ಕರ್ನಾಟಕ

ಕಲಬುರ್ಗಿಯಲ್ಲಿ ಆಕ್ಸಿಜನ್ ಸಿಗದೆ ನಾಲ್ವರು ಕೋವಿಡ್ ರೋಗಿಗಳು ಸಾವು

Pinterest LinkedIn Tumblr

ಕಲಬುರಗಿ: ನಿನ್ನೆ ತಾನೆ ಚಾಮರಾಜನಗರದಲ್ಲಿ ಆಮ್ಲಜನಕ ಸರಿಯಾದ ಸಮಯಕ್ಕೆ ಸಿಕ್ಕದ ಕಾರಣ 24 ಜನ ಸಾವನ್ನಪ್ಪಿರುವ ದುರ್ಘಟನೆ ಮರೆಯುವ ಮುನ್ನವೇ ಮತ್ತೊಂದು ಘಟನೆಯಲ್ಲಿ ಮಂಗಳವಾರ ಬೆಳಿಗ್ಗೆ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕು ಆಸ್ಪತ್ರೆಯಲ್ಲಿ 4 ಕೋವಿಡ್-19 ರೋಗಿಗಳು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಇರುವುದರಿಂದ ರೋಗಿಗಳು ದಾಖಲಾದ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯ ಸಾವು ಸಂಭವಿಸಿದೆ.

ಅಧಿಕೃತ ಮೂಲಗಳ ಪ್ರಕಾರ, ಆಸ್ಪತ್ರೆಯಲ್ಲಿ ಆಮ್ಲಜನಕ ದಾಸ್ತಾನು ಇಲ್ಲದ ಕಾರಣ ಬೆಳಗಿನ ಜಾವ 04:30ರ ವೇಳೆಗೆ ಸಾವು ಸಂಭವಿಸಿದೆ. ಒಟ್ಟಾರೆಯಾಗಿ, ಇನ್ನೂ 32 ರೋಗಿಗಳು ಆಮ್ಲಜನಕದ ಕೊರತೆಯಿಂದಾಗಿ ಜೀವನ್ಮರಣ ಹೋರಾಟದಲ್ಲಿದ್ದಾರೆ.

ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಎಂ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿ, “ಇದು ರಾಜ್ಯ ಸರ್ಕಾರವೇ ನಡೆಸಿರುವ ಹತ್ಯೆಯಲ್ಲದೆ ಮತ್ತೇನಲ್ಲ. ಉಪ ಆಯುಕ್ತರು ಒಂದೇ ಒಂದು ಸಭೆಯನ್ನು ಸಹ ಕರೆದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಅವರು ಅದರಲ್ಲಿ ಆಸಕ್ತಿ ಹೊಂದಿಲ್ಲ ಮತ್ತು ಎಚ್ಚರಿಕೆ ಮತ್ತು ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಜಿಲ್ಲೆಗೆ ಸಂಬಂಧಿಸಿದ ಆಮ್ಲಜನಕದ ಸಿಲಿಂಡರ್‌ಗಳನ್ನು ನೆರೆಯ ಮಹಾರಾಷ್ಟ್ರದ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ” ಎಂದು ಆರೋಪಿಸಿದ್ದಾರೆ.

ಘಟನೆ ಸಂಬಂಧ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಕಲಬುರಗಿ ಡಿ.ಎಚ್.ಒ. ಅವರಿಂದ ಮಾಹಿತಿ ಪಡೆದಿದ್ದಾರೆ.

Comments are closed.