ಕರ್ನಾಟಕ

ಡ್ರಗ್ಸ್ ತಗೆದುಕೊ ಎಂದು ನಟಿ ರಾಗಿಣಿಗೆ ಬಿಜೆಪಿ ಹೇಳಿರಲಿಲ್ಲ – S T ಸೋಮಶೇಖರ್

Pinterest LinkedIn Tumblr


ಡ್ರಗ್ಸ್ ವಿಚಾರದಲ್ಲಿ ಆ ಪಕ್ಷ ಈ ಪಕ್ಷ ಅಂತ ಬರಲ್ಲ. ಯಾವ ಪಕ್ಷದವರು ತಪ್ಪು ಮಾಡಿದ್ರೂ ತಪ್ಪು ತಪ್ಪೇ. ರಾಗಿಣಿ ಬಂಧನದಿಂದ ಬಿಜೆಪಿಗೆ ಮುಜುಗರವಿಲ್ಲ ಅಂತಾ ಮೈಸೂರಿನಲ್ಲಿ ಸಚಿವ ಎಸ್​.ಟಿ.ಸೋಮಶೇಖರ್​​ ಹೇಳಿಕೆ ನೀಡಿದ್ದಾರೆ. ಬಿಜೆಪಿ ಡ್ರಗ್ಸ್ ತಗೋ ಅಂತ ನಟಿಗೆ ಹೇಳಿರಲಿಲ್ಲ. ಯಾರೆ ತಪ್ಪು ಮಾಡಿದ್ರೂ ಸರ್ಕಾರ ಕ್ರಮ ಕೈಗೊಳ್ಳುತ್ತೆ. ಡ್ರಗ್ಸ್ ಹಣದಿಂದ ಮೈತ್ರಿ ಸರ್ಕಾರ ಪತನ ಎಂಬ HDK ಆರೋಪದಲ್ಲಿ ಹುರುಳಿಲ್ಲ. ಡ್ರಗ್ ಹಣದಲ್ಲಿ ಸರ್ಕಾರ ಬೀಳಿಸುವ ಸ್ಥಿತಿ ಬಿಜೆಪಿಗೆ ಬಂದಿಲ್ಲ ಎಂದು ಎಸ್​ಟಿ ಸೋಮಶೇಖರ್ ಹೇಳಿದ್ದಾರೆ.

ಇದೇ ವೇಳೆ ಡ್ರಗ್ಸ್ ವಿಚಾರದಲ್ಲಿ ಯಾವುದೇ ಒತ್ತಡಕ್ಕೆ ಮಣಿಯಲ್ಲ. ಯಾರೇ ಇದ್ದರೂ ಕ್ರಮ ಕೈಗೊಳ್ತೇವೆ ಎಂದು ಗೃಹ ಸಚಿವ ಬಸವರಾಜ್​​ ಬೊಮ್ಮಾಯಿ ಹೇಳಿದ್ದಾರೆ. ಹೊರ ರಾಜ್ಯ ಅಷ್ಟೇ ಅಲ್ಲ. ಹೊರ ದೇಶಗಳಿಂದಲೂ ಡ್ರಗ್ಸ್ ಪೂರೈಕೆ ಆಗ್ತಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಇನ್ನು ವಸತಿ ಸಚಿವರಾದ ವಿ ಸೋಮಣ್ಣನವರು ಮಾತನಾಡಿ, ಡ್ರಗ್ಸ್​ ದಂಧೆಯಲ್ಲಿ ರಾಜಕಾರಣಿಗಳ ಮಕ್ಕಳಿದ್ದರೆ ಅವರದ್ದೂ ಹೊರಗೆ ಬರಲಿ ಯಾರೆಲ್ಲಾ ಕೆಟ್ಟ ಕೆಲಸ ಮಾಡಿದ್ದಾರೋ ‌ಅದೆಲ್ಲಾ ಹೊರ ಬರಲಿ. ಈ ಬಗ್ಗೆ ಗೃಹ ಸಚಿವರು ಸೂಕ್ತ ಕ್ರಮ‌ಕೈಗೊಳ್ತಿದ್ದಾರೆ. M.B ಪಾಟೀಲ್​​ ಕೂಡ ಗೃಹ ಸಚಿವರಾಗಿದ್ರು, ಅವರು ಈ ಬಗ್ಗೆ ಮಾಹಿತಿ ಇದ್ರೆ ಕೊಡಲಿ. ಸಿನೆಮಾ ರಂಗ ಅಷ್ಟೇ ಅಲ್ಲ.. ಯಾವುದೇ ರಂಗದಲ್ಲಿದ್ದರೂ ತಪ್ಪಿತಸ್ಥರು ಹೊರಬರಲಿ ಎಂದು ಹೇಳಿದ್ದಾರೆ.

Comments are closed.