ಮುಂಬೈ

ಚಾರ್‌ಕೋಪ್‌ ಕನ್ನಡಿಗರ ಬಳಗದ ವಾರ್ಷಿಕೋತ್ಸವ

Pinterest LinkedIn Tumblr

DSC_0056

ಮುಂಬಯಿ: ಚಾರ್‌ಕೋಪ್‌ ಕನ್ನಡಿಗರ ಬಳಗದ 15ನೇ ವಾರ್ಷಿಕೋತ್ಸವ ಹಾಗೂ ಶಾರದಾ ಪೂಜೆಯು ಸೆ. 28ರಂದು ಕಾಂದಿವಲಿ ಪಶ್ಚಿಮದ ಸೆಕ್ಟರ್‌-6ರ ಹರ್ಯಾಣ ಭವನದಲ್ಲಿ ಜರಗಿತು.

ಬಳಗದ ಅಧ್ಯಕ್ಷ ಮಂಜುನಾಥ ಜಿ. ಬನ್ನೂರು ಅವರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಮಾರಂಭದ ಮುಖ್ಯ ಅತಿಥಿಯಾಗಿ ಬಂಟರ ಸಂಘ ಮುಂಬಯಿ ಇದರ ಉನ್ನತ ಶಿಕ್ಷಣ ಯೋಜನೆಯ ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಕೆ. ಶೆಟ್ಟಿ, ಗೌರವ ಅತಿಥಿಗಳಾಗಿ ಹೊಟೇಲ್‌ ಉದ್ಯಮಿ ಎರ್ಮಾಳ್‌ ಹರೀಶ್‌ ಶೆಟ್ಟಿ, ನಟ ಹರೀಶ್‌ ವಾಸು ಶೆಟ್ಟಿ ಅವರು ಉಪಸ್ಥಿತರಿದ್ದರು.

DSC_0022

DSC_0026

DSC_0039

DSC_0041

DSC_0046

DSC_0060

ಅಡ್ಯಾರುಗುತ್ತು ತಿಮ್ಮಪ್ಪ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಯನ್ನು ಒಕ್ಕಲಿಗರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರಂಗಪ್ಪ ಸಿ. ಗೌಡ, ಕೆ.ಕೆ. ಸುವರ್ಣ ಸ್ಮರಣಾರ್ಥ ಪ್ರಶಸ್ಥಿಯನ್ನು ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸುರೇಂದ್ರ ಕುಮಾರ್‌ ಹೆಗ್ಡೆ ಹಾಗೂ ಶ್ರೀಮತಿ ಭಾರತಿ ಕೊಡ್ಲೆಕರ್ ಸ್ಮರಣಾರ್ಥ ಪ್ರಶಸ್ತಿಯನ್ನು ಹಿರಿಯ ನಟಿ, ದೂರದರ್ಶನ ಕಲಾವಿದೆ ಅಹಲ್ಯಾ ಬಲ್ಲಾಳ್‌ ಅವರಿಗೆ ನೀಡಿ ಗೌರವಿಸಲಾಯಿತು.

ಶಾರದಾ ಪೂಜೆ, ಭಜನೆ, ತೀರ್ಥ ಪ್ರಸಾದ, ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಬಳಗದ ಸದಸ್ಯರಿಂದ, ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಎನ್‌. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಟ್ರಸ್ಟಿಗಳಾದ ಜಯ ಸಿ. ಶೆಟ್ಟಿ, ಭಾಸ್ಕರ ಸರಪಾಡಿ, ಪದ್ಮಾವತಿ ಬಿ. ಶೆಟ್ಟಿ ಹಾಗೂ ಬಳಗದ ಇತರ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ಉಪಾಧ್ಯಕ್ಷ ಕೃಷ್ಣ ಟಿ. ಅಮೀನ್‌, ಎಂ. ಕೃಷ್ಣ ಎನ್‌. ಶೆಟ್ಟಿ, ಜತೆ ಕಾರ್ಯದರ್ಶಿ ವಸಂತಿ ಯು. ಸಾಲ್ಯಾನ್‌, ಜತೆ ಕೋಶಾಧಿಕಾರಿ ಸದಾಶಿವ ಸಿ.ಪೂಜಾರಿ, ರಿತಾ ವಿ. ಬಂಗೇರ, ಪೂಜಾ ಸಮಿತಿಯ ರಮೇಶ್‌ ಸಿ. ಕೋಟ್ಯಾನ್‌, ರಮೇಶ್‌ ಬಂಗೇರ, ಎಚ್‌. ಜಯ ದೇವಾಡಿಗ, ವಿವಿಧ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ವಿಜಯ ಡಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕೋಶಾಧಿಕಾರಿ ಗೌರಿ ಪಣಿಯಾಡಿ ವಂದಿಸಿದರು.
ಲೇಖನ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್

Write A Comment