ಕರ್ನಾಟಕ

ನಾಳೆ 18-4 ವರ್ಷದವರಿಗೆ ಕೊರೋನಾ ಲಸಿಕೆ ಸಿಗಲ್ಲ ಎಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಈವರೆಗೆ 45 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿತ್ತು. ನಾಳೆಯಿಂದ ಅಂದರೆ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ನಾಳೆಯಿಂದ 18-44 ವರ್ಷದವರಿಗೆ ಕೊರೋನಾ ಡೋಸ್ ಸಿಗುವುದು ಅನುಮಾನ. ಹೌದು, ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಅಧಿಕೃತ ಮಾಹಿತಿ ನೀಡಿದ್ದಾರೆ. ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ 18-4 ವರ್ಷದವರಿಗೆ ಕೊರೋನಾ ಲಸಿಕೆ ಸಿಗಲ್ಲ ಎಂದು ಅಧಿಕೃತವಾಗಿ ಹೇಳಿದ್ದಾರೆ.

ಮುಂದುವರೆದ ಅವರು, 18 ವಯಸ್ಸಿನಿಂದ ದಿಂದ 44 ವಯಸ್ಸಾದವರು ಡೋಸ್ ಪಡೆಯಲು ಅರ್ಹರು. ಅದರ ಅನ್ವಯ 3ರಿಂದ ಮೂರುವರೆ ಕೋಟಿ ಜನ ರಾಜ್ಯದಲ್ಲಿ ಇದ್ದಾರೆ ಎಂಬ ಅಂದಾಜಿದೆ. ರಾಜ್ಯ ಸರ್ಕಾರ 400 ಕೋಟಿಗೆ 1 ಕೋಟಿ ಡೋಸ್ ಪಡೆಯಲು ಆರ್ಡರ್ ಮಾಡಿದೆ. ಹೈದ್ರಾಬಾದ್ ಮೂಲದ ಬಯೋಟೆಕ್, ರಷ್ಯಾ ಮೂಲದ ಸ್ಟೂಟ್ನಿಕ್, ರೆಡ್ಡಿ ಲ್ಯಾಬೋರೇಟಿ ಸಂಸ್ಥೆಗಳು ಡೋಸ್ ನೀಡಲಿದ್ದಾರೆ.

18 ರಿಂದ 44 ವಯಸ್ಸಿನವರು ಕೋವಿಡ್ ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು. ನಮಗೆ ಇನ್ನೂ ಡೆಲವರಿ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ನಾಳೆ ಅಧಿಕೃತ ಮಾಹಿತಿ ನೀಡುವವರೆಗೆ ನೋಂದಣಿ ಮಾಡಿಕೊಂಡವರು ಯಾರೂ ಆಸ್ಪತ್ರೆಯ ಬಳಿ ಹೋಗಬಾರದು. ಅಧಿಕೃತವಾಗಿ ಆ ಕಂಪನಿಗಳು ತಿಳಿಸಿದ ಮೇಲೆ ತಮಗೆ ತಿಳಿಸುವೆ ಎಂದು ಹೇಳಿದರು.

ಡೋಸ್ ವಿಚಾರದಲ್ಲಿ ಒತ್ತಾಯ, ಒತ್ತಡ ಮಾಡಲು ಸರ್ಕಾರ ಸಿದ್ದವಿದೆ. ಉಚಿತ ವ್ಯಾಕ್ಸಿನ್ ವಿಚಾರದಲ್ಲಿ ಗೊಂದಲ ಬೇಡ. ಈವರೆಗೂ 99 ಲಕ್ಷ ಡೋಸ್ ಬಂದಿದ್ದು, ಈಗಾಗಲೇ 95 ಲಕ್ಷ ಡೋಸ್ ನೀಡಲಾಗಿದೆ, ಕೇಂದ್ರಕ್ಕೂ ಮನವಿ ಮಾಡ್ತಿದ್ದೇವೆ. ಈವರೆಗೆ ರಾಜ್ಯದಲ್ಲಿ 6 ಲಕ್ಷ ಡೋಸ್ ಇದೆ ಎಂಬ ಮಾಹಿತಿ ಇದೆ ಎಂದರು.

ಜೊತೆಗೆ 18 ವರ್ಷದಿಂದ 44 ವರ್ಷದವರಿಗೆ ನಾಳೆ ಡೋಸ್ ಸಿಗಲ್ಲ ಎಂದು ಅಧಿಕೃತವಾಗಿ ಮಾಹಿತಿ ನೀಡಿದರು.

ಕರ್ಫ್ಯೂ ಇದ್ರು ಜನರು ಬೇಕಾಬಿಟ್ಟಿ ಓಡಾಟ ಮಾಡುತ್ತಿದ್ದಾರೆ ಎಂಬ ಮಾತಿಗೆ, ನಿಮ್ಮ‌ ನಿಮ್ಮ ಜವಾಬ್ದಾರಿಯನ್ನು ಪಾಲನೆ ಮಾಡಿ, ಜನರ ಕಷ್ಟದ ಬಗ್ಗೆ ತೋರಿಸುತ್ತಿದ್ದೀರಾ. ಮಾರ್ಗಸೂಚಿಯನ್ನು ನಾವು ಕೊಡ್ತಿದ್ದೇವೆ. ಜನ‌ ಅದನ್ನು ಪಾಲನೆ ಮಾಡಬೇಕು. ಕೇಂದ್ರದಿಂದ ನಮಗೆ ಬಂದಿರೋದು 99.5 ಲಕ್ಷ ಡೋಸ್ ವ್ಯಾಕ್ಸಿನ್ ಎಂದರು.

ಇನ್ನು, ಯಾದಗಿರಿ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೇ ರೋಗಿಗಳು ಪರದಾಟ ನಡೆಸುತ್ತಿರುವ ವಿಚಾರವಾಗಿ, ನನಗೆ ಅವ್ಯವಸ್ಥೆ ಬಗ್ಗೆ ಮಾಹಿತಿ ಇಲ್ಲ. ತಿಳಿದುಕೊಂಡು ಈ ಬಗ್ಗೆ ಮಾತನಾಡುವೆ ಎಂದು ಹೇಳಿದರು.

Comments are closed.