ಮನೋರಂಜನೆ

ಕಿಮ್‌ಗಿಂತ ಮೊದಲೇ ಮಾಡಿದ್ದೆ: ಪೂನಂ ಬಿಚ್ಚು ನುಡಿ: ಟ್ವಿಟರ್‌ನಲ್ಲಿ ಸಾಕ್ಷಿ ಸಮೇತ ಪೂನಂ ‘ಹಾಜರ್‌’..!

Pinterest LinkedIn Tumblr

poonam-kim

ಮುಂಬೈ: ಬಾಲಿವುಡ್ ನಟಿ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದು, ಖಾಸಗಿ ಮ್ಯಾಗಜಿನ್‌ಗೆ ನಟಿ ಕಿಮ್ ಕಾರ್‌ದಶಿಯನ್ ನೀಡಿರುವ ಫೋಟೋ ಪೋಸ್ ಅನ್ನು ಆಕೆಗಿಂತ ಮೊದಲೇ ನಾನು ಮಾಡಿದ್ದೆ ಎಂದು ಪೂನಂ ಟ್ವೀಟ್ ಮಾಡಿದ್ದಾಳೆ.

ನಟಿ ಕಿಮ್ ಕಾರ್‌ದಶಿಯನ್ ಇತ್ತೀಚೆಗೆ ಖಾಸಗಿ ಮ್ಯಾಗಜಿನ್‌ನ ಕವರ್ ಫೋಟೋಗಾಗಿ ನೀಡಿರುವ ಫೋಟೋ ಶೂಟ್ ಇಂಟರ್‌ನೆಟ್‌ನಲ್ಲಿ ಲೀಕ್ ಆಗಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ. ಫೋಟೋ ಶೂಟ್‌ನಲ್ಲಿ ಸಂಪೂರ್ಣ ಬೆತ್ತಲಾಗಿರುವ ಕಿಮ್, ತಮ್ಮ ದೇಹದ ಹಿಂಭಾಗದ ಸಂಪೂರ್ಣ ಅಂಗಾಂಗಗಳು ಕ್ಯಾಮೆರಾಗೆ ಕಾಣುವಂತೆ ಪೋಸ್ ನೀಡಿದ್ದಾರೆ. ಖ್ಯಾತ ಫೋಟೋಗ್ರಾಫರ್ ಜೀನ್ ಪಾಲ್ ಗೌಡ್ ನೇತೃತ್ವದಲ್ಲಿ ಫೋಟೋ ಶೂಟ್ ನಡೆಸಲಾಗಿದೆ.

ಇದೇ ಚಿತ್ರಗಳು ಇದೀಗ ಇಂಟರ್‌ನೆಟ್‌ನಲ್ಲಿ ಲೀಕ್ ಆಗಿದ್ದು, ಗಾಸಿಪ್ ಪ್ರಿಯರಿಗೆ ಆಹಾರವಾಗಿದೆ. ಇದೇ ವಿಚಾರ ಇದೀಗ ಬಾಲಿವುಡ್ ಬಿಚ್ಚಮ್ಮ ಪೂನಂಪಾಂಡೆಯನ್ನು ಕೆಣಕಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಪೂನಂ, ಕಿಮ್‌ಗಿಂತಲೂ ಮೊದಲೇ ನಾನು ಇಂತಹ ಪೋಸ್ ನೀಡಿದ್ದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಇದಕ್ಕೆ ಸಾಕ್ಷಿ ಎನ್ನುವ ರೀತಿಯಲ್ಲಿ ತಮ್ಮ ಅರೆನಗ್ನ ದೇಹದ ಚಿತ್ರವನ್ನು ಕೂಡ ಪೋಸ್ಟ್ ಮಾಡಿದ್ದಾರೆ.

2011ರ ವಿಶ್ವಕಪ್‌ನಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದರೆ ಭಾರತದ ಪೆವಿಲಿಯನ್‌ನಲ್ಲಿ ನಗ್ನವಾಗಿ ಕಾಣಿಸಿಕೊಳ್ಳುವುದಾಗಿ ಹೇಳಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಪೂನಂ, ಅದಾದ ಬಳಿಕ ಅಂತಹುದೇ ಹುಚ್ಚುಚ್ಚು ಹೇಳಿಕೆಗಳು, ಅರೆ ನಗ್ನ ಚಿತ್ರಗಳು ಮತ್ತು ಅಸಭ್ಯವರ್ತನೆ ತೋರಿದ ಕುರಿತು ಅನೇಕ ಬಾರಿ ಸುದ್ದಿಗೆ ಗ್ರಾಸವಾಗಿದ್ದರು.

Write A Comment