ಕರ್ನಾಟಕ

ಡ್ರಗ್ಸ್ ಕೇಸಿನಲ್ಲಿ ಚಿರಂಜೀವಿ ಸರ್ಜಾ ಹೆಸರು ಪ್ರಸ್ತಾಪ- ಮೇಘನಾ ರಾಜ್ ಕ್ಷಮೆ ಕೇಳಿದ ಇಂದ್ರಜಿತ್ ಲಂಕೇಶ್

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದ ಚರ್ಚೆಯ ವೇಳೆ ಇತ್ತೀಚೆಗಷ್ಟೆ ನಿಧನರಾದ ನಟ ಚಿರಂಜೀವಿ ಸರ್ಜಾ ಅವರ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಇಂದ್ರಜಿತ್ ಲಂಕೇಶ್ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೋರಿದ್ದಾರೆ.

ಇಂದ್ರಜಿತ್ ಲಂಕೇಶ್ ಬಹಿರಂಗ ಕ್ಷಮೆ ಕೋರುವಂತೆ ಮೇಘನಾ ರಾಜ್ ಕರ್ನಾಟಕ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿಗೆ ಹಾಜರಾದ ಅವರು, ತಮ್ಮ ಮಾತಿನಿಂದ ಮೇಘನಾ ಕುಟುಂಬಕ್ಕೆ ನೋವಾಗಿದ್ದಲ್ಲಿ ವಿಷಾದಿಸುತ್ತೇನೆ ಎಂದರು.

ಅಕಾಲಿಕ ಸಾವಿಗೀಡಾಗಿದ್ದರಿಂದ ಸಂಶಯ ಬರುವುದು ಸಹಜ. ಪೋಸ್ಟ್ ಮಾರ್ಟಂ ಪದ ಬಳಕೆ ಮಾಡಬಾರದಿತ್ತು. ಅದನ್ನು ಹಿಂಪಡೆಯುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಚಿರಂಜೀವಿ ಸರ್ಜಾ ಓರ್ವ ಯುವನಟ, ಅವರ ಸಾವಿನಿಂದ ನೋವಾಗಿದೆ. ನಾನು ಮೊದಲಿಂದ ಯಾರ ತೇಜೋವಧೆ ಮಾಡಿಲ್ಲ. ಯಾರ ಹೆಸರನ್ನು ನೇರವಾಗಿ ಹೇಳಿಲ್ಲ. ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆಂದು ಇಂದ್ರಜಿತ್ ಇದೇ ವೇಳೆ ಹೇಳಿದ್ದಾರೆ.

Comments are closed.