ಕರ್ನಾಟಕ

ಶಾರ್ಟ್ ಸರ್ಕ್ಯೂಟ್ ನಿಂದ ಸಾವನ್ನಪ್ಪಿದ ವಿಜಯಪುರದ ಯೋಧ

Pinterest LinkedIn Tumblr

ವಿಜಯಪುರ: ಜಮ್ಮು ಮತ್ತು ಕಾಶ್ಮೀರದ ಗಡಿ ಭದ್ರತಾ ಪಡೆಯಲ್ಲಿ ಎಲೆಕ್ಟ್ರಿಕ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ವಿಜಯಪುರದ ಯೋಧ ಸಾವನ್ನಪ್ಪಿದ್ದಾರೆ.

ವಿಜಯಪುರದ ಸಮೀಪದ ಬಸರಕೋಡ ಗ್ರಾಮದ ಯೋಧ 30 ವರ್ಷ ಶಿವಾನಂದ ಜಗನ್ನಾಥ ಬಡಿಗೇರ ಅವರು ಶಾರ್ಟ್ ಸರ್ಕ್ಯೂಟ್ ನಿಂದ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಜಗನ್ನಾಥ ಬಡಿಗೇರ ಅವರು 9 ವರ್ಷಗಳ ಹಿಂದೆ ಬಿಎಸ್ಎಫ್ ಗೆ ಸೇರಿದ್ದರು. ಇನ್ನು ಕಳೆದ ವರ್ಷವಷ್ಟೆ ತಾಳಿಕೋಟೆ ತಾಲೂಕಿನ ತುಂಬಗಿಯ ಪುಷ್ಪಾ ಅವರನ್ನು ವಿವಾಹವಾಗಿದ್ದರು.

ಜಗನ್ನಾಥ ಬಡಿಗೇರ ಸಾವಿನ ಸುದ್ಧಿ ಕೇಳಿ ಕುಟಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Comments are closed.