ಕರ್ನಾಟಕ

ಶೃಂಗೇರಿ ನಗರದ ಬಹುದಿನಗಳ ಬೇಡಿಕೆ ಈಡೇರಿಕೆ: ಜನರ ಕನಸು ಸಾಕಾರಗೊಳ್ಳುವ ಸಮಯ

Pinterest LinkedIn Tumblr

ಚಿಕ್ಕಮಗಳೂರು: ಶೃಂಗೇರಿ ಪಟ್ಟಣದ ಮದ್ಯೆ ಹಾದು ಹೋಗುತ್ತಿರುವ ಎರಡು ಲೇನಿನ ರಾಷ್ಟ್ರೀಯ ಹೆದ್ದಾರಿ-169ನ್ನು ಉನ್ನತೀಕರಿಸಿ 4 ಲೇನುಗಳ ಹೆದ್ದಾರಿಯನ್ನಾಗಿಸಲು ಸಂಸದೆ ಶೋಭಾ ಕರಂದ್ಲಾಜೆಯವರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಕೇಂದ್ರ ಭೂ ಸಾರಿಗೆ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ-169ರ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ರೂಪಾಯಿ 87.19 ಕೋಟಿಗಳಿಗೆ ಅನುಮೋದನೆ ನೀಡಿದೆ.

ರಾಷ್ಟ್ರೀಯ ಹೆದ್ದಾರಿ-169ಯ ಒಟ್ಟು 5.00 ಕಿ. ಮೀ ಉದ್ದದವರೆಗೆ 4 ಲೇನುಗಳಿಗೆ ಉನ್ನತೀಕರಿಸಿ, ಅಭಿವೃದ್ಧಿಗೊಳಿಸುವ ಕಾಮಗಾರಿಗೆ, ಪ್ರತೀ ಕಿಲೋ ಮೀಟರುಗಳಿಗೆ 17.44 ಕೋಟಿ ರೂಪಾಯಿಗಳಂತೆ, ಒಟ್ಟು 87.18 ಕೋಟಿ ರೂಪಾಯಿಗಳ ಕಾಮಗಾರಿಗೆ ಕೇಂದ್ರ ಭೂ ಸಾರಿಗೆ ಸಚಿವಾಲಯ ಅನುಮೋದನೆ ನೀಡಿದೆ.

ಶೃಂಗೇರಿ ತಾಲೂಕು ಹಾಗೂ ಪಟ್ಟಣದ ಬಹಳ ವರ್ಷಗಳ ಬೇಡಿಕೆಯಾಗಿದ್ದ, ಪಟ್ಟಣದ ಮದ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-169ರ ಅಗಲೀಕರಣ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ 87.19 ಕೋಟಿ ರೂಪಾಯಿಗಳ ಅನುದಾನವನ್ನು ನೀಡಿ ಸಹಕರಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ, ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Comments are closed.