ಕರ್ನಾಟಕ

ಜ.8ರಿಂದ ರಾಜ್ಯದ 30 ಜಿಲ್ಲೆಗಳಲ್ಲಿ ಕೊರೋನಾ ಲಸಿಕೆ ವಿತರಣೆಯ ಪೂರ್ವಾಭ್ಯಾಸ ನಡೆಸಲು ಆರೋಗ್ಯ ಇಲಾಖೆ ಸಿದ್ಧತೆ

Pinterest LinkedIn Tumblr

ಬೆಂಗಳೂರು: ಕೊರೋನಾ ಸೋಂಕಿಗೆ ಲಸಿಕೆ ವಿತರಣೆಗೆ ಶೀಘ್ರದಲ್ಲಿಯೇ ಆರಂಭವಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಕೊರೋನಾ ಲಸಿಕೆ ವಿತರಣೆಯ ಪೂರ್ವಾಭ್ಯಾಸ ನಡೆಸಲು ಆರೋಗ್ಯ ಇಲಾಖೆ ಸಿದ್ಧತೆ ನಡಸಿದೆ.

ಜನವರಿ 2 ರಂದು ರಾಜ್ಯದ 5 ಜಿಲ್ಲೆಗಳ 16 ಕೇಂದ್ರಗಳಲ್ಲಿ ನಡೆದಿದ್ದ ಪೂರ್ವಾಭ್ಯಾಸ ಬಹುತೇಕ ಯಶಸ್ವಿಯಾಗಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳ ತಲಾ ಐದು ಆರೋಗ್ಯ ಕೇಂದ್ರಗಳಲ್ಲಿ 150ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳಲ್ಲಿ ಪೂರ್ವಾಭ್ಯಾಸ ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ನಾಳೆ ನಡೆಸುವ ಲಸಿಕೆ ತಾಲೀಮುಗಳಲ್ಲಿ ಖಾಸಗಿ ಆಸ್ಪತ್ರೆಗಳನ್ನೂ ಕೂಡ ಸೇರಿಸಿಕೊಳ್ಳಬೇಕು ಎಂಬ ಚರ್ಚೆಗಳು ಆರಂಭವಾಗಿದೆ.

ಪ್ರಾಥಣಿಕ ಆರೋಗ್ಯ ಕೇಂದ್ರಗಳಿಗೆ ತಲಾ 25 ಫಲಾನುಭವಿಗಳನ್ನು ಮತ್ತು ಖಾಸಗಿ ಆಸ್ಪತ್ರೆಗಳಿಗೆ 100 ಫಲಾನುಭವಿಗಳನ್ನು ನಿಗದಿಪಡಿಸುವ ಚಿಂತನೆ ನಡೆದಿದೆ.

ಉಳಿದಂತೆ ಪೂರ್ವಾಭ್ಯಾಸ ಪ್ರಕ್ರಿಯಗಳು ಜನವರಿ 2 ರಂದು ನಡೆದಿದ್ದ ಮಾದರಿಯಲ್ಲಿಯೇ ನಡೆಯಲಿವೆ. ಫಲಾನಭವಿಗಳಿಗೆ ಮಾಹಿತಿ ನೀಡುವುದು, ಲಸಿಕಾ ಕೇಂದ್ರದಲ್ಲಿನ ವ್ಯವಸ್ಥೆ ಮತ್ತು ಸಿದ್ಧತೆ, ಭದ್ರತೆ, ಲಸಿಕೆ ಸಾಗಾಣಿಕೆ, ಕೋವಿಡ್ ಅಪ್ಲಿಕೇಷನ್ ಬಳಕೆ ಮುಂತಾದ ಅಂಶಗಳು ಲಸಿಕೆ ವಿತರಣಯ ಶಿಷ್ಟಾಚಾರದಂತಯೇ ಇರಲಿವೆ.

ಪ್ರತೀ ಜಿಲ್ಲೆಗಳಲ್ಲಿ 5-6 ಕೇಂದ್ರಗಳಲ್ಲಿ ಲಸಿಕೆಯ ತಾಲೀಮು ನಡೆಯಲಿದ್ದು, 25 ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜ.2ರಂದು ನಡೆಸಲಾಗಿದ್ದ ಲಸಿಕೆ ತಾಲೀಮು ವೇಳೆ ಎದುರಾಗಿದ್ದ ಸವಾಲುಗಳು ಗಮನಕ್ಕೆ ಬಂದಿದ್ದು, ಈಗಾಗಲೇ ಕೇಂದ್ರಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದ. ಕೇಂದ್ರ ಸರ್ಕಾರ ನಿರ್ದೇಶನದಂತೆಯೇ ಲಸಿಕೆ ವಿತರಣೆ ತಾಲೀಮು ನಡೆಸುತ್ತಿದ್ದೇವೆ. ತಾಲೀಮಿನಿಂದ ಲಸಿಕೆ ವಿತರಣೆ ವೇಳೆ ಎದುರಾಗುವ ಸಮಸ್ಯೆಗಳು ಮುಂಚಿತವಾಗಿಯೇ ತಿಳಿದುಬರಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆಯವರು ಹೇಳಿದ್ದಾರೆ.

Comments are closed.