ಕರ್ನಾಟಕ

ಸಂಸದ ಡಾ.ಉಮೇಶ್ ಜಾಧವ್ ಹಾಗೂ ಪುತ್ರ ಶಾಸಕ ಡಾ. ಅವಿನಾಶ್ ಜಾಧವ್’ಗೆ ಕೊರೊನಾ

Pinterest LinkedIn Tumblr

ಕಲಬುರಗಿ: ಕಲಬುರಗಿಯಲ್ಲಿ ಕೊರೊನಾ ತಾಂಡವವಾಡುತ್ತಿದ್ದು, ಇದೀಗ ಸಂಸದ ಡಾ.ಉಮೇಶ್ ಜಾಧವ್ ಹಾಗೂ ಅವರ ಪುತ್ರ ಶಾಸಕ ಡಾ. ಅವಿನಾಶ್ ಜಾಧವ್ ಅವರಿಗೂ ಕೊರೊನಾ ವಕ್ಕರಿಸಿದೆ.

ಕಲಬುರಗಿ ಸಂಸದ ಡಾ. ಉಮೇಶ ಜಾಧವ್ ಹಾಗೂ ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ್ ಉಭಯ ನಾಯಕರಿಗೆ ಬುಧವಾರ ಸಂಜೆ 4 ಗಂಟೆಗೆ ಕೊರೊನಾ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

ಬೆಂಗಳೂರಿನಲ್ಲಿರುವ ಅವರು ಖಾಸಗಿ ಆಸ್ಪತ್ರೆಯತ್ತ ಮುಖಮಾಡದೇ ತಕ್ಷಣವೇ ಬೆಂಗಳೂರಿನ ಸರ್ಕಾರಿ ಬೌರಿಂಗ್ ಆಸ್ಪತ್ರೆಗೆ ದಾಖಲಾಗುವ ಮೂಲಕ ಮಾದರಿಯಾಗಿದ್ದಾರೆ.

ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿರುವ ಡಾ. ಜಾಧವ್, ಈಗಾಗಲೇ ತಮ್ಮ ಜತೆ ಇದ್ದ 40ಕ್ಕೂ ಹೆಚ್ಚು ಜನರ ತಪಾಸಣೆ ಮಾಡಿಸಿದ್ದಾರೆ. ಸಂಸದ ಡಾ. ಉಮೇಶ್‌ ಜಾಧವ್‌ ಸಂಸದರಾಗಿದ್ದು, ಪುತ್ರ ಅವಿನಾಶ್‌ ಚಿಂಚೋಳಿ ಶಾಸಕರಾಗಿದ್ದಾರೆ. ಇಬ್ಬರೂ ವೈದ್ಯರಾಗಿದ್ದಾರೆ.

Comments are closed.