ಕರ್ನಾಟಕ

ಇಂದು ಕಿಚ್ಚ ಸುದೀಪ್ ಬರ್ತ್ ಡೇ: ಕೊರೋನಾ ಹಿನ್ನೆಲೆ ಸರಳ ಆಚರಣೆ; ನಿನ್ನೆಯೇ ವಿಶ್ ಮಾಡಿದ ಚಿನ್ನದ ಹುಡುಗ ನೀರಜ್ ಚೋಪ್ರಾ..!

Pinterest LinkedIn Tumblr

ಬೆಂಗಳೂರು: ಇಂದು (ಸೆ.2) ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್‌ ಜನುಮ ದಿನ. ಹಾಗಾಗಿ ಅಭಿಮಾನಿಗಳ ಪಾಲಿಗೆ ಸಂಭ್ರಮದ ದಿನ ಎಂದರೂ ತಪ್ಪಾಗಲಾರದು.

ತಮ್ಮ ನೆಚ್ಚಿನ ನಟನ ಬರ್ತ್ ಡೇ ಹಿನ್ನೆಲೆ ಅಭಿಮಾನಿಗಳ ಸಂಭ್ರಮ ನಡೆಯುತ್ತಿದೆ. ಈ ಹಿಂದಿನ ವರ್ಷಗಳಲ್ಲಿ ಕಿಚ್ಚನ ಹುಟ್ಟುಹಬ್ಬವನ್ನು ಅಭಿಮಾನಿಗಳು ಸುದೀಪ್ ಮನೆ ಮುಂದೆ ಸೇರಿ ಆಚರಿಸುತ್ತಿದ್ದರು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದಿಂದ ಆ ಸಂಭ್ರಮ ನಡೆಯುತ್ತಿಲ್ಲ. ಈ ವರ್ಷವೂ ಸುದೀಪ್‌ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕಳೆದ ವಾರವೇ ಕಿಚ್ಚ ಸುದೀಪ್ ಅಭಿಮಾನಿಗಳು ಮನೆ ಸಮೀಪ ಬರಬಾರದು ಎಂದು‌ ಮನವಿ ಮಾಡಿಕೊಂಡಿದ್ದರು. ಅದರಂತೆಯೇ ಕಿಚ್ಚ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಸಾಮಾಜಿಕ ಕಾರ್ಯಗಳ ಮೂಲಕ ಆಚರಣೆ ಮಾಡುತ್ತಿದ್ದು ಸುದೀಪ್‌ ಚಾರಿಟೇಬಲ್‌ ಸೊಸೈಟಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ನೀರಜ್‌ ಚೋಪ್ರಾ ವಿಶ್‌…
ಈ ಬಾರಿ ಒಲಿಂಪಿಕ್ಸ್‌ ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ನೀರಜ್‌ ಚೋಪ್ರಾ ಕೂಡಾ ಬುಧವಾರದಂದು (ಒಂದು ದಿನ‌ಮುಂಚೆಯೇ) ಶುಭ ಕೋರಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಸುದೀಪ್‌ ಜೀ. ನಿಮ್ಮ ಮುಂದಿನ ಸಿನಿಮಾಗಳಿಗೆ ಒಳ್ಳೆಯದಾಗಲಿ’ ಎಂದವರು ವಿಶ್ ಮಾಡಿದ್ದರು.

Comments are closed.