ಕರ್ನಾಟಕ

ಸಲೂನ್ ನಲ್ಲಿ ವೇಶ್ಯಾವಾಟಿಕೆ ದಂಧೆ: ಯುವತಿಯರ ರಕ್ಷಣೆ

Pinterest LinkedIn Tumblr


ಬೆಂಗಳೂರು: ಸಲೂನ್ ಮತ್ತು ಸ್ಪಾ ದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪುಟ್ಟೇನಹಳ್ಳಿ ಪೊಲೀಸರು, ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಪಿಂಪ್ ಗಳಾದ ಸ್ಪಾ ಮಾಲೀಕಳಾದ ಕವಿತಾ (27) ಮತ್ತು ಪ್ರಭು (42) ಬಂಧಿತ ಆರೋಪಿಗಳು. ಆರೋಪಿಗಳಿಂದ 2500 ರೂ.ನಗದು, ಭಾರತ್ ಸೈಪ್ ಎಂಬ ಡೆಬಿಟ್ , ಕ್ರೆಡಿಟ್ ಕಾರ್ಡ್ ಸ್ವೀಪಿಂಗ್ ಮಿಷನ್, ಒಂದು ಓಪೋ ಮೊಬೈಲ್ ಫೋನ್, ಸ್ಯಾಮ್ ಸಾಂಗ್ ಜೆ8 ಮೊಬೈಲ್ ಫೋನ್, ಒಂದು ಓಪೋ ಮೊಬೈಲ್ ಪೋನ್ ಅನ್ನು ವಶಪಡಿಸಿಕೊಂಡಿದ್ದಾರೆ.

ಅ.8ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಳಿಮಾವು, ಬನ್ನೇರುಘಟ್ಟ ಮುಖ್ಯರಸ್ತೆ, ಹುಳಿಮಾವು ಗೇಟ್ ನಂ.73/2, 1ನೇ ಮಹಡಿಯಲ್ಲಿರುವ ಕೆಪಿಎಸ್ ಹೇವನ್ ಸೆಲೂನ್ ಮತ್ತು ಸ್ಪಾದಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಹುಡುಗಿಯರಿಗೆ ಹಣದ ಸಹಾಯ ಮಾಡುವುದಾಗಿ ಹಾಗೂ ಹೆಚ್ಚಿನ ಹಣ ಸಂಪಾದನೆ ಮಾಡಬಹುದೆಂದು ಆಮಿಷ ತೋರಿಸಿ ತಮ್ಮ ಕೆಪಿಎಸ್ ಹೇವನ್ ಸೆಲೂನ್ ಮತ್ತು ಸ್ಪಾದಲ್ಲಿ ಅಕ್ರಮವಾಗಿ ಇಟ್ಟುಕೊಂಡು ಸ್ಪಾಗೆ ಬರುವ ಗಿರಾಕಿಗಳಿಂದ 2000 ರಿಂದ 3000 ರೂ.ಗಳವರೆಗೆ ಹಣ ಪಡೆದುಕೊಂಡು ಈ ಹುಡುಗಿಯರನ್ನು ಲೈಂಗಿಕ ಕ್ರಿಯೆಗಳಿಗೆ ಒದಗಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಕಂಡುಬಂದಿದೆ.

ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ ನಾಲ್ವರು ಸಂತ್ರಸ್ತೆ ಯುವತಿಯರನ್ನು ರಕ್ಷಿಸಲಾಗಿದೆ. ಆರೋಪಿಗಳು ಸಂಘಟಿತ ರೀತಿಯಲ್ಲಿ ತಮ್ಮದೇ ಜಾಲವನ್ನು ರಚಿಸಿ ಅಮಾಯಕ ಹೆಣ್ಣು ಮಕ್ಕಳನ್ನು ಕರೆಯಿಸಿಕೊಂಡು ಅವರಿಗೆ ವೇಶ್ಯಾವಾಟಿಕೆ ನಡೆಸಿದರೆ ಹೆಚ್ಚಿನ ಹಣ ಸಂಪಾದನೆ ಮಾಡಬಹುದೆಂದು ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದರು. ಮಾತ್ರವಲ್ಲ ಗಿರಾಕಿಗಳನ್ನು ಫೋನ್, ಆಪ್ ಗಳ ಮೂಲಕ ಸಂಪರ್ಕ ಮಾಡಿಕೊಂಡು ವೇಶ್ಯಾವಾಟಿಕೆ ಬರಮಾಡಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸಿ ಅಕ್ರಮ ಹಣ ಸಂಪಾದನೆ ಮಾಡುತ್ತಿರುವುದು ಕಂಡುಬಂದಿದೆ. ಆರೋಪಿಗಳು ಬೃಹತ್ ವೇಶ್ಯಾವಾಟಿಕೆ ಜಾಲವನ್ನು ಹೊಂದಿದ್ದು, ತನಿಖೆ ಪ್ರಗತಿಯಲ್ಲಿದೆ.

ಆರೋಪಿಗಳ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಅಪರಾಧ-1 ವಿಭಾಗದ ಡಿಸಿಪಿ ರವಿಕುಮಾರ್, ಸಹಾಯಕ ಪೊಲೀಸ್ ಆಯುಕ್ತ ಹನುಮಂತರಾಯ ಮಾರ್ಗದರ್ಶನದಲ್ಲಿ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳಾದ ಅಂಜುಮಾಲ ಟಿ ನಾಯಕ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Comments are closed.