ಕರ್ನಾಟಕ

ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ‘ಎಟಿಎಂ ರಕ್ಕಸ’ ಮಧುಕರ ರೆಡ್ಡಿಗೆ ಶಿಕ್ಷೆ..!

Pinterest LinkedIn Tumblr

ಬೆಂಗಳೂರು: 2013ರಲ್ಲಿ ಬೆಂಗಳೂರು ನಗರದ ಎನ್.ಆರ್. ಸ್ಕ್ವೇರ್ ನಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಮಾರಣಾಂತಿಕವಾಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ ಆರೋಪಿ ಮಧುಕರ್ ರೆಡ್ಡಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಿ ನಗರದ 65ನೇ ಸಿಸಿಎಚ್ ಕೋರ್ಟ್ ತೀರ್ಪು ಪ್ರಕಟಿಸಿದೆ.

ನವೆಂಬರ್ 19, 2013ರ ಬೆಳಗ್ಗೆ ಎಟಿಎಂ ಗೆ ಹಣ ವಿತ್ ಡ್ರಾಗೆ ಬಂದಿದ್ದ ಬ್ಯಾಂಕ್ ಮ್ಯಾನೇಜರ್ ಜ್ಯೋತಿ ಉದಯ್ ಎನ್ನುವವರ ಮೇಲೆ ಆರೋಪಿ ಮಧುಕರ್ ಮಾರಣಾಂತಿಅಕ ಹಲ್ಲೆ ನಡೆಸಿದ್ದ. ಹಲ್ಲೆ ನಡೆಸಿದ ಬಳಿಕ ಹಣದೊಡನೆ ಪರಾರಿಯಾಗಿದ್ದ ಆರೋಪಿ ಹಲವಾರು ವರ್ಷಗಳ ಕಾಲ ನಾಪತ್ತೆಯಾಗಿದ್ದ. ಹಲ್ಲೆಗೊಳಗಾಗಿದ್ದ ಜ್ಯೋತಿ ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಎಸ್​.ಜೆ. ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ​ಎಟಿಎಂ ನಲ್ಲಿ ನಡೆದಿದ್ದ ಈ ಘಟನೆ ಬೆಂಗಳೂರಿಗರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಫೆಬ್ರವರಿ 2017 ರಲ್ಲಿ ಮದನಪಲ್ಲಿ ಪೊಲೀಸರು ಆತನನ್ನು ಬಂಧಿಸುವಲ್ಲಿ ಸಫಲವಾಗಿದ್ದರು,

ಬಾಡಿ ವಾರಂಟ್ ನೊಂದಿಗೆ ಆರೋಪಿಯನ್ನು ಬೆಂಗಳೂರಿಗೆ ಕರೆತಂದಿದ್ದ ಪೋಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನಾಲ್ಕು ವರ್ಷ ಕಾಲ ವಾದ ಆಲಿಸಿದ್ದ ನ್ಯಾಯಾಲಯ ನಿನ್ನೆ ಮಧುಕರ್ ರೆಡ್ಡಿ ಅಪರಾಧಿ ಎಂದು ತೀರ್ಪು ನೀಡಿದೆ.

Comments are closed.