ಕರ್ನಾಟಕ

‘ಶುಗರ್‌ ಡ್ಯಾಡಿ’ ಪುಸ್ತಕ ನ.1 ಕ್ಕೆ ಬಿಡುಗಡೆ; ಶುಗರ್ ಡ್ಯಾಡಿ ಎಂದು ಯಾರಿಗೆ ಕರೆಯುತ್ತಾರೆಂದು ಸಂಬರಗಿ ಹೇಳೋದು ಹೀಗೆ..

Pinterest LinkedIn Tumblr

ಬೆಂಗಳೂರು: ‘ಶುಗರ್‌ ಡ್ಯಾಡಿ’ ಪುಸ್ತಕ ನವೆಂಬರ್‌ 1ರಂದು ಬಿಡುಗಡೆಯಾಗಲಿದೆ. ಮುಖ್ಯಮಂತ್ರಿಗಳು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಆ ಕಾರ್ಯಕ್ರಮದಲ್ಲಿ ಮಾದಕ ಜಾಲಕ್ಕೆ ಒಳಗಾಗಿ ತೊಂದರೆ ಅನುಭವಿಸಿದವರು, ಆ ಜಾಲದಿಂದ ಮುಕ್ತರಾಗಿ ಹೊರಬಂದವರು ಇರಲಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್‌ ಸಂಬರಗಿ ಅವರು ಹೇಳಿದ್ದಾರೆ.

ತನ್ನ ತಂದೆ ವಯಸ್ಸಿನ ವ್ಯಕ್ತಿ ಜೊತೆ ಲೈಂಗಿಕ ಸಂಬಂಧ ಬೆಳೆಸಿ ಅವರಿಂದ ಬೇರೆಬೇರೆ ರೀತಿಯ ಲಾಭ ಪಡೆಯುವುದೇ ಶುಗರ್ ಡ್ಯಾಡಿ ಎಂದು ಕರೆಸಿ ಕೊಳ್ಳುತ್ತಾರೆ ಎಂದು ಸಂಬರಗಿ ಹೇಳಿದರು.

ಮಾದಕ ಜಾಲ ಪ್ರಕರಣಗಳನ್ನು ಪೊಲೀಸರು ಮತ್ತೆ ತೆರೆದು ತೀವ್ರ ತನಿಖೆಗೆ ಒಳಪಡಿಸಬೇಕು. ಶೀಘ್ರವೇ ಈ ಪ್ರಕರಣದ ಹಿಂದಿರುವ ಮಾಸ್ಟರ್‌ ಮೈಂಡ್‌ ಒಬ್ಬರು ಹೊರ ಬರಲಿದ್ದಾರೆ. ಅವರು ಸಿನಿಮಾ ನಿರ್ಮಾಪಕ, ವಿತರಕ, ರಾಜಕಾರಣಿಯೂ ಆಗಿದ್ದಾರೆ ಎಂದು ಬಾಂಬ್ ಸಿಡಿಸಿದರು.

ಡ್ರಗ್‌ ಸಂಬಂಧಿಸಿ ಯಾವ ಘಟನೆಗಳು ಸಾಕ್ಷಿಗಳಿಲ್ಲದೇ ಕೈತಪ್ಪಿವೆ ಎಂಬುದನ್ನು ಬರೆದಿದ್ದೇನೆ. ಫಾರ್ಮ್‌ಹೌಸ್‌ ಕಥೆಯಿಂದ ಹಿಡಿದು, ಅಪ್ಪನನ್ನು ಅಪಹರಿಸಿದ ಪ್ರಕರಣದವರೆಗೂ ‘ಶುಗರ್‌ ಡ್ಯಾಡಿ’ಯಲ್ಲಿ ಬರೆದಿದ್ದೇನೆ. ಶುಗರ್‌ ಡ್ಯಾಡಿ ಯಾರು ಎಂಬುದನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದೇನೆ ಎಂದರು

ಶೀಘ್ರದಲ್ಲೇ 28 ಸೆಕೆಂಡ್​ಗಳ ಆಡಿಯೋ ಬಾಂಬ್​ ಬಿಡುಗಡೆ ಮಾಡಿ, ರಾಜಕೀಯ ವ್ಯಕ್ತಿಯ ಪ್ರಭಾವ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಡ್ರಕ್ಸ್ ಪ್ರಕರಣವನ್ನು ಸಾಕ್ಷಿ ಸಮೇತ ದಾಖಲೆ ರಿಲೀಸ್​ ಮಾಡಲಾಗುವುದು. ನನಗೆ ಯಾರೈ ಜೈಲಿಗೆ ಹೋಗಬೇಕು, ಕಷ್ಟ ಅನುಭವಿಸಬೇಕು ಎಂಬ ಹಠವಲ್ಲ. ಬದಲಾಗಿ ಡ್ರಗ್ಸ್ ಪಿಡುಗು ನಿರ್ಮೂಲನೆ ಆಗಬೇಕೆಂಬುದು ನನ್ನ ಇರಾದೆ. ಅನುಶ್ರೀಗೆ ಬೆಂಗಳೂರಿನ ಮನೆ, ಮಂಗಳೂರಿನ ಮನೆ ಹೇಗೆ ಬಂತು. 12 ಕೋಟಿಯ ಮನೆ ಹೇಗೆ ಬಂತು ಎಂದು ಅವರು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

Comments are closed.