
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು (ಗುರುವಾರ) 70ನೇ ಹುಟ್ಟುಹಬ್ಬದ ಸಂಭ್ರಮ.
ಬೆಂಗಳೂರಿನಲ್ಲಿ ಮೋದಿ ಅವ್ರ ಹುಟ್ಟುಹಬ್ಬದ ಅಂಗವಾಗಿ ವಸತಿ ಸಚಿವ ವಿ.ಸೋಮಣ್ಣ ಸೈಕಲ್ ಜಾಥ ಹಾಗೂ ಲಡ್ಡು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಮಾರುತಿ ಮಂದಿರದಿಂದ ಬಿಜಿಎಸ್ ಗ್ರೌಂಡ್ ವರೆಗೂ ಸೈಕಲ್ ರ್ಯಾಲಿ ನಡೆಯಿತು.
ಸಚಿವ ವಿ.ಸೋಮಣ್ಣಗೆ ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಸೇರಿ ಹಲವರು ಸಾಥ್ ನೀಡಿದ್ರು. ಇದೇ ವೇಳೆ 70 ಕೆ.ಜಿಯ ಲಡ್ಡು ಕಟ್ ಮಾಡಲಾಯ್ತು. ಕೇಕ್ ಬದಲಿಗೆ ಲಡ್ಡು ಕತ್ತರಿಸಿ ಸಿಹಿ ವಿತರಣೆ ಮಾಡಲಾಯ್ತು.
ನರೇಂದ್ರ ಮೋದಿಯವರೊಂದಿಗೆ ಫೋಟೋಗಳನ್ನು ಸಚಿವ ಸೋಮಣ್ಣ ತಮ್ಮ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿ ಹುಟ್ಟು ಹಬ್ಬದ ಶುಭಾಷಯಗಳನ್ನು ತಿಳಿಸಿದ್ದಾರೆ. “ನಮ್ಮ ರಾಷ್ಟ್ರವನ್ನು ಸುರಕ್ಷಿತ, ಸಮೃದ್ಧ ಮತ್ತು ಘನತೆಯ ರಾಷ್ಟ್ರವನ್ನಾಗಿ ಮಾರ್ಪಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ, ಭಾರತದ ಆದರ್ಶನಾಯಕರಾದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಮುಂದಿನ ರಾಷ್ಟ್ರಕಾರ್ಯಕ್ಕೆ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
Comments are closed.