ಕರ್ನಾಟಕ

ಅಂಬಾರಿ ಹೊರುವ ಜವಾಬ್ದಾರಿ ಅರ್ಜುನನ ಬದಲು ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯುವಿನ ಪಾಲು.

Pinterest LinkedIn Tumblr

ಮೈಸೂರು: ವಿಜೃಂಭಣೆಯಿಂದ ನಡೆಯುತ್ತಿದ್ದ ಮೈಸೂರು ದಸರ ಈ ಬಾರಿ ರಾಜ್ಯ ಸರ್ಕಾರ ಸರಳವಾಗಿ ನಡೆಸಲು ನಿರ್ಧರಿಸಿದ್ದು, ಅರಣ್ಯ ಇಲಾಖೆ ಗಜಪಡೆ ಆಯ್ಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಬಿಸಲಾಗಿದ್ದು ದುಬಾರೆ ಆನೆ ಶಿಬಿರಗಳಿಗೆ ತೆರಳಿ ಆನೆಗಳ ಆರೋಗ್ಯ ಸ್ಥಿತಿ ಪರಿಶೀಲನೆ ಮಾಡಲಾಗಿದೆ.

ಆನೆ ಆಯ್ಕೆ ತಂಡ ನೇತೃತ್ವವನ್ನ ಡಿಸಿಎಫ್ ಅಲೆಕ್ಸಾಂಡರ್, ಪಶುವೈದ್ಯ ಡಾ.ಮುಜೀಬ್ ವಹಿಸಿಕೊಂಡಿದ್ದು, ಸುಪ್ರೀಂ ನಿರ್ದೇಶನದಂತೆ 60 ವರ್ಷದ ಅರ್ಜುನನಿಗೆ ಅಂಬಾರಿ ಹೊರಿಸದಿರಲು ನಿರ್ಧಾರಿಸಿದೆ. ಅದ್ರಂತೆ, ಈ ಬಾರಿ ಕೂಂಬಿಂಗ್ ಸ್ಪೆಷಲಿಸ್ಟ್ ಎಂದೇ ಹೆಸರಾಗಿರುವ ಅಭಿಮನ್ಯು ಹೆಗಲಿಗೆ ಅಂಬಾರಿ ಹೊರುವ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.

53 ವರ್ಷದ ಅಭಿಮನ್ಯು ಸಧ್ಯ ಆರೋಗ್ಯ ಸ್ಥಿತಿ ಪರಿಶೀಲನೆ ನಡೆಸಲಾಗಿದೆ. ಇನ್ನು ಪಟ್ಟದ ಆನೆ ವಿಕ್ರಮ, ಕುಮ್ಕಿ ಆನೆಗಳಾದ ವಿಜಯ, ಗೋಪಿ, ಕಾವೇರಿಯ ಆರೋಗ್ಯವನ್ನೂ ಪರೀಕ್ಷಿಸಲಾಗಿದೆ. ಈ ಬಾರಿ 5-6 ಆನೆಗಳನ್ನಷ್ಟೇ ಜಂಬೂ ಸವಾರಿಗೆ ಬಳಸಲು ನಿರ್ಧರಿಸಿದ್ದು, ಇಂದು ಆನೆಗಳ ಆಯ್ಕೆ ಪಟ್ಟಿ ಅಂತಿಮಗೊಳಿಸಲಿದೆ.

Comments are closed.