ಕರ್ನಾಟಕ

ವಾರದೊಳಗೆ ವಾಟ್ಸ್ಆ್ಯಪ್ ಮೆಸೇಜ್ ಅಟೋಮ್ಯಾಟಿಕ್ ಡಿಲೀಟ್!

Pinterest LinkedIn Tumblr


ಜನಪ್ರಿಯ ವಾಟ್ಸ್​ಆ್ಯಪ್​ ಸಂದೇಶಗಳನ್ನ ಅಟೋಮ್ಯಾಟಿಕ್​ ಆಗಿ ಅಳಿಸುವ ಫೀಚರ್​ ಪರಿಚಯಿಸಲಿದೆ ಎಂದು ಈ ಹಿಂದೆಯೇ ಹೇಳಿತ್ತು. ಆದರೀಗ ಈ ನೂತನ ಫೀಚರ್​ ಬಗ್ಗೆ ಟೆಸ್ಟಿಂಗ್​ ನಡೆಸುತ್ತಿದೆ. ಸದ್ಯದಲ್ಲೇ ಗ್ರಾಹಕರಿಗೆ ಸಂದೇಶ ಅಳಿಸುವ ಫೀಚರ್​ ವಾಟ್ಸ್​ಆ್ಯಪ್​ನಲ್ಲಿಸ ಸಿಗಲಿದೆ.

ವಾಟ್ಸ್​ಆ್ಯಪ್​ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ. ಭಾರತ ಮಾತ್ರವಲ್ಲದೆ, ಹಲವಾರು ದೇಶಿಗರು ವಾಟ್ಸ್ಆ್ಯಪ್​ ಬಳಸುತ್ತಿದ್ದಾರೆ. ಅದರ ಮೂಲಕ ಸಂದೇಶ, ವಿಡಿಯೋ, ಆಡಿಯೋ, ಧ್ವನಿ ಕರೆ, ವಿಡಿಯೋ ಕರೆ, ಫೋಟೋ, ಫೈಲ್​ಗಳನ್ನು ಕಳುಹಿಸುತ್ತಿದ್ದಾರೆ. ಆದರೆ ಬಳಕೆದಾರರು ಕಳುಹಿಸಿರುವ ಸಂದೇಶಗಳನ್ನು ಹಾಗೆಯೇ ಉಳಿದಿರುತ್ತದೆ, ಇದರಿಂದ ಸ್ಮಾರ್ಟ್​ಫೋನ್​ ಸ್ಟೊರೇಜ್​ ಫುಲ್ ಆಗುವ ಸಾಧ್ಯತೆಯಿದೆ.

ಹಾಗಾಗಿ ಈ ಸಮಸ್ಯೆಯನ್ನು ಹೋಗಲಾಡಿಸಲು ವಾಟ್ಸ್​ಆ್ಯಪ್​ ಡಿಸೆಪಿಯರಿಂಗ್​ ಫೀಚರ್​​ ಅನ್ನು ಪರಿಚಯಿಸುವ ಮುಂದಾಗಿದ್ದು, ಸದ್ಯ ಟೆಸ್ಟಿಂಗ್​ ನಡೆಸುತ್ತಿದೆ. ನೂತನ ಫೀಚರ್​ ಅನ್ನು ಸದ್ಯದಲ್ಲೆ ವಾಟ್ಸ್​ಆ್ಯಪ್​ ಪರಿಚಯಿಸುವ ಮುನ್ಸೂಚನೆ ಕಾಣುತ್ತಿದೆ. 7 ದಿನದ ಒಳಗೆ ಸಂದೇಶವನ್ನು ಅಟೋಮ್ಯಾಟಿಕ್​ ಆಗಿ ಅಳಿಸಿಹಾಕುವಂತೆ ಫೀಚರ್​ ಅಭಿವೃದ್ಧಿ ಪಡಿಸಿದೆ.

ಆ್ಯಂಡ್ರಾಯ್ಡ್​ ಮತ್ತು ಐಒಎಸ್​ ಬಳಕೆದಾರರಿಗೆ ಈ ನೂತನ ಫೀಚರ್​ ಸಿಗಲಿದೆ. ಆದರೆ ಯಾವಾಗ ವಾಟ್ಸ್​ಆ್ಯಪ್​ ಡಿಸೆಪಿಯರಿಂಗ್​ ಫೀಚರ್​ ಸಿಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

Comments are closed.