ಕರ್ನಾಟಕ

ಜಾನುವಾರುಗಳಿಗೆ ಆಸರೆ ನೀಡಿದ್ದ ‘ಆರಕ್ಷಕ’ ಇನ್ನಿಲ್ಲ; ಪೊಲೀಸ್ ಇನ್ಸ್‌ಪೆಕ್ಟರ್ ಮಹಮ್ಮದ್ ರಫಿಕ್ ಹೃದಯಾಘಾತದಿಂದ ನಿಧನ

Pinterest LinkedIn Tumblr

ಬೆಂಗಳೂರು: ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಜಾನುವಾರುಗಳಿಗೆ ಆಸರೆಯಾಗುವ ಮೂಲಕ ಮಾನವೀಯ ಕೆಲಸ ಮಾಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮಹಮ್ಮದ್ ರಫಿಕ್ ಇಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.

ಬಿಡಾಡಿ ಗೋವುಗಳಿಗೆ ರಕ್ಷಣೆ ನೀಡಿ ಆಹಾರ ನೀಡುತ್ತಿದ್ದ ಮೊಹಮ್ಮದ್ ರಫಿಕ್ ಅವರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರುವೊಂದನ್ನು ಸಾಕುತ್ತಿದ್ದರು. ಟ್ರಾನ್ಸಫರ್ ಆಗಿದ್ದರೂ ಕರುವನ್ನು ಜೊತೆಯಲ್ಲಿಯೇ ಕರೆದೊಯ್ಯುತ್ತಿದ್ದ ಬಗ್ಗೆ ಬಹಳಷ್ಟು ಸುದ್ದಿಯಾಗಿತ್ತು.

ನಗರದ ವಿವಿಧ ಠಾಣೆಗಳಲ್ಲಿ ಕೆಲಸ ಮಾಡಿದ್ದ ಮೊಹಮ್ಮದ್ ರಫಿಕ್ ಅವರು ಇತ್ತೀಚೆಗೆ ಸರಿಗಮಪ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಸುಬ್ರಹ್ಮಣಿ ಜೊತೆ ಭಾಗವಹಿಸಿದ್ದರು.

ಅ.21 ಗುರುವಾರ ಬೆಳಗ್ಗೆ ಮನೆಯಲ್ಲಿ ಸ್ನಾನಕ್ಕೆ ತೆರಳಿದ್ದಾಗ ಅವರಿಗೆ ತೀವೃ ಉಸಿರಾಟದ ತೊಂದರೆ ಕಂಡುಬಂದಿದೆ. ಕೂಡಲೆ ಮನೆಯವರು ವೈದ್ಯರನ್ನು ಕರೆಸಿದ್ದರಾದರೂ ಅಷ್ಟರಲ್ಲೆ ಮೊಹಮ್ಮದ್ ರಫೀಕ್ ಮೃತಪಟ್ಟಿದ್ದರು.

 

Comments are closed.