ಕರ್ನಾಟಕ

ಬೆಂಗಳೂರಿನಲ್ಲಿ ಫೈವ್​ ಸ್ಟಾರ್ ಹೋಟೆಲ್​ ಗೆ ಬರುವವರ ಸಂಖ್ಯೆ ಎಷ್ಟು ಕಡಿತವಾಗಿದೆ ಗೊತ್ತಾ?: ಬಂದ್ ಆಗುವ ಮಟ್ಟಕ್ಕೆ ಹೋದ ಹೋಟೆಲ್ ಗಳು

Pinterest LinkedIn Tumblr


ಕೊರೋನಾ ಬಂದ ಬಳಿಕ ಒಂದು ಊಟಕ್ಕೆ ಸಾವಿರ ರೂಪಾಯಿ ಖರ್ಚು ಮಾಡ್ತಿದ್ದವ್ರೆಲ್ಲಾ ಬಜೆಟ್ ಇಲ್ಲಾ ಅಂತಾ ಸ್ಟಾರ್ ಹೋಟೆಲ್​ ಕಡೆಗೆ ತಲೆ ಹಾಕೋದೆ ಬಿಟ್ಟಿದ್ದಾರೆ. ಬೆಂಗಳೂರಿನಲ್ಲ್ಲಿ ಫೈವ್‌ ಸ್ಟಾರ್‌ ಹೋಟೆಲ್‌ಗಳು ಒಂದೊಂದಾಗಿ ಬಂದ್ ಆಗೋ ಲೆವಲ್​ಗೆ ಕೊರೋನಾ​ ಬಿಸಿ ತಟ್ಟಿದೆ. ಜತೆಗೆ ಬೇರೆ ಊರಿಂದ ಸಿಲಿಕಾನ್ ಸಿಟಿ ಸೌಂದರ್ಯ ಸವಿಯೋಕೆ ಬರ್ತಾ ಇದ್ದ ಟೂರಿಸ್ಟ್​ಗಳು ಬೆಂಗಳೂರಿಗೆ ಸದ್ಯ ಕೊರೊನಾ ಭಯದಿಂದ ಆಗಮಿಸ್ತಿಲ್ಲ.

ಇನ್ನು ಸಿಟಿಯಲ್ಲಿ ಐಟಿ ಕಂಪನಿಗಳು ಸಡನ್ ಕ್ಲೋಸ್‌ ಆಗಿದೆ. ಟೆಕ್ಕಿಗಳು ವರ್ಕ್‌ ಫ್ರಂ ಹೋಮ್ ಮಾಡ್ತಿದ್ದಾರೆ. ಗಣನೀಯವಾಗಿ ಹೈಫೈ ಹೊಟೇಲ್​ಗಳಿಗೆ ಬರುವವರ ಸಂಖ್ಯೆ ಶೇಕಡಾ 60-70ರಷ್ಟು ಕಡಿಮೆಯಾಗಿದೆ ಎಂದು ಹೊಟೇಲ್​ ಮಾಲೀಕರು ಹೇಳಿದ್ದಾರೆ.

Comments are closed.