ಕರ್ನಾಟಕ

ಕೊರೊನಾ ಮಾರ್ಗಸೂಚಿಯಲ್ಲಿ ಮತ್ತೆ ಬದಲಾವಣೆ ಮಾಡಿದ ಸರಕಾರ; ಕೆಲವು ಸೇವೆಗಳಿಗೆ ಸಂಜೆ 6ರವರೆಗೆ ಅವಕಾಶ; ವಾರದ ಸಂತೆಗಳನ್ನು ಬಂದ್

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಪ್ರಮಾಣ ಹೆಚ್ಚಾಗಿರುವಂತೆಯೇ ಇತ್ತ ಕರ್ನಾಟಕ ಸರ್ಕಾರ ಕೋವಿಡ್ ಮಾರ್ಗ ಸೂಚಿಗಳಲ್ಲಿ ಬದಲಾವಣೆ ಮಾಡಿದ್ದು, ವಾರದ ಸಂತೆಗಳನ್ನು ಬಂದ್ ಮಾಡಿ ಆದೇಶ ನೀಡಿದೆ.

ಮಾರುಕಟ್ಟೆಯಲ್ಲಿ ಆಗುತ್ತಿರುವ ಜನಸಂದಣಿ, ನೂಕುನುಗ್ಗಲು ತಡೆಗಟ್ಟಲು ಮೇ 2 ರಿಂದಲೇ ಅನ್ವಯವಾಗುವಂತೆ ಎಲ್ಲಾ ರೀತಿಯ ಸಂತೆ ಮತ್ತು ವಾರದ ಸಂತೆಗಳನ್ನು ನಿರ್ಬಂಧಿಸಲಾಗಿದೆ.

ಆದರೆ ಅಗತ್ಯ ಸೇವೆಗಳಲ್ಲಿ ಒಂದಿಷ್ಟು ಬದಲಾವಣೆ ಮಾಡಲಾಗಿದೆ. ಹಾಪ್‌ಕಾಮ್ಸ್‌, ತಳ್ಳು ಗಾಡಿಗಳು, ಹಾಲಿನ ಬೂತ್‌ಗಳಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ನೀಡಲಾಗಿದ್ದ ಅನುಮತಿಯನ್ನು ಸಂಜೆ 6 ಗಂಟೆವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ನಂದಿನ ಹಾಲಿನ ಬೂತ್‌ಗೆ ರಾತ್ರಿ 8 ಗಂಟೆವರೆಗೆ ಅವಕಾಶ ನೀಡಿ ಮಾರ್ಗಸೂಚಿಯಲ್ಲಿ ತಿದ್ದುಪಡಿ ಮಾಡಲಾಗಿತ್ತು. ಅದನ್ನೀಗ ಸಂಜೆ 6 ಗಂಟೆಗೆ ಇಳಿಸಲಾಗಿದೆ.

ಎಪಿಎಂಸಿ, ದಿನಸಿ ಅಂಗಡಿ ಸಮಯವೂ ಬದಲು
ಇದೇ ವೇಳೆ ಎಪಿಎಂಸಿ ಹಾಗೂ ದಿನಸಿ ಅಂಗಡಿ ಸಮಯವನ್ನೂ ಬದಲಾಯಿಸಲಾಗಿದೆ. ಇವುಗಳಿಗೆ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅವಕಾಶ ನೀಡಲಾಗಿತ್ತು. ಇದನ್ನೀಗ 12 ಗಂಟೆವರೆಗೆ ವಿಸ್ತರಿಸಲಾಗಿದೆ.

Comments are closed.