ಕರ್ನಾಟಕ

ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು? : ಸಿದ್ದರಾಮಯ್ಯ ವಿರುದ್ಧ ಸಿ.ಟಿ ರವಿ ಟ್ವೀಟ್

Pinterest LinkedIn Tumblr

ಬೆಂಗಳೂರು: ಹಾನಗಲ್-ಸಿಂದಗಿ ಉಪಚುನಾವಣೆಯ ಹಿನ್ನೆಲೆ ವಿವಿಧ ರಾಜಕೀಯ ಪಕ್ಷಗಳ ನಾಯಕರ ನಡುವೆ ಆರೋಪ ಪ್ರತ್ಯಾರೋಗಳು ಜೋರಾಗಿಯೇ ನಡೆಯುತ್ತಿದೆ. ಈ ಮಧ್ಯೆ ಕಂಬಳಿ, ಕುರಿ, ಟೋಪಿ ವಿಚಾರ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಸಿಂದಗಿಯಲ್ಲಿ‌‌ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಂಬಳಿ ಹೊತ್ತುಕೊಳ್ಳಲು ಯೋಗ್ಯತೆ ಬೇಕು, ನೀನು ಎಂದಾದರೂ ಕುರಿ ಕಾಯ್ದಿಯಾ ಎಂದು‌ ಬೊಮ್ಮಾಯಿ ವಿರುದ್ದ ವಾಗ್ದಾಳಿ ನಡೆಸಿದ್ದರು.

https://twitter.com/CTRavi_BJP/status/1453038021377343488?s=20

ಈದೇ ವಿಚಾರವಾಗಿ ಟ್ವೀಟ್ ಮಾಡಿರುವ ಸಿ.ಟಿ ರವಿ, ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ? ಎಂದಿದ್ದಾರೆ.

ಸಿದ್ದರಾಮಯ್ಯ ಟೋಪಿ ಧರಸಿರುವ ಫೋಟೋ ಸಹಿತ ಬರೆದುಕೊಂಡಿರು ಬರಹ ಸದ್ಯ ವಿವಾದ ಸೃಷ್ಟಿಸಿದೆ.

Comments are closed.