
ಚಾಮರಾಜನಗರ: ಬಿಗ್ಬಾಸ್ ವಿಜೇತ ಹಾಗೂ ರ‍್ಯಾಪರ್ ಚಂದನ್ ಶೆಟ್ಟಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈ ಬಾರಿ ಅವರು ಮಲೆ ಮಹದೇಶ್ವರ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮೊನ್ನೆಯಷ್ಟೇ “ಕೋಲು ಮಂಡೆ ಜಂಗಮ ದೇವರು” ಎಂಬ ಹೊಸ ರ‍್ಯಾಪ್ ಸಾಂಗ್ ಅನ್ನು ಚಂದನ್ ಶೆಟ್ಟಿ ಬಿಡುಗಡೆ ಮಾಡಿದ್ದರು. ಇದೀಗ ಮಾದಪ್ಪನ ಗೀತೆಯನ್ನು ಅಶ್ಲೀಲವಾಗಿ ತೋರಿಸಿರುವ ಆರೋಪ ಚಂದನ್ ಶೆಟ್ಟಿ ವಿರುದ್ಧ ಕೇಳಿಬಂದಿದೆ.
ಇದೇ ತಿಂಗಳ 22 ರಂದ ಯೂಟ್ಯೂಬ್‌ನಲ್ಲಿ ಸಾಂಗ್ ಬಿಡುಗಡೆಯಾಗಿದೆ. ಶಿವಶರಣೆ ಸಂಕಮ್ಮನ ಬಗ್ಗೆ ಅಶ್ಲೀಲ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಶ್ರೀ ಮಲೆ ಮಹದೇಶ್ವರ ಸ್ವಾಮಿ ಗ್ರೂಪ್‌ನಲ್ಲಿ ಚಾಮರಾಜನಗರ ಜಿಲ್ಲೆಯ ಹಲವು ಯುವಕರು ಚಂದನ್ ವಿರುದ್ಧ ಕಿಡಿಕಾರಿದ್ದಾರೆ. ಈ ಹಿಂದೆ ಯುವ ದಸರಾ ವೇದಿಕೆಯಲ್ಲಿ ಎಂಗೇಜ್‌ಮೆಂಟ್ ಆಗಿದ್ದ ಚಂದನ್. ಇದರಿಂದ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಹೀಗಾಗಲೇ ಯುವ ದಸರಾ ವೇದಿಕೆಯಿಂದ ಚಂದನ್ ಬ್ಯಾನ್ ಆಗಿದ್ದಾರೆ. ಇದೀಗ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದು ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
Comments are closed.