ಕರ್ನಾಟಕ

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ; ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಿಸುವಂತೆ ಆರೋಗ್ಯ ತಜ್ಞರ ಸಲಹೆ

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ 50 ಸಾವಿರ ಪ್ರಕರಣಗಳು ವರದಿಯಾಗುವುದರೊಂದಿಗೆ ಕೋವಿಡ್-19 ಸಾಂಕ್ರಾಮಿಕದ ಅಬ್ಬರ ಹೆಚ್ಚಾಗಿದ್ದು, ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಿಸಬೇಕೆಂದು ಆರೋಗ್ಯ ತಜ್ಞರು ಗುರುವಾರ ಸಲಹೆ ನೀಡಿದ್ದಾರೆ.

ಇನ್ನೂ ಎರಡು ವಾರಗಳಲ್ಲಿ ರಾಜ್ಯದಲ್ಲಿ ಸೋಂಕು ಉತ್ತುಂಗಕ್ಕೆ ಏರಲಿದೆ ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್ ನ ಲೈಫ್ ಕೋರ್ಸ್ ಎಪಿಡೆಮಿಯಾಲಜಿ ಮುಖ್ಯಸ್ಥ ಡಾ. ಗಿರಿಧರ ಆರ್ ಬಾಬು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಟೆಸ್ಟಿಂಗ್ ಸಂಖ್ಯೆ ವಿಶೇಷವಾಗಿ ಬೆಂಗಳೂರಿನಲ್ಲಿ ಕಡಿಮೆ ಇರುವುದರಿಂದ ಸೋಂಕು ಪತ್ತೆ ಪ್ರಸ್ತುತ ಅನಿಯಮಿತವಾಗಿವೆ. ಉತ್ತುಂಗದ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆಯ ಬಗ್ಗೆ ಸ್ಪಷ್ಟತೆ ನೀಡುವುದಿಲ್ಲ, ಆದರೆ, ಟೆಸ್ಟಿಂಗ್ ಹೊರತಾಗಿಯೂ, ಮುಂದಿನ ಎರಡು ವಾರಗಳಲ್ಲಿ ಉತ್ತುಂಗಕ್ಕೇರುವುದನ್ನು ನಾವು ನೋಡಬಹುದಾಗಿದೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಡಾ. ಗಿರಿಧರ ಬಾಬು ಅವರು ಹೇಳಿದ್ದಾರೆ.

ಏಪ್ರಿಲ್ 27ರಿಂದ ಮೇ 12 ರವರೆಗಿನ ಲಾಕ್ ಡೌನ್ ಹೇರಿರುವ ರಾಜ್ಯಸರ್ಕಾರದ ನಿರ್ಧಾರವನ್ನು ಪ್ರಶಂಸಿಸಿರುವ ಬಾಬು, ಐಐಎಸ್ ಸಿ ಅಂದಾಜಿನಂತೆ 5800 ಜೀವವನ್ನು ರಕ್ಷಿಸಲಾಗಿದೆ. ಐಐಎಸ್ ಸಿ ಪ್ರೊಫೆಸರ್ ಶಶಿಕುಮಾರ್ ಗಣೇಶನ್ ಮಾಡೆಲ್ ಪ್ರಕಾರ, ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಲಾಕ್ ಡೌನ್ ನೆರವಾಗಲಿದೆ. ಆದ್ದರಿಂದ ಕನಿಷ್ಠ ಎರಡು ವಾರಗಳ ಮಟ್ಟಿಗೆ ಲಾಕ್ ಡೌನ್ ವಿಸ್ತರಿಸುವಂತೆ ಶಿಫಾರಸು ಮಾಡುವುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನಿಷ್ಠ 10 ರಿಂದ 14 ದಿನಗಳವರೆಗೆ ಸಾವುನೋವುಗಳು ಹೆಚ್ಚಾಗಲಿವೆ ಎಂದು ಹೇಳಿರುವ ಬಾಬು, ಸೋಂಕಿನ ಹೆಚ್ಚಳ ಹಿನ್ನೆಲೆಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಿರುವ ಕಡೆಗಳಲ್ಲಿ ಆಮ್ಲಜನಕದೊಂದಿಗೆ ತಪಾಸಣೆ ಮತ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆಯಬೇಕು, ಇಂತಹ ಕೇಂದ್ರಗಳು ಪ್ರತಿ ಐದು ಕಿಲೋಮೀಟರ್ ಗಳ ಅಂತರದಲ್ಲಿರಬೇಕು. ಆ ಮೂಲಕ ಬಿಕ್ಕಟ್ಟು ಸ್ವಲ್ಪ ಸುಧಾರಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.

Comments are closed.