ಕರ್ನಾಟಕ

ಪಾರ್ಟಿಯಲ್ಲಿ ಮಾದಕ ವಸ್ತು ಸೇವನೆ ಆರೋಪದಲ್ಲಿ ಬಂಧಿಯಾಗಿದ್ದ ಸಿದ್ದಾಂತ್ ಕಪೂರ್, ಇತರರಿಗೆ ಜಾಮೀನು ಮಂಜೂರು..!

Pinterest LinkedIn Tumblr

ಬೆಂಗಳೂರು: ಮಾದಕ ವಸ್ತು ಸೇವನೆ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಸೋಮವಾರ ತಡರಾತ್ರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಇತರ ನಾಲ್ವರು ಸಹ ಠಾಣಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿದ್ದಾಂತ್ ಕಪೂರ್ ಮತ್ತು ಇತರ ಆರೋಪಿಗಳು ಕರೆ ಮಾಡಿದಾಗ ಪೊಲೀಸರ ಮುಂದೆ ಹಾಜರಾಗಬೇಕಾಗುತ್ತದೆ ಎಂದು ಬೆಂಗಳೂರು ಪೂರ್ವ ಉಪ ಪೊಲೀಸ್ ಆಯುಕ್ತ ಭೀಮಾ ಶಂಕರ್ ಗುಳೇದ್ ಹೇಳಿದ್ದಾರೆ. ನಗರದಲ್ಲಿ ಭಾನುವಾರ ರಾತ್ರಿ ಪಾರ್ಟಿಯೊಂದರಲ್ಲಿ ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಸಿದ್ದಾಂತ್ ಕಪೂರ್ ಅವರನ್ನು ಬಂಧಿಸಲಾಗಿತ್ತು.

ರಾಜಸ್ಥಾನದಿಂದ ಬೆಂಗಳೂರಿಗೆ ಕೆಲಸಕ್ಕೆಂದು ಬಂದು
ಸಿದ್ಧಾಂತ್‌ ಕಪೂರ್‌, ಸ್ನೇಹಿತರಾದ ಮೈಂಡ್‌ ಫೈರ್‌ ಸಲ್ಯೂಷನ್‌ ಬ್ಯುಸಿನೆಸ್‌ ಮ್ಯಾನೆಜರ್‌ ಅಕಿಲ್‌ ಸೋನಿ, ಲಾಜಿಸ್ಟಿಕ್‌ ಸ್ಟಾರ್ಟ್‌ಅಪ್‌ ಕಂಪನಿಯ ಆಪರೇಷನ್‌ ಹೆಡ್‌ ಹಜರತ್‌ ಸಿಂಗ್‌, ರಫೀಕ್ಯೂ ಡಿಜಿಟಲ್‌ ಮಾರ್ಕೆಟಿಂಗ್‌ನ ಹನಿ, ಫ್ರೀಲ್ಯಾನ್ಸ್‌ ಫೋಟೋಗ್ರಾಫ‌ರ್‌ ಅಕಿಲ್‌ ಬಂಧಿತರು.

ಎಂಜಿ ರಸ್ತೆಯ ಟ್ರಿನಿಟಿ ವೃತ್ತದ ಬಳಿಯಿರುವ ಪಂಚತಾರ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಮಾದಕ ವಸ್ತು ಸೇವನೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಹಲಸೂರು ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಆಗ 14 ಮಂದಿ ಯುವತಿಯರು, 21 ಯುವಕರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ದಾಳಿ ವೇಳೆ, ಕಸದಬುಟ್ಟಿಯಲ್ಲಿ 7 ಎಂಡಿಎಂಎ ಮಾತ್ರೆ, 10 ಗ್ರಾಂ ಗಾಂಜಾ ಸಿಕ್ಕಿದೆ‌ ಎನ್ನಲಾಗಿದೆ.

 

Comments are closed.