ಮನೋರಂಜನೆ

ಬಂಟ್ಸ್ ಸಂಘ ಮುಂಬಯಿ ಜರುಗಿಸಿದ ವಾರ್ಷಿಕ ಕ್ರೀಡಾ ಕೂಟ-2015; ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಮೊಹಮ್ಮದ್ ಅಜರುದ್ಧೀನ್

Pinterest LinkedIn Tumblr

Bunts Mumbai_Jan 28- 2015_037

ಮುಂಬಯಿ, ಜ. 25: ಬಂಟ್ಸ್ ಸಂಘ ಮುಂಬಯಿ ಇವರ ವತಿಯಿಂದ ಅಯೋಜಿಸಿದ ಬಂಟ್ಸ್ ವಾರ್ಷಿಕ ಕ್ರೀಡಾ ಕೂಟ-2015ವು ಇಂದಿಲ್ಲಿ ರವಿವಾರ ದಿನಪೂರ್ತಿ ಕಾಂದಿವಿಲಿ ಪೂರ್ವದ ಸಮತಾ ನಗರದಲ್ಲಿನ ಸ್ಪೊರ್ಟ್ಸ್ ಆಥಾರಿಟಿ ಆಫ್ ಇಂಡಿಯಾ ಇದರ ಕ್ರೀಡಾ ತರಬೇತಿ ಕೇಂದ್ರದ ಕ್ರೀಡಾಂಗಣದಲ್ಲಿ ನೇರವೇರಿತು.

ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ವಾರ್ಷಿಕ ಕ್ರೀಡಾಕೂಟವನ್ನು ಬೆಳಿಗ್ಗೆ ಭಾರತ ಕ್ರಿಕೇಟ್ ತಂಡದ ಕ್ರಿಕೇಟ್‌ಪಟು ಕೆ.ಎಲ್ ರಾಹುಲ್ ದೀಪ ಪ್ರಜ್ವಲಿಸಿ ಕ್ರೀಡೋತ್ಸವ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಸಂಸದ ಗೋಪಾಲ್ ಸಿ.ಶೆಟ್ಟಿ, ಬೋಂಬೆ ಬಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಶ್ಯಾಮ ಎನ್.ಶೆಟ್ಟಿ ಮತ್ತು ಬಂಟ್ಸ್ ಸಂಘ ಉಡುಪಿ ಇದರ ಅಧ್ಯಕ್ಷ ಲ ಇಂದ್ರಾಳಿ ಜಯಕರ ಶೆಟ್ಟಿ, ಚಲನಚಿತ್ರ ನಿರ್ಮಾಪಕ ಮಾಲಾಡಿ ಬಾಲಕೃಷ್ಣ ಶೆಟ್ಟಿ, ಶ್ರೀ ಸಿದ್ಧಿವಿನಾಯಕ ಮಂದಿರ ಟ್ರಸ್ಟ್ ನ ಕಾರ್ಯಾಧ್ಯಕ್ಷ ನರೇಂದ್ರ ಎಂ.ರಾಣೆ ಹಾಜರಿದ್ದು ಶುಭರೈಸಿದರು.

Bunts Mumbai_Jan 28- 2015_001

Bunts Mumbai_Jan 28- 2015_002

Bunts Mumbai_Jan 28- 2015_003

Bunts Mumbai_Jan 28- 2015_004

Bunts Mumbai_Jan 28- 2015_005

Bunts Mumbai_Jan 28- 2015_006

Bunts Mumbai_Jan 28- 2015_007

Bunts Mumbai_Jan 28- 2015_008

Bunts Mumbai_Jan 28- 2015_010

ಇದೇ ಸಂದರ್ಭದಲ್ಲಿ ಸಂಘದ ಆರೋಗ್ಯ ಕಾತರ (ಹೆಲ್ತ್‌ಕೇರ್) ಸಮಿತಿ ಕಾರ್ಯಾಧ್ಯಕ್ಷ ಡಾ ರತ್ನಾಕರ ಶೆಟ್ಟಿ ಮುಂದಾಳುತ್ವದ ನೂತನ ಯೋಜನೆ ಸಹಸ್ರ ದೃಷ್ಠಿ ಯೋಜನಾ ಫಲಕವನ್ನು ಅತಿಥಿಗಳು ಅನಾವರಣ ಗೊಳಿಸಿದರು.

ಶ್ಯಾಮ ಎನ್.ಶೆಟ್ಟಿ ದ್ವಜಾರೋಹಣಗೈದು ಜಯಕರ ಶೆಟ್ಟಿ ಅವರು ಕ್ರೀಡೋತ್ಸವ ನಾಮಫಲಕ ಹೊತ್ತ ಬಣ್ಣಬಣ್ಣದ ಬಲೂನ್‌ಗಳ ಗೊಂಚಲನ್ನು ಬಾನೆತ್ತರಕ್ಕೆ ಹಾರಿಸಿ ಹಾಗೂ . ಪ್ರಥ್ವಿರಾಜ್ ಶೆಟ್ಟಿ ಕ್ರೀಡಾಂಗಣಕ್ಕೆ ಸುತ್ತುವರಿದು ವೇದಿಗೆ ತಂದಿದ್ದ ಕ್ರೀಡಾಜ್ಯೋತಿ ಸ್ವೀಕರಿಸಿ ‘ಬಂಟ್ಸ್ ಕ್ರೀಡೋತ್ಸವ -2015’ಕ್ಕೆ ವಿಧ್ಯುಕ್ತವಾಗಿ ಘೋಷಿಸಿದರು. ಗಣ್ಯರು ಪಥ ಸಂಚಲನಾ ಗೌರವ ವಂದನೆ ಸ್ವೀಕರಿಸಿದರು. ಕರ್ನಿರೆ ರಿಷಿಕಾ ವಿಶ್ವನಾಥ ಶೆಟ್ಟಿ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು.

ಕಟೀಲು ದುರ್ಗಾ ಪರಮೇಶ್ವರಿ ದೇವಿಗೆ ಆರತಿ ಬೆಳಗಿಸಿ ಕ್ರೀಡಾಕೂಟ ಆರಂಭಿಸಲಾಗಿದ್ದು ಸಂಘದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಆರ್ಚಕ ವಿದ್ವಾನ್ ಅರವಿಂದ ಬನ್ನಿಂತ್ತಾಯ ಪೂಜಾಧಿಗಳನ್ನು ನೆರವೇರಿಸಿದರು. ಸರೋಜಾ ಬಿ.ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಕ್ರೀಡಾಕೂಟ ಸಮಾರಂಭ ಆರಂಭ ಗೊಂಡಿತು. ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಎಸ್.ಶೆಟ್ಟಿ ಸ್ವಾಗತ ಕೋರಿದರು. ಕ್ರಿಡೋತ್ಸವದ ಸಂಯೋಜಕ ಗೌರಮ್ ಎಸ್.ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಜಯ ಎ.ಶೆಟ್ಟಿ, ಕರ್ನೂರು ಮೋಹನ್ ರೈ ಮತ್ತು ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಭೋಜ ಶೆಟ್ಟಿ, ವಿಜಯ ಶೆಟ್ಟಿ, ಕರುಣಾಕರ ಶೆಟ್ಟಿ ಕ್ರೀಡಾಸ್ಪರ್ಧೆಗಳನ್ನು ನಿರ್ವಾಹಿಸಿದ್ದು ವಿಠಲ ಎಸ್.ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಸಹಕಾರವಿತ್ತರು.

Bunts Mumbai_Jan 28- 2015_011

Bunts Mumbai_Jan 28- 2015_013

Bunts Mumbai_Jan 28- 2015_014

Bunts Mumbai_Jan 28- 2015_016

Bunts Mumbai_Jan 28- 2015_017

Bunts Mumbai_Jan 28- 2015_018

Bunts Mumbai_Jan 28- 2015_019

Bunts Mumbai_Jan 28- 2015_020

Bunts Mumbai_Jan 28- 2015_021

Bunts Mumbai_Jan 28- 2015_022

Bunts Mumbai_Jan 28- 2015_023

Bunts Mumbai_Jan 28- 2015_024

Bunts Mumbai_Jan 28- 2015_025

ಸಂಜೆ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರ ಅಧ್ಯಕ್ಷೆತೆಯಲ್ಲಿ ನೇರವೇರಿದ ಕ್ರಿಡೋತ್ಸವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾರತ ಕ್ರಿಕೇಟ್ ತಂಡದ ನಾಯಕ ಮೊಹಮ್ಮದ್ ಅಜ್ಹರುದ್ಧೀನ್, ಡಾ ಪದ್ಮನಾಭ ವಿ.ಶೆಟ್ಟಿ ಮತ್ತಿತರ ಗಣ್ಯರು, ಸಂಘದ ಉಪಾಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಗೌ ಪ್ರ ಕಾರ್ಯದರ್ಶಿ ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಗೌ ಕೋಶಾಧಿಕಾರಿ ಸಿಎ ಐ.ಆರ್ ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರ್, ಜತೆ ಕೋಶಾಧಿಕಾರಿ ರ್ಮಹೇಶ್ ಎಸ್.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿವೇಕ್ ವಿ.ಶೆಟ್ಟಿ, ಜೋಗೆಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ವಿಜಯ ಆರ್.ಭಂಡಾರಿ ಉಪಸ್ಥಿತರಿದ್ದು, ಅಲ್ಟ್ರಾ ಮ್ಯಾರಥಾನ್ ವಿಜೇತ ರಾಷ್ಟ್ರದ ಏಕೈಕ ದಂಪತಿ ಸುನೀಲ್ ಶೆಟ್ಟಿ ಮತ್ತು ಸಂಗೀತ ಎಸ್.ಶೆಟ್ಟಿ ಮತ್ತು ಕ್ರಿಡೋತ್ಸವದ ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.

Bunts Mumbai_Jan 28- 2015_026

Bunts Mumbai_Jan 28- 2015_027

Bunts Mumbai_Jan 28- 2015_028

Bunts Mumbai_Jan 28- 2015_029

Bunts Mumbai_Jan 28- 2015_030

Bunts Mumbai_Jan 28- 2015_031

Bunts Mumbai_Jan 28- 2015_032

Bunts Mumbai_Jan 28- 2015_033

Bunts Mumbai_Jan 28- 2015_034

Bunts Mumbai_Jan 28- 2015_035

Bunts Mumbai_Jan 28- 2015_036

Bunts Mumbai_Jan 28- 2015_038

Bunts Mumbai_Jan 28- 2015_039

Bunts Mumbai_Jan 28- 2015_040

Bunts Mumbai_Jan 28- 2015_041

Bunts Mumbai_Jan 28- 2015_042

Bunts Mumbai_Jan 28- 2015_043

Bunts Mumbai_Jan 28- 2015_044

Bunts Mumbai_Jan 28- 2015_045

ಉಪಸಮಿತಿಗಳ ಪದಾಧಿಕಾರಿಗಳು, ಮಾಜಿ ಪದಾಧಿಕಾರಿಗಳು, ಹಿರಿಯ ಮುತ್ಸದ್ಧಿಗಳು ಸೇರಿದಂತೆ ಸಾವಿರಾರು ಬಂಟ ಬಾಂಧವರು ಉಪಸ್ಥಿತರಿದ್ದು ಕ್ರೀಡೋತ್ಸವವನ್ನು ಜಾತ್ರೆಯನ್ನಾಗಿಸಿ ಮೆರೆಸಿದರು. ಶೈಲಜಾ ಎ.ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಅಶೊಕ್ ಪಕ್ಕಳ ಮತ್ತು ಡಾ ಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಾಹಿಸಿದರು.

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

Write A Comment