
ಕೊಡಗು: ರಾಷ್ಟ್ರೀಯ ಪ್ರಾಣಿ ಹುಲಿಯನ್ನೇ ಕೊಂದ ದುಷ್ಕರ್ಮಿಗಳು ಉಗುರಿಗಾಗಿ ಅದರ ಕಾಲು ಕತ್ತರಿಸಿದ ಅಮಾನವೀಯ ಘಟನೆ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಕಲ್ಲಹಳ್ಳದಲ್ಲಿ ಬೆಳಕಿಗೆ ಬಂದಿದೆ.
ಹುಲಿ ಹತ್ಯೆಕೋರರ ಪತ್ತೆಗಾಗಿ ಶೋಧ ಕಾರ್ಯಕ್ಕೆ ಬಂಡೀಪುರದಿಂದ ಶ್ವಾನದಳದ ರಾಣನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಿರಾಜಪೇಟೆಯ ಬಾಳೆಲೆ ಗ್ರಾಮಕ್ಕೆ ಕರೆತಂದಿದ್ದರು. ಮಲಯಾಳಿ ಸಂತೋಷ್ ಮನೆಗೆ ನುಗ್ಗಿದ ರಾಣಾನಿಂದ ಅಲ್ಲಿದ್ದ ಒಂದೂವರೆ ಕೆಜಿ ಜಿಂಕೆ ಮಾಂಸ ಪತ್ತೆಯಾಯ್ತು. ಆರೋಪಿ ಸಂತೋಷ್ನನ್ನು ಪೊಲೀಸರು ಬಂಧಿಸಿದರು. ನಂತರ ಸಂತೋಷ್ನ ಸಹಚರರಾದ ಹೊಟ್ಟೆಂಗಡ ರಂಜು, ಕಾಂಡೇರ ಶಶಿ, ಕಾಂಡೇರ ಶರಣು ಮನೆ ಬಳಿಯೂ ಹೋದ ರಾಣಾ, ಆ ಮನೆಯಲ್ಲಿ ದುಷ್ಕರ್ಮಿಗಳು ಬಚ್ಚಿಟ್ಟಿದ್ದ ಹುಲಿಯ ಪಂಜ, ಕಾಡತೂಸುಗಳನ್ನೂ ಪತ್ತೆ ಮಾಡಿತು.
ಹುಲಿ ಕೊಂದು ಅದ ಪಂಜ ಬಚ್ಚಿಟ್ಟಿದ್ದ ಮೂವರು ದುಷ್ಕರ್ಮಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ರಾಣಾ ಜಾಣ್ಮೆಯನ್ನು ಬಾಳೆಲೆ ಗ್ರಾಮಸ್ಥರು ಶ್ಲಾಘಿಸಿದ್ದಾರೆ. ತಮ್ಮೂರಿಗೆ ಕಪ್ಚುಚುಕ್ಕೆಯಾದ ಪ್ರಕರಣದಲ್ಲಿ ಪಾಲ್ಗೊಂಡ ಮೂವರು ಆರೋಪಿಗಳನ್ನು ಬಂಧಿಸಿ ಶಿಕ್ಷಿಸುವಂತೆ ಜಿಪಂ ಮಾಜಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಒತ್ತಾಯಿಸಿದ್ದಾರೆ.
Comments are closed.