
ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅರುಣ್ ರಾಜ್ ಬಂಧನ ಪ್ರಕ್ರಿಯೆಯನ್ನು ಬೆಂಗಳೂರು ಪೊಲೀಸರು ಇಂದು ಪೂರ್ಣ ಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಗಲಭೆಕೋರರ ಜೊತೆ ಅರುಣ್ ರಾಜ್ ನೇರ ಸಂಪರ್ಕದಲ್ಲಿ ಭಾಗಿಯಾಗಿರುವ ಕುರಿತು ಪೊಲೀಸರಿಗೆ ಪ್ರಭಲ ಸಾಕ್ಷಿ ಸಿಕ್ಕ ಹಿನ್ನಲೆ ಆತನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಸಿಸಿಬಿ ತಾಂತ್ರಿಕ ವಿಭಾಗ ಟೆಕ್ನಿಕಲ್ ಎವಿಡೆನ್ಸ್ ಗಳನ್ನು ಕಲೆ ಹಾಕಿದೆ ಎನ್ನಲಾಗುತ್ತಿದೆ.
ಡಿಜೆ ಹಳ್ಳಿಯಲ್ಲಿ ಗಲಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಅರುಣ್ ರಾಜ್ ಗಲಭೆಕೋರರ ಜೊತೆ ಪೋನ್ ನಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ. ಹೀಗಾಗಿ ನೆನ್ನೆ ಮುಂಜಾನೆ ಅರುಣ್ ರಾಜ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದರು, ಅಲ್ಲದೆ, ಆತನ ಲ್ಯಾಪ್‌ಟಾಪ್, ಮೊಬೈಲ್, ಟ್ಯಾಬ್ ಸೇರಿದಂತೆ ಅನೇಕ ವಸ್ತುಗಳನ್ನು ಸಿಸಿಬಿ ಪೊಲೀಸರು ಸೀಜ್ ಮಾಡಿದ್ದರು. ಆರೋಪಿ ಅರುಣ್‌ನನ್ನು ತನಿಖಾ ತಂಡ ನಾಳೆ ಕೋರ್ಟ್‌ಗೆ ಹಾಜರುಪಡಿಸಲಿದೆ ಎನ್ನಲಾಗುತ್ತಿದೆ.
ಆರೋಪಿ ನವೀನ್ ಮಹಮ್ಮದ್ ಪೈಂಗಬರ್ ವಿರುದ್ಧ ಅಶ್ಲೀಲಕರವಾದ ಪೋಸ್ಟ್ ಒಂದನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದರು. ಇದು ಸಾಮಾನ್ಯವಾಗಿ ಮುಸ್ಲಿಂ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಆರೋಪಿ ನವೀನ್ ಮತ್ತು ಆತನ ಸಂಬಂಧಿ ಹಾಗೂ ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲೆ ಕಳೆದ ಆಗಸ್ಟ್ 11 ಮಂಗಳವಾರ ತಡರಾತ್ರಿ ಕೆಲ ಆಗಂತುಕರ ತಂಡ ದಾಳಿ ಮಾಡಿತ್ತು.
ಈ ದಾಳಿಯಲ್ಲಿ ಅಖಂಡ ಶ್ರೀನಿವಾಸ್ ಮನೆ ಮತ್ತು ಕಚೇರಿಗೆ ಬೆಂಕಿ ಹಚ್ಚಲಾಗಿತ್ತು. ಬೆಂಕಿಯ ಕೆನ್ನಾಲಗೆಗೆ ಶಾಸಕಕ ಮನೆ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಇದಲ್ಲದೆ ಗಲಭೆಕೋರರು ಅಪಾರ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದರು. ಈ ಗಲಭೆಯಲ್ಲಿ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿತ್ತು.
ಒಂದು ಹಂತದಲ್ಲಿ ಗಲಭೆ ಕೈಮೀರಿ ಹೋಗುವ ಎಲ್ಲಾ ಲಕ್ಷಣಗಳು ಗೋಚರಿಸಿತ್ತು. ಹೀಗಾಗಿ ಹೆಚ್ಚುವರಿ ಕೆಎಸ್‌ಆರ್‌ಪಿ ತಂಡವನ್ನು ಕರೆಸಿ ಶಾಸಕರ ಮನೆಗೆ ರಕ್ಷಣೆ ನೀಡಲಾಗಿತ್ತು. ಅಲ್ಲದೆ, ಗಲಭೆ ನಿಯಂತ್ರಿಸುವ ಸಲುವಾಗಿ ನಡೆಸಲಾಗಿದ್ದು ಗೋಲಿಬಾರ್‌ನಲ್ಲಿ ನಾಲ್ಕು ಜನ ಮೃತಪಟ್ಟಿದ್ದರು. ಇದೀಗ ಗಲಭೆ ಹತೋಟಿಗೆ ಬಂಧಿದ್ದು, ಗಲಭೆ ಸಂಬಂಧ 200ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 12ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ.
Comments are closed.