015_010

ಗೌರವ ಅತಿಥಿಗಳಾಗಿ ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಎನ್.ಟಿ ಪೂಜಾರಿ, ಎಲ್‌ಐಸಿ ಪ್ರಸಿದ್ಧಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್ಥಿಕತಜ್ಞ ಡಾ ಆರ್.ಕೆ ಶೆಟ್ಟಿ, ಭಂಡಾರಿ ಸೇವಾ ಸಂಘ ಮುಂಬಯಿ ಸಂಸ್ಥೆಯ ಅಧ್ಯಕ್ಷ ನ್ಯಾ ಶೇಖರ್ ಎಸ್.ಭಂಡಾರಿ, ವಿರಾರ್ ನಾಲಾಸೋಫಾರ ಕರ್ನಾಟಕ ಸಂಘದ ಅಧ್ಯಕ್ಷ ಲ ಶಂಕರ್ ಕೆ.ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಧಾರ್ಮಿಕ ಮುಂದಾಳು ಮತ್ತು ಶ್ರೀ ಶನೀಶ್ವರ ಮಂದಿ ಮಲಾಡ್ ಇದರ ಅಧ್ಯಕ್ಷ ಶ್ರೀನಿವಾಸ ಪಿ.ಸಫಲಿಗ ಮೊದಲಾದವರು ಹಾಗೂ ವಿವಿಧ ಕ್ಷೆು ಉಪಸ್ಥಿತರಿದ್ದು ಶುಭಕೋರಿದರು. ಈ ಸಂದರ್ಭದಲ್ಲಿ ಶ್ರೀನಿವಾಸ ಪಿ.ಸಫಲಿಗ ದಂಪತಿಯನ್ನು ಸನ್ಮಾನಿಸಿದರು.ಅಲ್ಲದೆ ಸಾಧಕರಿಗೆ ಅಭಿನಂದನಾ ಗೌರವ ಸಲ್ಲಿಸಿದರು ಮತ್ತು ಅನೇಕ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಶುಭಾರೈಸಿದರು.

ಸುರೇಶ್ ಭಂಡಾರಿ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ ಅಂಕ, ಆಯನ, ಕೋಲ, ಕಂಬಳ, ನಾಗಮಂಡಲ ದೀಪೋತ್ಸವಗಳ ನಾಡು ನಮ್ಮದು. ತುಳು ಮಣ್ಣಿನಲ್ಲಿ ದೈವಗುಣವಿದೆ. ತ್ಯಾಗ ಮನೋಭಾವನೆ ಉದಾತ್ತ ಜೀವನವಿದೆ. ಹಬ್ಬ ಹರಿದಿನಗಳು ತಿಂಡಿ-ತಿನಸುಗಳು, ಕೌಟುಂಬಿಕ ಪದ್ಧತಿ, ಬೇಸಾಯದ ವಿದಾನ ಇತ್ಯಾದಿಗಳು ವಿಶೇಷವಾದ ಪರಂಪರೆಯೊಂದಿಗೆ ಸಾಗಿ ಬಂದಿದೆ. ದೇಶಕ್ಕೆ ಐದು ರಾಷ್ಟ್ರೀಕೃತ ಬ್ಯಾಂಕ್ ನೀಡಿದ ತುಳುನಾಡು ಆರ್ಥಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ ಎಂದರು.

Tulunadu Mumbai_ Feb 7- 2015_011

Tulunadu Mumbai_ Feb 7- 2015_012

Tulunadu Mumbai_ Feb 7- 2015_013

Tulunadu Mumbai_ Feb 7- 2015_014

Tulunadu Mumbai_ Feb 7- 2015_015

Tulunadu Mumbai_ Feb 7- 2015_016

Tulunadu Mumbai_ Feb 7- 2015_017

Tulunadu Mumbai_ Feb 7- 2015_018

Tulunadu Mumbai_ Feb 7- 2015_019

Tulunadu Mumbai_ Feb 7- 2015_020

ಶಾಸಕ ಸರ್‌ನಾಕ್ ಮಾತನಾಡಿ ಧಾರ್ಮಿಕ ಪರಂಪರೆಯ ಪವಿತ್ರಸ್ಥಳ ತುಳುನಾಡು. ಅಲ್ಲಿನ ಭಾಷೆ, ವೇಷ ಭೂಷಣ ಪಾಕ ಪ್ರಾವೀಣ್ಯ, ಜೀವನ ಶೈಲಿಯು ಹಲವು ವೈಶಿಷ್ಟ್ರಗಳಿಂದ ಕೂಡಿದೆ. ತುಳುನಾಡಿನ ಪ್ರತಿಯೊಂದು ಆಚರಣೆಯಲ್ಲಿ ಸ್ಪಷ್ಟ ಸಿದ್ಧಾಂತ ಇದೆ. ತುಳುನಾಡು ಅನನ್ಯ ಸಂಸ್ಕೃತಿ, ಸಾಧನೆ, ಸಾಹಸಗಳ ಬೀಡು. ಬಹುದಿನಗಳ ಬೇಡಿಕೆಯಾದ ಸಾಂಸ್ಕೃತಿಕ ಭವನವನ್ನು ಮೀರಾ-ಭಯಂದರ್ ಪರಿಸರದಲ್ಲಿ ನಿರ್ಮಿಸುವ ಯೋಜನೆ ಸದ್ಯದಲ್ಲಿಯೇ ಕಾರ್ಯಾರಂಭವಾಗಲಿದೆ. ಸಾಮಾನ್ಯ ಸದಸ್ಯನಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರತಿಯೊಂದು ಸಂಘ ಸಂಸ್ಥೆಗಳಲ್ಲಿ ಕೈ ಜೋಡಿಸುವೆ ಎಂದರು.

ಇತರ ಅತಿಥಿಗಳೂ ಸಂದರ್ಭೋಚಿತವಾಗಿ ಮಾತನಾಡಿ ಹದಿನೈದರ ಈ ತುಳುನಾಡ ಸೇವಾ ಸಂಸ್ಥೆಯ ಸೇವೆ ಪ್ರಶಂಸಿಸಿ ತುಳುಮಾತೆಯ ಸೇವೆಗೆ ಮತ್ತಷ್ಟು ಸಕ್ರೀಯವಾಗಿರಿಸಿ ತುಳು ಭಾಷೆ-ಸಂಸ್ಕೃತಿಯ ಸರ್ವೋನ್ನತಿಗೆ ಶ್ರಮಿಸುವಂತಾಗಲಿ ಎಂದು ಹಾರೈಸಿದರು.

ವಾರ್ಷಿಕೋತ್ಸವದ ಅಂಗವಾಗಿ ಅಪರಾಹ್ನ ಧಾರ್ಮಿಕ ಕಾರ್ಯಕ್ರಮವಾಗಿ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಿ ಪ್ರಸಾದ ವಿತರಿಸಿ ಹರಸಿದರು. ಸಂಜೆ ಅಮಿತ ಕಲಾಮಂದಿರದ ಅಮಿತ ಜತಿನ್ ಅವರ ಶಿಷ್ಯೆಯರು ಮತ್ತು ರಾಧಾಕೃಷ್ಣ ನೃತ್ಯ ಅಕಾಡೆಮಿ ಸಂಸ್ಥೆಯ ಸುಕನ್ಯ ಭಟ್ ಅವರ ಶಿಷ್ಯೆಯರು ನೃತ್ಯವೈಭವ, ತುಳು ರೂಪಕ ದಶಾವತಾರ ಮತ್ತು ಕೋಟಿ ಚೆನ್ನಯ ಜೀವನ ಚರಿತ್ರೆಯ ಆಯ್ದ ಭಾಗದ ವಿಶೇಷ ನೃತ್ಯ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾದರ ಪಡಿಸಿದರು. ಬಳಿಕ ಸೇವಾ ಸಮಾಜದ ಮಹಿಳಾ ವಿಭಾಗದ ಸದಸ್ಯೆಯರು ಮತ್ತು ಮಕ್ಕಳು ಕಂಗೀಲು ನೃತ್ಯ, ಆಟಿ ಕಣಂಜ, ಸುಗ್ಗಿ ಕೊಯ್ಲು, ದೇವೇಂದ್ರ ಬಲಿಯ ಪ್ರಾತ್ಯಕ್ಷಿಕೆ, ಪುಣ್ಯ ಕೋಟಿಯ ಕಥಾ ರೂಪಕವನ್ನು ಹಾಗೂ ಹೆಸರಾಂತ ನಾಟಕಕಾರ ನಂದಳಿಕೆ ನಾರಾಯಣ ಶೆಟ್ಟಿ ವಿರಚಿತ ‘ಮಗಲಾಲ್ ಮರ್ಮಲತ್ತ್’ ಎಂಬ ಹಾಸ್ಯ ಪ್ರಧಾನ ನಾಟಕವನ್ನು ಪ್ರದರ್ಶಿಸಿದರು.

Tulunadu Mumbai_ Feb 7- 2015_021

Tulunadu Mumbai_ Feb 7- 2015_022

Tulunadu Mumbai_ Feb 7- 2015_023

Tulunadu Mumbai_ Feb 7- 2015_024

Tulunadu Mumbai_ Feb 7- 2015_025

Tulunadu Mumbai_ Feb 7- 2015_026

Tulunadu Mumbai_ Feb 7- 2015_027

Tulunadu Mumbai_ Feb 7- 2015_028

Tulunadu Mumbai_ Feb 7- 2015_029

Tulunadu Mumbai_ Feb 7- 2015_030

Tulunadu Mumbai_ Feb 7- 2015_031

Tulunadu Mumbai_ Feb 7- 2015_032

Tulunadu Mumbai_ Feb 7- 2015_033

Tulunadu Mumbai_ Feb 7- 2015_034

Tulunadu Mumbai_ Feb 7- 2015_035

ವೇದಿಕೆಯಲ್ಲಿ ರಾಜಕೀಯ ನೇತಾರ ದುರ್ಗಾಪ್ರಸಾದ್ ಸಾಲ್ಯಾನ್, ಪ್ರಮೋದ್ ಸಾವಂತ್, ಪ್ರಶಾಂತ್ ದಳ್ವಿ, ಚೇತನ್ ಶೆಟ್ಟಿ ಸ್ಥಳೀಯ ನಗರ ಸೇವಕರು ಮತ್ತಿತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತುಳುನಾಡ ಸೇವಾ ಸಮಾಜ ವಿೂರಾಭಯಂದರ್ ಸಂಸ್ಥೆಯ ಗೌ ಪ್ರ ಕಾರ್ಯದರ್ಶಿ ನ್ಯಾನ್ಸಿ ಇಗ್ನೇಷಿಯಸ್ ಸಿಕ್ವೇರಾ, ಗೌ ಪ್ರ ಕೋಶಾಧಿಕಾರಿ ರಮೇಶ್ ವಿ.ಭಂಡಾರಿ, ಜೊತೆ ಕಾರ್ಯದರ್ಶಿ ಗಳಾದ ಮಂಜುನಾಥ್ ಮೆಂಡನ್, ಸಂತೋಷ್ ಭಂಡಾರಿ ಪದಾಧಿಕಾರಿಗಳು ಹಾಗೂ ಸದಸ್ಯರನೇಕರು ಉಪಸ್ಥಿತರಿದ್ದರು.

ಅಧ್ಯಕ್ಷ ಶಂಭು ಕೆ.ಶೆಟ್ಟಿ ಸುಖಾಗಮನ ಬಯಸಿದರು. ಅಧ್ಯಕ್ಷ ಡಾ ರವಿರಾಜ ಸುವರ್ಣ ಪ್ರಸ್ತಾವಿಕ ನುಡಿಗಳನ್ನಾಡಿ ಸಂಘದ ಮುಂದಿನ ಯೋಜನೆಗಳ ಬಗ್ಗೆ ವಿವರ ನೀಡಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಶೋಭಾ ವಿ.ಉಡುಪ, ಕಾರ್ಯದರ್ಶಿ ಸುಜಾತಾ ಕೋಟ್ಯಾನ್ ಅತಿಥಿಗಳನ್ನು ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ರಂಗಕಲಾವಿದ ಜಿ.ಕೆ.ಕೆಂಚನಕೆರೆ ಮತ್ತು ಪ್ರಜ್ವಲ್ ಡಿ.ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿ, ಸನ್ಮಾನಿತರು, ಸಾಧಕರು ಮತ್ತು ಪ್ರತಿಭಾನ್ವಿತರನ್ನು ಪರಿಚಯಿಸಿದರು.

Write A Comment