ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಂಗಳವಾರ ಮೇಜರ್ ಸರ್ಜರಿ ಮಾಡಿದ್ದು, ರೈಲ್ವೆ ಎಡಿಜಿಪಿ ಹುದ್ದೆಗೆ ಭಾಸ್ಕರ್ ರಾವ್ ಅವರನ್ನು ವರ್ಗಾವಣೆ ಮಾಡಿದೆ.
ಭಾಸ್ಕರ್ ರಾವ್ ಅವರೊಂದಿಗೆ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿದ್ದ ಭಾಸ್ಕರ್ ರಾವ್ ಅವರ ಸ್ಥಾನಕ್ಕೆ ರೈಲ್ವೆ ಎಡಿಜಿಪಿಯಾಗಿದ್ದ ಅರುಣ್ ಚಕ್ರವರ್ತಿ ಅವರನ್ನು ನೇಮಕ ಮಾಡಲಾಗಿದೆ.
ಭಾಸ್ಕರರಾವ್ -ಎಡಿಜಿಪಿ ರೈಲ್ವೆ, ಪ್ರಶಾಂತ್ ಕುಮಾರ್ ಠಾಕೂರ್ -ಎಡಿಜಿಪಿ ಲೋಕಾಯುಕ್ತ, ಡಾ.ಎಸ್. ಮೂರ್ತಿ – ಎಡಿಜಿಪಿ ಮತ್ತು ಎಂಡಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ, ಡಾ.ಕೆ. ರಾಮಚಂದ್ರರಾವ್ -ಎಡಿಜಿಪಿ ಬಿಎಂಟಿಎಫ್, ಅರುಣ್ ಚಕ್ರವರ್ತಿ -ಎಡಿಜಿಪಿ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾಯಿಸಲಾಗಿದೆ.