ಕರ್ನಾಟಕ

ಪರಿಸರಸ್ನೇಹಿ ಗಣೇಶ ಮೂರ್ತಿ ತಯಾರಿಕೆಯಲ್ಲಿ ರಾಯಚೂರಿನ ವೃದ್ಧ

Pinterest LinkedIn Tumblr


ರಾಯಚೂರು(ಆ.21): ಕೊರೋನಾ ಆತಂಕದ ಮಧ್ಯೆ ಗಣೇಶ ಹಬ್ಬ ಬಂದಿದೆ. ಗಣೇಶ ಹಬ್ಬದಲ್ಲಿ ಪರಿಸರ‌ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸೂಚಿಸಲಾಗುತ್ತಿದೆ. ಆದರೆ ಪ್ರತಿಷ್ಠಾಪಿಸಿದ್ದು ಕಡಿಮೆ, ಮನೆಗಳಲ್ಲಿ‌ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳು ಮಾತ್ರ ಮಣ್ಣಿನ‌ ಗಣೇಶ ಮೂರ್ತಿಗಳಾಗುತ್ತಿವೆ. ಇಂತಹ ಪರಿಸರ ಸ್ನೇಹಿ ಗಣೇಶನ‌ ಮೂರ್ತಿಗಳನ್ನು ಇಲ್ಲಿ ವೃದ್ದರು ತಯಾರಿಸಿ ಆಪ್ತರಿಗೆ ನೀಡುತ್ತಾರೆ. 25 ವರ್ಷದಿಂದ‌ ಇವರ ಗಣೇಶನ ಮೂರ್ತಿ ತಯಾರಿಕೆ ಮಾಡುತ್ತಿದ್ದಾರೆ.

ರಾಯಚೂರಿನಲ್ಲಿಯ ಆನಂದ ಕುಲಕರ್ಣಿ ಪೋರಬಂದರು ಮಣ್ಣಿನಿಂದ‌ ಗಣೇಶನ ಮೂರ್ತಿ ತಯಾರಿಸುತ್ತಾರೆ. ಇವರು ರಾಯಚೂರು ನಗರದ ಅಜಾದ ನಗರದಲ್ಲಿದ್ದಾರೆ. ಕಳೆದ 25 ವರ್ಷದಿಂದ ಗಣೇಶ ಹಬ್ಬದ‌ ಮುನ್ನ ಪರಿಸರ ಸ್ನೇಹಿ ಗಣೇಶನನ್ನು ತಯಾರಿಸುತ್ತಾರೆ. ಅದೇ ರೀತಿ ಈ ವರ್ಷವೂ 33 ವಿವಿಧ ಬಗೆಯ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ. ಅದರಲ್ಲಿ ಲಿಂಗವನ್ನು ಪೂಜಿಸುವ ಗಣೇಶ, ನಂದಿಯ ಮೇಲೆಯ ಗಣೇಶ, ಹೀಗೆ ಹಲವು ಆಕಾರದ ಗಣೇಶನ‌ ಮೂರ್ತಿಗಳನ್ನು ತಯಾರಿಸಿದ್ದಾರೆ. ಇವರು ತಯಾರಿಸುವ ಗಣೇಶ ಮೂರ್ತಿಗಳಿಗೆ ರಸಾಯನಿಕ‌ ಮುಕ್ತವಾಗಿದ್ದು ವಾಟರ ಕಲರ್ ನಿಂದ ಗಣೇಶನಿಗೆ ಬಣ್ಣ ಹಚ್ಚಿರುತ್ತಾರೆ. ಈ ಗಣೇಶ ಮೂರ್ತಿಗಳು ಪೂಜೆಯ ನಂತರ ನೀರಿನಲ್ಲಿ ಕರಗುತ್ತವೆ.

ಆನಂದ ಕುಲಕರ್ಣಿ ಮೂಲತಃ ಹಾವೇರಿ ಜಿಲ್ಲೆಯ ಕದರಮಂಡಲಿಯವರು, ಅವರು ಬಾಲ್ಯದಲ್ಲಿ ಅವರ ಸ್ನೇಹಿತರು ಗಣೇಶ ಮೂರ್ತಿಗಳನ್ನು ತಯಾರಿಸುವುದನ್ನು ನೋಡಿ ಕಲಿತಿದ್ದಾರೆ. ರಾಯಚೂರಿಗೆ 2976ರಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿ ಬಂದು ಇಲ್ಲಿಯೇ ನೆಲೆಸಿದ್ದಾರೆ. ಮೊದಲು ತಮ್ಮ ಮನೆಗೆ ಮಾತ್ರ ಗಣೇಶ ಮೂರ್ತಿ ತಯಾರಿಸುತ್ತಿದ್ದವರು, ಈಗ ತಮ್ಮ ಆಪ್ತರಿಗಾಗಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ.

ಈ ಇಳಿವಯಸ್ಸಿನಲ್ಲಿ ಗಣೇಶ ಮೂರ್ತಿ ತಯಾರಿಸುತ್ತಿರುವ ಆನಂದ ಕುಲಕರ್ಣಿಯವರು ತಮ್ಮಲ್ಲಿ ತಯಾರಾದ ಗಣೇಶ ಮೂರ್ತಿಗಳನ್ನು ತಮ್ಮ ಆಪ್ತರಿಗೆ ಉಚಿತವಾಗಿ ನೀಡುತ್ತಾರೆ. ಇವರು ಗಣೇಶ ಮೂರ್ತಿ ತಯಾರಿಕೆಯಲ್ಲಿದ್ದಾಗ ಅವುಗಳಿಗೆ ಸುಂದರ ರೂಪಕೊಡಲು ಅವರ ಪತ್ನಿ ಸಲಹೆ ನೀಡಿ, ಗಣೇಶ ಹಬ್ಬದಲ್ಲಿ ಪತಿಗೆ ಸಹಕಾರಿಯಾಗುತ್ತಾರೆ. ಪರಿಸರ ಸ್ನೇಹಿ ಗಣೇಶನ ಮೂರ್ತಿಗಳು ಮಾಯವಾಗುತ್ತಿರುವಾಗ ವೃದ್ದರೊಬ್ಬರ ಸುಂದರವಾದ ಗಣೇಶ ಮೂರ್ತಿ ತಯಾರಿಸುತ್ತಿರುವುದು ಗಮನಾರ್ಹವಾಗಿದೆ.

Comments are closed.